BIG NEWS : ನಿಮ್ಮ ಖುಷಿ ತುಂಬಾ ದಿನ ಇರಲ್ಲ : ADGP ಅಲೋಕ್ ಕುಮಾರ್‌ಗೆ ಜೀವ ಬೆದರಿಕೆ

Social Share

ಬೆಂಗಳೂರು,ನ.24-ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ತಿರುವು ದೊರೆತಿದ್ದು, ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಘಟನೆಯ ಹೊಣೆ ಹೊತ್ತುಕೊಂಡಿದೆ. ಜತೆಗೆ ಎಡಿಜಿಪಿ ಅಲೋಕ್‍ಕುಮಾರ್‍ಗೂ ಬೆದರಿಕೆ ಹಾಕಲಾಗಿದೆ.

ಅನಾಮದೇಯ ಮೂಲಗಳಿಂದ ಬಂದಿರುವ ಪತ್ರಿಕಾ ಹೇಳಿಕೆಯ ತಲೆಬರಹ ಅರೆಬಿಕ್ ಭಾಷೆಯಲ್ಲಿದೆ. ಮಜಿಲ್ ಅಲ್ ಮುಕ್ವಾವಹಮ್ಮದ್ ಅಲ್-ಇಸ್ಲಾಮಿಯಾ ಎಂದು ಬರೆಯಲಾಗಿದ್ದು, ಕೆಳಗೆ ಶಂಕಿತ ಉಗ್ರ ಶಾರಿಕ್‍ನ ಎರಡು ಫೋಟೋಗಳನ್ನು ಪ್ರಕಟಿಸಲಾಗಿದೆ.

ಒಂದು ಫೋಟೋ ಆತ ಸೋಟಕ್ಕೂ ಮುನ್ನ ಸ್ಟೈಲೀಶ್‍ಆಗಿ ಫೋಸ್‍ಕೊಟ್ಟಿರುವುದು, ಮತ್ತೊಂದು ಸ್ಪೋಟದ ಬಳಿಕ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಪತ್ರದಲ್ಲಿ ಸ್ಪೋಟಕ್ಕೆ ತಾವೇ ಹೊಣೆ ಎಂದು ಹೇಳಿಕೊಳ್ಳಲಾಗಿದ್ದು, ಹಿಂದುಗಳ ಧಾರ್ಮಿಕ ಶ್ರದ್ಧಾಕೇಂದ್ರ ಕದ್ರಿಯನ್ನು ಸ್ಪೋಟಿಸುವ ಗುರಿ ಹೊಂದಿದ್ದಾಗಿ ತಿಳಿಸಲಾಗಿದೆ.

ಅನಾಮದೇಯ ಪತ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರಾದ ಅಲೋಕ್ ಕುಮಾರ್‍ಗೆ ಬೆದರಿಕೆ ಹಾಕಲಾಗಿದೆ. ನಿಮ್ಮ ಸಂತೋಷ ಕಡಿಮೆ ಕಾಲ ಬದುಕಿರುತ್ತದೆ. ನಿಮ್ಮ ದಬ್ಬಾಳಿಕೆಗೆ ಶೀಘ್ರವೇ ನೀವು ಪ್ರತಿಫಲವನ್ನು ಪಡೆಯುತ್ತೀರಿ ಎಂದು ಎಚ್ಚರಿಸಲಾಗಿದೆ.

ಹಿಂದೂ ದೇವಾಲಯಗಳನ್ನೇ ಟಾರ್ಗೆಟ್ ಮಾಡಿದ್ದ ಕುಕ್ಕರ್ ಕ್ರಿಮಿ ಶಾರೀಕ್

ಕರ್ನಾಟಕದಲ್ಲಿ ಗುಂಪು ದಾಳಿ, ಧರ್ಮದ ಮೇಲೆ ಶಾಸನ ಮತ್ತು ಕಾನೂನಿನ ದಬ್ಬಾಳಿಕೆಗೆ ಪ್ರತಿಕಾರವಾಗಿ ಮಂಗಳೂರು ಕದ್ರಿ ದೇವಸ್ಥಾನ ಸ್ಪೋಟಕ್ಕೆ ಮುಂದಾಗಿದ್ದಾಗಿ ತಿಳಿಸಲಾಗಿದೆ.

