Saturday, September 23, 2023
Homeಇದೀಗ ಬಂದ ಸುದ್ದಿನಟ ವಿಜಯ್ ಆಂಟೋನಿ ಪುತ್ರಿ ಆತ್ಮಹತ್ಯೆ

ನಟ ವಿಜಯ್ ಆಂಟೋನಿ ಪುತ್ರಿ ಆತ್ಮಹತ್ಯೆ

- Advertisement -

ಚೆನ್ನೈ,ಸೆ.19-ತಮಿಳುನಾಡಿ ಖ್ಯಾತ ನಟ ಹಾಗೂ ಸಂಗೀತ ನಿರ್ದೇಶಕ ವಿಜಯ್ ಆಂಟೋನಿ ಅವರ ಪುತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚೆನ್ನೈನ ಖಾಸಗಿ ಶಾಲೆಯಲ್ಲಿ 12ನೇ ತರಗತಿ ಓದುತ್ತಿದ್ದ ಮೀರಾ ಮಾನಸಿಕ ಒತ್ತಡದಿಂದ ನರಳುತ್ತಿದ್ದರು ಎನ್ನಲಾಗಿದ್ದು, ಈ ಕಾರಣದಿಂದಲೇ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ಇಂದು ಮುಂಜಾನೆ ಚೆನ್ನೈನ ತೆನಾಂಪೇಟೆಯಲ್ಲಿರುವ ತನ್ನ ನಿವಾಸದಲ್ಲಿ ಮೀರಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಯನ್ನು ಮೈಲಾಪುರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.

- Advertisement -

ವಿನೂತನ ಶೈಲಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಧಾನಿ ಮೋದಿ

ನಟ ವಿಜಯ್ ಆಂಟೋನಿ ಪಾತಿಮಾ ಅವರನ್ನು ವಿವಾಹವಾಗಿದ್ದಾರೆ ಮತ್ತು ಮೀರಾ ಅವರ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬರು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

actor, #VijayAntony, #daughter, #Meera, #dead,

- Advertisement -
RELATED ARTICLES
- Advertisment -

Most Popular