ಬೆಂಗಳೂರು, ಮಾ.1- ಮಹಾಶಿವರಾತ್ರಿ ಹಬ್ಬದಂದು ಸ್ಯಾಂಡಲ್‍ವುಡ್‍ನ ಗೋಲ್ಡನ್ ಕ್ವೀನ್ ಅಮೂಲ್ಯ ಮನೆಯಲ್ಲಿ ಡಬ್ಬಲ್ ಸಂಭ್ರಮ ಮನೆ ಮಾಡಿದೆ.ಹಬ್ಬದ ಸಡಗರದ ಬೆನ್ನಲ್ಲೇ ನಟಿ ಅಮೂಲ್ಯ ಅವರು ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡುವ ಮೂಲಕ ನಮ್ಮ ಮನೆಯಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸಿದ್ದಾರೆ ಎಂದು ಪತಿ ಜಗದೀಶ್ ಅವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ತಿಳಿಸಿರುವ ಜಗದೀಶ್ ಅವರು ಇಂದು ಬೆಳಗ್ಗೆ 11.45ರಲ್ಲಿ ನನ್ನ ಪತ್ನಿ ಹಾಗೂ ನಟಿ ಅಮೂಲ್ಯ ಅವರು ಅವಳಿ ಜವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪಯಣದಲ್ಲಿ ತಮ್ಮೊಂದಿಗೆ ನಿಂತಿದ್ದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಜಗದೀಶ್ ಹಾಗೂ ಅಮೂಲ್ಯ ದಂಪತಿಗೆ ಸ್ಯಾಂಡಲ್‍ವುಡ್‍ನ ಕಲಾವಿದರು ಹಾಗೂ ತಂತ್ರಜ್ಞರು ಶುಭ ಕೋರಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಜಗದೀಶ್ ಮನೆಯಲ್ಲಿ ಅಮೂಲ್ಯಳ ಸೀಮಂತ ನಡೆದಿದ್ದು ಆ ಸಂಭ್ರಮದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.
ಪರ್ವ, ಚಂದು, ಲಾಲಿಹಾಡು ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದ ಅಮೂಲ್ಯ ಚೆಲುವಿನ ಚಿತ್ತಾರದ ಮೂಲಕ ನಟಿಯಾಗಿ, ನಂತರ ಚೈತ್ರದ ಚಂದ್ರಮ, ಪ್ರೇಮಾಸ್ಮಿ, ಮನಸೋಲಾಜಿ, ಶ್ರಾವಣಿ ಸುಬ್ರಹ್ಮಣ್ಯ, ಗಜಕೇಸರಿ, ರಾಮಲೀಲಾ, ಮಾಸ್ತಿ ಗುಡಿ ಮುಂತಾದ ಚಿತ್ರಗಳಲ್ಲಿ ಅಮೂಲ್ಯ ನಟಿಸಿದ್ದಾರೆ.