ಪತ್ರದ ಕೊನೆಯಲ್ಲಿ ನಮ್ಮ ಕಾರ್ಯಾಚರಣೆಯ ಅನುಪಾಲನಾ ಮಾಹಿತಿಯನ್ನು ಕಾಲಕಾಲಕ್ಕೆ ಒದಗಿಸುವುದಾಗಿ ಸ್ಪಷ್ಟಪಡಿಸಲಾಗಿದೆ.ಈ ಮೂಲಕ ಕೇಸರಿ ಭಯೋತ್ಪಾದನೆಯನ್ನು ಜಗತ್ತಿಗೆ ತೋರಿಸುವ ಉದ್ದೇಶ ಹೊಂದಲಾಗಿತ್ತು ಮತ್ತು ಕೋಮುಗಲಭೆಯನ್ನು ಹುಟ್ಟುಹಾಕುವ ಸಂಚಿತ್ತು ಎನ್ನಲಾಗಿದೆ.

ಇಸ್ಲಾಮಿಕ್ ರೆಸಿಸ್ಟನ್ಸ್ ಮೂಮೆಂಟ್ ಎಂಬ ಸಂಘಟನೆ ಅಸ್ಥಿತ್ವದಲ್ಲಿದೆ. ಆದರೆ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಎಂಬ ಸಂಘಟನೆಯ ಅಸ್ಥಿತ್ವದ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಆದರೆ, ಅಂತರ್ಜಾಲದ ಶೋಧನೆ ಮಾಡಿದಾಗ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಎಂಬ ಅಕ್ಷರಗಳು ಉಗ್ರ ಸಂಘಟನೆಯ ಹಮ್ಮಾಜ್‍ಗೆ ಸಂಪರ್ಕಗೊಳ್ಳುತ್ತಿವೆ. ಹಮ್ಮಾಜ್ ಇರಾಕ್, ಇರಾನ್, ಸಿರಿಯಾ, ಆಫ್ಘಾನಿಸ್ತಾನ ಸೇರಿದಂತೆ ಹಲವು ಕಡೆ ಪ್ರಬಲ ಕಾರ್ಯಚರಣೆ ನಡೆಸುವ ಉಗ್ರ ಸಂಘಟನೆಯಾಗಿದೆ.

RH-200 ಸೌಂಡಿಂಗ್ ರಾಕೆಟ್‍ನ ಸತತ 200ನೇ ಯಶಸ್ವಿ ಉಡಾವಣೆ

ಎಡಿಜಿಪಿ ಸ್ಪಷ್ಟನೆ:
ಈ ಬಗ್ಗೆ ಈ ಸಂಜೆಯೊಂದಿಗೆ ಮಾತನಾಡಿದ ಎಡಿಜಿಪಿ ಅಲೋಕ್‍ಕುಮಾರ್ ಅವರು, ಈ ರೀತಿಯ ಮಾಹಿತಿ ತಮ್ಮ ಗಮನಕ್ಕೂ ಬಂದಿದೆ. ಅದನ್ನು ಪರಿಶೀಲಿಸುತ್ತೇವೆ ಎಂದಿದ್ದಾರೆ. ಈವರೆಗಿನ ಮಾಹಿತಿಯ ಪ್ರಕಾರ ಇಸ್ಲಾಮಿಕ್ ರೆಸಿಸ್ಟನ್ಸ್ ಕೌನ್ಸಿಲ್ ಎಂಬ ಸಂಘಟನೆ ಅಸ್ಥಿತ್ವದಲ್ಲಿಲ್ಲ. ದುರುದ್ದೇಶ ಪೂರ್ವಕವಾಗಿ ಕಿತಾಪತಿ ಮಾಡಲು ಈ ರೀತಿಯ ಸಂದೇಶ ಹರಿಯಬಿಟ್ಟಿರುವ ಅನುಮಾನಗಳಿವೆ. ಎಲ್ಲಿಂದ ಬಂದಿವೆ ? ಯಾರು ಕಳುಹಿಸಿದ್ದಾರೆ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಹಿನ್ನೆಲೆ: ಇತ್ತೀಚೆಗೆ ಮಂಗಳೂರಿನ ನಾಗೋರಿಯಲ್ಲಿ ಶಾರಿಕ್ ಕೊಂಡೊಯ್ಯುತ್ತಿದ್ದ ಕುಕ್ಕರ್ ಬಾಂಬ್‍ಗಳು ಮಾರ್ಗಮಧ್ಯೆ ಸ್ಪೋಟಗೊಂಡಿದ್ದವು. ಘಟನೆಯಲ್ಲಿ ಆಟೋ ಚಾಲಕ ಪುರುಷೋತಮ್ ಪೂಜಾರಿ ಹಾಗೂ ಶಾರಿಕ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಬಗ್ಗೆ ತೀವ್ರ ಸ್ವರೂಪದ ತನಿಖೆಗಳು ನಡೆಯುತ್ತಿವೆ. ಶಾರಿಕ್ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಮೂಲದವನಾಗಿದ್ದು, ತನ್ನ ಸಹಚರರ ಜತೆ ಸೇರಿ ತುಂಗಾ ನದಿ ತೀರದಲ್ಲಿ ಕಚ್ಛಾಬಾಂಬ್ ಸ್ಪೋಟಿಸುವ ತರಬೇತಿ ಪಡೆದಿದ್ದ. ಬಳಿಕ ಕೊಯಮತ್ತೂರು, ಕೇರಳ ಸೇರಿದಂತೆ ಹಲವು ಕಡೆ ತಲೆಮರೆಸಿಕೊಂಡು ಮೈಸೂರಿನಲ್ಲಿ ವಾಸಿಸುವ ಮೂಲಕ ಮೊಬೈಲ್ ತಂತ್ರಜ್ಞಾನದಲ್ಲಿ ಬಾಂಬ್ ಸ್ಪೋಟಿಸುವ ಕಲೆ ಕರಗತ ಮಾಡಿಕೊಳ್ಳುತ್ತಿದ್ದ.

