“ಭಾರತಕ್ಕೆ ಮುಸ್ಲಿಂ ಪ್ರಧಾನಿ” ಟ್ವಿಟ್ಟರ್ ಟ್ರೆಂಡ್ ಗೆ ದ್ವನಿಗೂಡಿಸಿದ ನಟಿ ರಮ್ಯಾ

Social Share

ಬೆಂಗಳೂರು,ಅ.25- ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಪ್ರಧಾನಿ ಹುದ್ದೆಯ ಚರ್ಚೆಗೆ ನಟಿ ರಮ್ಯಾ ದನಿಗೂಡಿಸಿದ್ದಾರೆ. ಬ್ರಿಟನ್‍ನಲ್ಲಿ ಅಲ್ಪಸಂಖ್ಯಾತರಾಗಿರುವ ರಿಷಿ ಸುನಕ್ ಪ್ರಧಾನಿಯಾಗಿದ್ದಾರೆ.

ಭಾರತದಲ್ಲಿ ಮುಸ್ಲಿಂ ಅಭ್ಯರ್ಥಿ ಪ್ರಧಾನಿಯಾಗಬೇಕು ಎಂದು ಟ್ವಿಟರ್‍ನಲ್ಲಿ ಟ್ರೆಡಿಂಗ್ ಆಗುತ್ತಿದೆ. ಇನ್ನು ಕೆಲವರು ಭಾರತೀಯ ಚುನಾವಣಾ ಕಾಲದಲ್ಲಿ ಸೋನಿಯಾ ಗಾಂಧಿಯವರು ವಿದೇಶಿ ಮೂಲವನ್ನು ಕೆಣಕಿದ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಾದ-ವಿವಾದಗಳು ಜೋರಾಗಿವೆ.

ಬಿಜೆಪಿ ಬೆಂಬಲಿತರು ಅಲ್ಪಸಂಖ್ಯಾತ ಸಮುದಾಯದ ಅಬ್ದುಲ್ ಕಲಾಂ , ಬುಡುಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಮಾಡಿರುವ ಬಗ್ಗೆ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳುತ್ತಿದ್ದಾರೆ.

ಸೋನಿಯಾ ಗಾಂಧಿ ಅವರನ್ನು ಹೀಯಗಳೆದ ಬಗ್ಗೆ ಚರ್ಚೆಗಳು ಜೋರಾಗಿರುವ ನಡುವೆ ರಮ್ಯಾ ಟ್ವೀಟ್ ಮಾಡಿದ್ದು, ಸೋನಿಯಾ ಗಾಂಧಿ ಅವರು ಇಟಲಿ ಮೂಲದವರೇ ಇರಬಹುದು. ಆದರೆ ಅವರು ಭಾರತೀಯ ಮೂಲದವರಿಗಿಂತಲೂ ಹೆಚ್ಚಿನ ಭಾರತೀಯರು ಎಂಬುದಂತೂ ಖಚಿತ ಎಂದು ಸಮರ್ಥಿಸಿಕೊಂಡಿದ್ದಾರೆ.

ರಿಷಿ ಸುನಕ್‍ಗೆ ಪ್ರಧಾನಿ ಮೋದಿ ಅಭಿನಂದನೆ

ಇದಕ್ಕೆ ಪರ, ವಿರೋಧ ಪ್ರತಿಕ್ರಿಯೆಗಳು ವ್ಯಾಪಕವಾಗಿವೆ. ಇತ್ತೀಚೆಗೆ ರಾಜಕಾರಣದಿಂದ ದೂರ ಉಳಿದಿರುವ ರಮ್ಯಾ ಅವರು ಸಿನಿಮಾ ಕ್ಷೇತ್ರದತ್ತ ಗಮನಹರಿಸಲಾರಂಭಿಸಿದರು. ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಲ್ಲಿ ಕೊನೆ ಕ್ಷಣದಲ್ಲಿ ಭಾಗವಹಿಸುವ ಮೂಲಕ ಗಮನಸೆಳೆದಿದ್ದರು. ಈಗ ಸೋನಿಯಾ ಗಾಂಧಿ ಪರವಾಗಿ ಟ್ವೀಟ್ ಮಾಡಿ ಕುತೂಹಲ ಕೆರಳಿಸಿದ್ದಾರೆ. ರಮ್ಯಾ ಮತ್ತೆ ರಾಜಕಾರಣದತ್ತ ಮುಖ ಮಾಡಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ.

ಕಳೆದ 6 ತಿಂಗಳಲ್ಲಿ ಭರ್ಜರಿ ತೆರಿಗೆ ಕಲೆಕ್ಷನ್ ಮಾಡಿದ ರಾಜ್ಯ ಸರ್ಕಾರ, ಇಲ್ಲಿದೆ ಲೆಕ್ಕ

Articles You Might Like

Share This Article