ನವದೆಹಲಿ,ಜ.30- ದೇಶದ ಶ್ರೀಮಂತ ಉದ್ಯಮ ಸಂಸ್ಥೆ ಅದಾನಿ ಗ್ರೂಪ್ ಮತ್ತು ಅಮೆರಿಕಾದ ಹಿಡನ್‍ಬರ್ಗ್ ನಡುವಿನ ಜುಗಲ್ ಬಂದಿ ಮುಂದುವರೆದಿದೆ. ಹಿಡನ್‍ಬರ್ಗ್ ವರದಿ ಸುಳ್ಳು ಮತ್ತು ಜನರನ್ನು ತಪ್ಪುದಾರಿಗೆ ಎಳೆಯುವ ಯತ್ನ ಎಂದು ಅದಾನಿ ಸಂಸ್ಥೆ ದೂರಿದೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಹಿಡನ್‍ಬರ್ಗ್ ಸಂಸ್ಥೆ ನಾವು ಎತ್ತಿರುವ ಪ್ರಶ್ನೆಗಳನ್ನು ಉಪೇಕ್ಷಿಸುವುದರಿಂದ ರಾಷ್ಟ್ರೀಯ ವಂಚನೆಯನ್ನು ಮರೆ ಮಾಚಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದೆ.
ಅದಾನಿ ಗ್ರೂಪ್‍ನ ಮುಖ್ಯ ಹಣಕಾಸು ಅಧಿಕಾರಿ ಜುಗೇಶಿಂದರ್ ಸಿಂಗ್, ಬಿಸಿನೆಸ್ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಅಮೆರಿಕಾ ಸಂಸ್ಥೆ ಹಿಂಡೆನ್‍ಬರ್ಗ್ ವರದಿ ಬೋಗಸ್ ಆಗಿದೆ. ಯಾವುದೇ ಸಂಶೋಧನೆ ನಡೆಸದೆ ಸಂಸ್ಥೆಯ ವ್ಯವಹಾರಗಳನ್ನು ತಪ್ಪಾಗಿ ಬಿಂಬಿಸಲು ಯತ್ನಿಸಲಾಗಿದೆ. ವರದಿಯಲ್ಲಿ ನಮ್ಮ ಮೂಲಭೂತ ವ್ಯವಹಾರಗಳ ಬಗ್ಗೆ ಮಾತನಾಡುವುದಿಲ್ಲ. ನಕಲಿ ವರದಿಯ ಮೂಲಕ ಅಮೆರಿಕಾದ ಕಂಪೆನಿಗಳಿಗೆ ಮಾರುಕಟ್ಟೆ ಸೃಷ್ಟಿಸಿ, ಲಾಭ ಮಾಡಿಕೊಡುವ ಯತ್ನ ನಡೆದಿದೆ ಎಂದು ಟೀಕಿಸಿದ್ದಾರೆ.
ಕಾಶ್ಮೀರದ ಹಿಮಸೌಂದರ್ಯಕ್ಕೆ ಮಾರುಹೋದ ಕಾಂಗ್ರೆಸ್ ನಾಯಕರು
ಶಾರ್ಟ್ ಸೆಲ್ಲರ್ ಸಂಸ್ಥೆ ಹಿಡನ್‍ಬರ್ಗ್ ಎತ್ತಿರುವ ಪ್ರಶ್ನೆಗಳಿಗೆ ಅದಾನಿ ಸಮೂಹ 413 ಪುಟಗಳ ಸುದೀರ್ಘ ಉತ್ತರ ನೀಡಿದೆ. ಹಿಡನ್‍ಬರ್ಗ್ ಎತ್ತಿರುವ 88 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ. ನಾವು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸದಿದ್ದರೂ, ನಮ್ಮ ವ್ಯವಹಾರಕ್ಕೆ ಧಕ್ಕೆ ಮಾಡುವ ಪ್ರಯತ್ನ ನಡೆಯುತ್ತಲೇ ಇತ್ತು. ವರದಿ ಪ್ರಸ್ತಾಪಿಸಿರುವ ಪ್ರಶ್ನೆಗಳಲ್ಲಿ 68 ನಕಲಿ ಮತ್ತು ತಪ್ಪಾಗಿ ಪ್ರತಿನಿಧಿಸುತ್ತವೆ. ಯಾವುದೇ ಸಂಶೋಧನೆ ನಡೆಸದೆ, ಕಟ್-ಕಾಪಿ-ಪೇಸ್ಟ್ ಕೆಲಸವನ್ನು ಮಾಡಲಾಗಿದೆ ಎಂದು ಅಸಮಧಾನ ವ್ಯಕ್ತ ಪಡಿಸಿದ್ದಾರೆ.
