ನಿತ್ಯಾನಂದನಿಗೆ ಮನಸೋತ ಪ್ರಿಯಾ ಆನಂದ್..!​​

Social Share

ಅಪ್ಪು ಅಭಿನಯದ ರಾಜಕುಮಾರ, ಜೇಮ್ಸ್​​ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚಿದ್ದ ಪ್ರಿಯಾ ಆನಂದ್​​ ವಿವಾದಿತ ಹೇಳಿಕೆಯಿಂದ ಸಖತ್​ ಸುದ್ದಿಯಲ್ಲಿದ್ದಾರೆ.

ಜೇಮ್ಸ್​​ ಚಿತ್ರದ ನಾಯಕಿ ಸದ್ಯ ಪ್ರಿಯಾ ಆನಂದ್​ ವಿವಾದಿತ ಹೇಳಿಕೆಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇವ್ರ ಹೆಸರು ದೇಶ ಬಿಟ್ಟು ಪರಾರಿಯಾಗಿರೋ ಕೈಲಾಸವಾಸಿ, ಅಘೋಷಿತ ದೇವಮಾನವ ನಿತ್ಯಾನಂದ ಅವರ ಜತೆ ತಳುಕು ಹಾಕಿಕೊಂಡಿದೆ.

ಇತ್ತೀಚೆಗೆ ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ನಾನು ನಿತ್ಯಾನಂದ ಅವರನ್ನು ಮದ್ವೆ ಆಗಲು ಬಯಸಿದ್ದೇನೆ ಎಂದಿದ್ದರಂತೆ. ಈ ಸುದ್ದಿ ಕೇಳಿ ಅಭಿಮಾನಿಗಳು ಶಾಕ್​ ಆಗಿದ್ದಾರೆ.

ವಿಲಾಸಪ್ರಿಯ, ರಾಸಲೀಲೆಯಲ್ಲಿ ಸಿಲುಕಿ ದೇಶ ಬಿಟ್ಟು ಪರಾರಿಯಾಗಿ ತನ್ನದೇ ಸಾಮ್ರಾಜ್ಯಕ್ಕೆ ಕೈಲಾಸ ಎಂಬ ಹೆಸರಿಟ್ಟು ದೇವಮಾನವನಾಗಿ ಮೆರೆಯುತ್ತಿರುವ ಸನ್ಯಾಸಿಯೇ ಸ್ವಾಮಿ ನಿತ್ಯಾನಂದ. ಇದೀಗ ಪ್ರಿಯಾ ಅನಂದ್​ಗೂ, ಸ್ವಾಮಿ ನಿತ್ಯಾನಂದನಿಗೂ ಏನು ಸಂಬಂಧ ಅಂತಾ ಕೇಳಬೇಡಿ.

ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡ್ತಾ ತಮಾಷೆಗೆ ನಿತ್ಯಾನಂದ ಅವರ ಟ್ರೋಲ್​​ಗಳನ್ನು ಉಲ್ಲೇಖಿಸಿ, ನಾನು ನಿತ್ಯಾನಂದ ಅವರನ್ನು ಮದ್ವೆ ಆಗ್ತೀನಿ ಎಂದಿದ್ದಾರೆ ಪ್ರಿಯಾ ಅನಂದ್​​​. ಇದೀಗ ಈ ಹೇಳಿಕೆ ಸಖತ್ ಟ್ರೋಲ್​​ ಆಗಿದೆ.

ಇದ್ರ ಜತೆಯಲ್ಲಿ, ನನ್ನ ಹೆಸರಿಗೂ, ಅವರ ಹೆಸರಿಗೂ ಸಾಮ್ಯತೆ ಇದೆ. ನಾನು ಅವರನ್ನು ಮದ್ವೆ ಆದರೆ ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗ್ತಿದೆ. ಆದ್ರೆ ಈ ಹೇಳಿಕೆಯನ್ನು ಸೋಶಿಯಲ್​​ ಮೀಡಿಯಾಗಳಲ್ಲಿ ಪ್ರಿಯಾ ಅನಂದ್​ ಅಲ್ಲಗಳೆದಿದ್ದರೂ ಅಧಿಕೃತವಾಗಿ ಸ್ಪಷ್ಟನೆ ನೀಡಿರಲಿಲ್ಲ.

Articles You Might Like

Share This Article