ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಸಿಂಹ-ಪ್ರಿಯ’

Social Share

ಮೈಸೂರು, ಜ. 26- ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಮದುವೆ ಸಂಭ್ರಮ ಮನೆ ಮಾಡಿದೆ. ಇತ್ತೀಚೆಗೆ ಆದಿತಿಪ್ರಭುದೇವ ಅವರು ಸಪ್ತಪದಿ ತುಳಿದಿದ್ದರೆ, ಇಂದು ನಟ ವಶಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರೂ ಕೂಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಚಂದನವನದ ತೆರೆಯ ಮೇಲೆ ಜೋಡಿಗಳಾಗಿ ಗಮನ ಸೆಳೆದಿದ್ದ ಹಲವು ತಾರೆಯರು ನಿಜ ಜೀವನದಲ್ಲೂ ದಂಪತಿಗಳಾಗಿದ್ದು, ಈಗ ಆ ಸಾಲಿಗೆ `ಸಿಂಹ ಪ್ರಿಯ’ ಜೋಡಿಯು ಸೇರಿಕೊಂಡಿದೆ. ವಸಿಷ್ಠ ಸಿಂಹ ಅವರು ಮೈಸೂರಿನವರಾಗಿರುವುದರಿಂದ ತಮ್ಮ ಮದುವೆ ಸಮಾರಂಭವನ್ನು ಅರಮನೆ ನಗರಿಯಲ್ಲೇ ಹಮ್ಮಿಕೊಂಡಿದ್ದರು.

ಶ್ರೀ ಗಣಪತಿ ಸಚ್ಚಿದಾನಂದ ಮಠದಲ್ಲಿ ಇಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಅವರು ಸಪ್ತಪದಿ ತುಳಿದಿದ್ದಾರೆ.
ನಿನ್ನೆಯಷ್ಟೇ ತಮ್ಮ ಮದುವೆಯ ಹರಿಶಿಣದ ಶಾಸ್ತ್ರದ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದ ಹರಿಪ್ರಿಯಾ ಅವರು ತಮ್ಮ ವಿವಾಹದ ಫೋಟೋಗಳನ್ನು ಹಂಚಿಕೊಂಡು ಸಂತಸ ಪಟ್ಟಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಾಕಾರಗೊಳಿಸೋಣ : ಪ್ರಧಾನಿ ಮೋದಿ

ಹರಿಪ್ರಿಯ ಹಾಗೂ ವಸಿಷ್ಠ ಸಿಂಹರ ವಿವಾಹದಲ್ಲಿ ಎರಡು ಕುಟುಂಬದವರು, ಆಪ್ತೇಷ್ಟರು ಹಾಗೂ ಸ್ನೇಹಿತರು ಮಾತ್ರ ಪಾಲ್ಗೊಂಡು ನೂತನ ವಧು-ವರರ ಜೀವನ ಸುಖಕರವಾಗಿರಲೆಂದು ಹಾರೈಸಿದ್ದಾರೆ.

ಜನವರಿ 28 ರಂದು ಶನಿವಾರ ಬೆಂಗಳೂರಿನಲ್ಲಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದು ಸ್ಯಾಂಡಲ್‍ವುಡ್‍ನ ಕಲಾವಿದರು ಹಾಗೂ ತಂತ್ರಜ್ಞರು ಪಾಲ್ಗೊಂಡು ನೂತನ ವಧು-ವರರನ್ನು ಹಾರೈಸಲಿದ್ದಾರೆ.

ಬದಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ಹರಿಪ್ರಿಯಾ ಬೆಲ್ ಬಾಟಂ, ರಿಕ್ಕಿ, ಭಲೇ ಜೋಡಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದು ಬೆಲ್ ಬಾಟಂ 2, ಹ್ಯಾಪಿ ಎಂಡಿಂಗ್ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆ ಆಗಬೇಕಿದೆ.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ದೇಶದ ಮೊದಲ ರಾಜ್ಯ ಕರ್ನಾಟಕ

ರಾಜಹುಲಿ ಚಿತ್ರದಿಂದ ಲೈಮ್ ಲೈಟ್‍ಗೆ ಬಂದ ವಸಿಷ್ಟ ಸಿಂಹ ಮಫ್ತಿ, ಟಗರು ಮುಂತಾದ ಚಿತ್ರದಲ್ಲಿ ನಟಿಸಿದ್ದು, ಕಾಲಚಕ್ರ, ಪಂಟ ಸಿನಿಮಾ ಬಿಡುಗಡೆ ಆಗಬೇಕಿದೆ.

Actors, Vasishta Simha, Haripriya, marriage, Mysuru,

Articles You Might Like

Share This Article