ಬಾಲಿವುಡ್ ಹಿರಿಯ ನಟ ವಿಕ್ರಂ ಗೋಖಲೆ ನಿಧನ

Social Share

ಪುಣೆ,ನ.24-ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮರಾಠಿ ಹಾಗೂ ಬಾಲಿವುಡ್ ಲೋಕದ ಹಿರಿಯ ನಟ ವಿಕ್ರಂ ಗೋಖಲೆನಿಧನರಾಗಿದ್ದಾರೆ. ಹೆಸರಾಂತ ಮರಾಠಿ ರಂಗಭೂಮಿ ಹಾಗೂ ಸಿನಿಮಾನಟ ವಿಕ್ರಂ ಗೋಖಲೆ ಅವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಚಿಕಿತ್ಸೆಗಾಗಿ ದೀನನಾಥ್ ಮಂಗೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಇವರು ಹಿರಿತೆರೆ ಮಾತ್ರವಲ್ಲದೆ ಹಲವು ನಾಟಕಗಳಲ್ಲಿ ಕೂಡ ಅಭಿನಯಿಸಿದ್ದರು.

ಸಂಜಯ್ ಲೀಲಾ ಬನ್ಸಾಲಿ ಅವರ ಹಮ್ ದಿಲ್‍ದೇ ಚುಕೆ ಸನಮ್ ಚಿತ್ರದಲ್ಲಿ ಐಶ್ವರ್ಯ ಅವರ ತಂದೆ ಪಾತ್ರದಲ್ಲಿ ಅಭಿನಯಿಸಿದ್ದರು. ಕಮಲಹಾಸನ್ ಅಭಿನಯದ ಹೇ ರಾಮ್, ಬುಲ್ ಬುಲಾಯ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿ ಅಪಾರ ಮೆಚ್ಚುಗೆ ಪಾತ್ರರಾಗಿದ್ದರು.

ಹೆಚ್‌ಡಿಕೆ ಅಡ್ಡಗಟ್ಟಿ ಶಾಲೆಗೆ ಕರೆದೊಯ್ದ ಮಕ್ಕಳು

2010ರಲ್ಲಿ ಮರಾಠಿ ಸಿನಿಮಾ ಅಘಾತದ ಮೂಲಕ ಸಿನಿಮಾ ರಂಗ ಪ್ರವೇಶಿಸಿದ್ದರು. ಮರಾಠಿ ಚಲನಚಿತ್ರ ಅನುಮತಿಯಲ್ಲಿ ವಿಶಿಷ್ಟ ಅಭಿನಯನಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. ರಂಗಭೂಮಿ ಸಾಧನೆಗಾಗಿ 2011ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿತ್ತು.

ಸಿದ್ದು ಪಟಾಲಂನಿಂದ 400 ಕೋಟಿ ರೂ. ಆಸ್ತಿ ಲೂಟಿ : N.R.ರಮೇಶ್

Actor, Vikram Gokhale, passes, away, 82,

Articles You Might Like

Share This Article