ಅದಾನಿ ವಿರುದ್ಧ ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ

Social Share

ನವದೆಹಲಿ,ಮಾ.2- ಅದಾನಿ ಗುಂಪಿನ ಮೇಲೆ ಕೇಳಿ ಬಂದಿರುವ ಆರೋಪಗಳ ಕುರಿತು ತನಿಖೆ ನಡೆಸಿ ಕ್ರಮಬದ್ಧವಾದ ವರದಿ ನೀಡಲು ಸುಪ್ರೀಂಕೋರ್ಟ್ ಆರು ಮಂದಿ ತಜ್ಞರ ನ್ಯಾಯಾಂಗ ಸಮಿತಿಯನ್ನು ರಚನೆ ಮಾಡಿದೆ.

ಹಿಡನ್ಸ್‍ಬರ್ಗ್ ವರದಿ ಪ್ರಕಟಗೊಂಡ ಬಳಿಕ ಷೇರು ಮಾರುಕಟ್ಟೆಯಲ್ಲಿ ಸೃಷ್ಟಿಯಾಗಿರುವ ಸಂಚಲನ ಮತ್ತು ಏರಿಳಿತಗಳ ಕುರಿತು ಸಲ್ಲಿಸಲಾದ ತಕರಾರು ಅರ್ಜಿಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಉನ್ನತ ನ್ಯಾಯಾಲಯದ ನಿವೃತ್ತ ನ್ಯಾಯಾೀಧಿಶರಾದ ಎ.ಎಂ.ಸಪ್ರೆಸ ಅವರ ನೇತೃತ್ವದಲ್ಲಿ ತನಿಖಾ ಸಮಿತಿಯನ್ನು ರಚನೆ ಮಾಡಿದ್ದು, ಎರಡು ತಿಂಗಳ ಒಳಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಬೇಕು ಎಂದು ಸೂಚನೆ ನೀಡಿದೆ.

ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಪಿ.ಎಸ್.ನರಸಿಂಹ, ಜೆ.ಬಿ.ಪರ್ದಿವಾಲ ಅವರನ್ನೊಳಗೊಂಡ ವಿಭಾಗೀಯ ಪೀಠ ಸಮಿತಿ ರಚನೆಗೆ ಆದೇಶ ನೀಡಿದೆ.

ಶ್ರೀನಗರದಲ್ಲಿರುವ ಭಯೋತ್ಪಾದಕ ಮುಷ್ತಾಕ್ ಮನೆ ಜಪ್ತಿ

ತನಿಖಾ ಸಮಿತಿ ಪರಿಸ್ಥಿತಿಯನ್ನು ಪರಾಮರ್ಶೆ ನಡೆಸಬೇಕು, ಹೂಡಿಕೆದಾರರ ಸುರಕ್ಷತೆ ಮತ್ತು ಜಾಗೃತಿಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ನೀಡಬೇಕು. ಸೆಬಿಯ ಅಧ್ಯಕ್ಷರು ಸೇರಿದಂತೆ ಆರ್ಥಿಕ ಸ್ವಾಯತ್ತ ಸಂಸ್ಥೆಗಳು ತನಿಖಾ ಸಮಿತಿಗೆ ಅಗತ್ಯವಾದ ಎಲ್ಲಾ ರೀತಿಯ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಸಮಿತಿಯಲ್ಲಿ ನಿವೃತ್ತ ನ್ಯಾಯಾೀಧಿಶರಾದ ಒ.ಪಿ.ಭಟ್, ಜೆ.ಪಿ.ದೇವದತ್ತ ಅವರು ಸದಸ್ಯರಾಗಿದ್ದಾರೆ. ಉಳಿದಂತೆ ಐಟಿ ಕ್ಷೇತ್ರದ ದಿಗ್ಗಜರಾದ ನಂದನ್ ನೀಲಖೇಣಿ, ಬ್ಯಾಂಕಿಂಗ್ ಕ್ಷೇತ್ರದ ತಜ್ಞರಾದ ಕೆ.ವಿ.ಕಾಮತ್, ವಕೀಲರು ಹಾಗೂ ಆರ್ಥಿಕ ತಜ್ಞರಾದ ಸೋಮಶೇಖರನ್ ಸುದಂರೇಶನ್ ಅವರು ತನಿಖಾ ಸಮಿತಿಯಲ್ಲಿದ್ದಾರೆ.

ಅದಾನಿ ಗುಂಪು ಹೂಡಿಕೆಯಲ್ಲಿ ಮತ್ತು ಷೇರು ದರ ಏರಿಕೆಯಲ್ಲಿ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂದು ಅಮೆರಿಕಾ ಮೂಲದ ಹಿಡನ್ಸ್‍ಬರ್ಗ್ ವರದಿ ಮಾಡಿತ್ತು. ಬಳಿಕ ಅದಾನಿ ಗುಂಪಿನ ಷೇರುಗಳ ಮೌಲ್ಯ ಕುಸಿದಿದ್ದು, ವಿಶ್ವದಲ್ಲಿ ಎರಡನೇ ಶ್ರೀಮಂತರ ಪಟ್ಟಿಯಲ್ಲಿದ್ದ ಗೌತಮ್ ಅದಾನಿ ಏಕಾಏಕಿ ಕುಸಿತ ಕಂಡಿದ್ದಾರೆ.

ಗೃಹ ಸಚಿವರ ಬೆಂಗಾವಲು ವಾಹನ ಡಿಕ್ಕಿ : ವ್ಯಕ್ತಿಸಾವು

ಅದಾನಿ-ಹಿಂಡೆನ್‍ಬರ್ಗ್ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ಎರಡು ತಿಂಗಳೊಳಗೆ ವರದಿಯನ್ನು ಸಲ್ಲಿಸುವಂತೆ ಮಾರುಕಟ್ಟೆ ನಿಯಂತ್ರಕ ಸೆಬಿಗೆ (ಸೆಕ್ಯುರಿಟೀಸ್ ಮತ್ತು ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾ) ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಸೆಬಿ ಈಗಾಗಲೇ ಹಿಂಡೆನ್‍ಬರ್ಗ್ ವರದಿ ಮತ್ತು ಅದರಲ್ಲಿ ಎತ್ತಿರುವ ಅದಾನಿ ಗ್ರೂಪ್ ವಿರುದ್ಧದ ಆರೋಪಗಳೆರಡನ್ನೂ ವಿಚಾರಣೆ ನಡೆಸುತ್ತಿದೆ.

Adani, Hindenburg, issue, Supreme Court, sets, expert, committee,

Articles You Might Like

Share This Article