ವಿಧಾನಪರಿಷತ್‍ನಲ್ಲಿ ನಟಿ ಭಾರ್ಗವಿ ನಾರಾಯಣ್ ಅವರಿಗೆ ಶ್ರದ್ದಾಂಜಲಿ

Social Share

ಬೆಂಗಳೂರು,ಫೆ.15- ರಂಗಭೂಮಿ ಹಿರಿಯ ಕಲಾವಿದೆ ಹಾಗೂ ನಟಿ ಭಾರ್ಗವಿ ನಾರಾಯಣ್ ಅವರ ನೀಧನಕ್ಕೆ ವಿಧಾನಪರಿಷತ್‍ನಲ್ಲಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಲಾಯಿತು. ಕಲಾಪ ಆರಂಭದಲ್ಲೇ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಂತಾಪ ಸೂಚನಾ ನಿರ್ಣಯ ಮಂಡಿಸಿ, 1938 ಫೆ.4ರಂದು ಜನಿಸಿದ ಭಾರ್ಗವಿ ನಾರಾಯಣ ಅವರು,
ಇಂಗ್ಲೀಷ್ ಎಂಎ ಸ್ನಾತಕೋತ್ತರ ಪದವಿ ಪಡೆದಿದ್ದರು.ರಂಗಭೂಮಿ ಕಲಾವಿದರಾಗಿದ್ದಾಗಲೇ ಮೇಕಪ್ ನಾಣಿ ಎಂದೇ ಹೆಸರಾಗಿದ್ದ ಬೆಳವಾಡಿ ನಂಜುಂಡಯ್ಯ ನಾರಾಯಣ ಅವರನ್ನು ಮದುವೆಯಾದರು. 60ರ ದಶಕದಲ್ಲಿ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಪ್ರೊಫೆಸರ್ ಹುಚ್ಚರಾಯ ಚಿತ್ರದಲ್ಲಿನ ನಟನೆಗೆ 1974ರಲ್ಲಿ ಅತ್ಯುತ್ತಮ ಪೋಷಕನಟಿಯಾಗಿ ಪ್ರಶಸ್ತಿ ಪಡೆದಿದ್ದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ನಾನು ಭಾರ್ಗವಿ ಎಂಬ ಆತ್ಮ ಕಥನಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ನಿನ್ನೆ ಭಾರ್ಗವಿಯವರು ನಿಧನರಾಗಿದ್ದು, ಸಾಂಸ್ಕøತಿಕ ನಾಡು ಹಿರಿಯ ಕಲಾವಿದೆಯನ್ನು ಕಳೆದುಕೊಂಡಂತಾಗಿದೆ ಎಂದು ಸಭಾಪತಿ ಸಂತಾಪ ಸೂಚಿಸಿದರು.
ಸಭಾನಾಯಕ ಕೋಟಾ ಶ್ರೀನಿವಾಸ್ ಪೂಜಾರಿ, ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿ, ಹಿರಿಯ ಕಲಾವಿದೆ ಅಗಲುವಿಕೆಯಿಂದ ತುಂಬಲಾರದ ನಷ್ಟವಾಗಿದೆ ಎಂದು ಹೇಳಿದರು.
ಮೌನಾಚರಣೆ ಮೂಲಕ ಸದನ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸಿತು.

Articles You Might Like

Share This Article