ವರದಿ ಬಹಿರಂಗಗೊಂಡ ಬಳಿಕ ಅದಾನಿ ಸಂಸ್ಥೆಯ ಷೇರುಗಳ ಮೌಲ್ಯ ಕುಸಿದಿದ್ದು, ಭಾರೀ ನಷ್ಟವಾಗಿತ್ತು. ಷೇರು ಪೇಟೆಯಲ್ಲಿ ಕೋಲಾಹಲ ಸೃಷ್ಟಿಯಾಗಿತ್ತು.
ಅದಾನಿ ಗುಂಪಿನ ಆರೋಪಕ್ಕೆ ಹಿಡನ್‍ಬರ್ಗ್ ಸಂಸ್ಥೆ ಪ್ರತಿಕ್ರಿಯಿಸಿದ್ದು, ನಾವು ಪ್ರಸ್ತಾಪಿಸಿರುವ ಪ್ರತಿಯೊಂದು ಪ್ರಶ್ನೆಯನ್ನು ನಿರ್ಲಕ್ಷ್ಯಿಸುವ ಮೂಲಕ ವಂಚನೆಯನ್ನು ಮರೆ ಮಾಚುವ ಪ್ರಯತ್ನಗಳಾಗಿವೆ. ಅದಾನಿ ಸಮೂಹವು ತನ್ನ ವ್ಯವಹಾರದ ಏರಿಕೆ ಮತ್ತು ಅದರ ಅಧ್ಯಕ್ಷ ಗೌತಮ್ ಅದಾನಿಯವರ ಸಂಪತ್ತನ್ನು ಭಾರತದ ಯಶಸ್ಸಿನೊಂದಿಗೆ ಸಂಯೋಜಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹಿಂಡೆನ್ಬರ್ಗ್ ರಿಸರ್ಚ್ ಸಂಸ್ಥೆ ಆರೋಪಿಸಿದೆ.
ಹುಟ್ಟುಹಬ್ಬದ ಪಾರ್ಟಿ ಮೇಲೆ ಗುಂಡಿನ ದಾಳಿ, 8 ಮಂದಿ ಸಾವು
ಭಾರತದ ಪ್ರಜಾಪ್ರಭುತ್ವ ಅದ್ಭುತವಾಗಿದೆ, ಉದಯೋನ್ಮುಖ ಸೂಪರ್ ಪವರ್ ರಾಷ್ಟ್ರವಾಗಿದೆ. ಆದರೆ ಅದನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿದೆ. ಅದಾನಿ ಗ್ರೂಪ್‍ನಿಂದ ಭಾರತದ ಭವಿಷ್ಯಕ್ಕೆ ಧಕ್ಕೆಯಾಗುತ್ತಿದೆ. ತಮ್ಮ ವರದಿ ಯಾವುದೇ ನಿರ್ದಿಷ್ಟ ಕಂಪನಿಯ ಮೇಲಿನ ಅನಗತ್ಯ ದಾಳಿಯಲ್ಲ. ಭಾರತದ ಮೇಲಿನ ಲೆಕ್ಕಾಚಾರದ ಮಾಹಿತಿ ಎಂದಿದೆ.
Adani Group, Hindenburg, allegations,