ಬಾಂಬ್ ತಯಾರಿಕೆಗೆ ಸಾಮಾಜಿಕ ಜಾಲತಾಣದಲ್ಲೇ ತರಬೇತಿ ಪಡೆದು ಅದಕ್ಕೆ ಅಗತ್ಯವಾದ ಸಲಕರಣೆಗಳನ್ನು ಆನ್‍ಲೈನ್ ಮತ್ತು ಆಫ್‍ಲೈನ್‍ನಲ್ಲಿ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ.

ಬೆಂಗಳೂರು ಸೇರಿ ರಾಜ್ಯದಾದ್ಯಂತ ಇನ್ನೂ 2 ದಿನ ಜಿಟಿಜಿಟಿ ಮಳೆ

ಈ ಘಟನೆ ಬೆಳಕಿಗೆ ಬಂದ ಬಳಿಕ ಹಲವಾರು ಆತಂಕಕಾರಿ ಮಾಹಿತಿಗಳು ಹೊರ ಬರುತ್ತಿವೆ. ಕೋಮು ಸೂಕ್ಷ್ಮ ಪ್ರದೇಶವಾದ ಮಂಗಳೂರಿನಲ್ಲಿ ಬಾಂಬ್ ಸ್ಪೋಟಿಸುವ ಸಂಚನ್ನು ಶಂಕಿತ ಉಗ್ರ ಶಾರಿಕ್ ಹೊಂದಿದ್ದ.

ಈ ಕಾರ್ಯಾಚರಣೆಗೆ ಪೂರ್ವಭಾವಿಯಾಗಿ ಆತ ಪ್ರೇಮ್‍ರಾಜ್ ಎಂಬ ಹಿಂದು ವ್ಯಕ್ತಿಯ ಹೆಸರಿನಲ್ಲಿ ಪರಿಚಿತನಾಗಿದ್ದ. ಇದಕ್ಕೆ ತಕ್ಕಂತೆ ನಕಲಿ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡಿದ್ದ. ತನ್ನ ವಾಟ್ಸ್‍ಅಪ್ ಡಿಪಿಯಲ್ಲಿ ಶಿವನ ಮೂರ್ತಿ ಫೋಟೋ ಹಾಕಿಕೊಂಡಿದ್ದ.

ಶಾರಿಕ್ ಮಂಗಳೂರು ಸ್ಪೋಟದ ಹೊಣೆಯನ್ನು ಹಿಂದು ಸಂಘಟನೆಗಳ ತಲೆಗೆ ಕಟ್ಟಿ ಕೇಸರಿ ಭಯೋತ್ಪಾದನೆ ಎಂದು ಬಿಂಬಿಸುವ ಷಡ್ಯಂತ್ರ ರೂಪಿಸಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.

ADGP, Alok Kumar, life, threat, Islamic, Council, Mangalore, blast,

Articles You Might Like

Share This Article