ಉತ್ತಮ ಜೀವನ ನಡೆಸಲು ಸರಳ ಸೂತ್ರಗಳನ್ನು ಹೇಳಿದ ನಿರ್ಮಲಾನಂದನಾಥ ಶ್ರೀಗಳು

Social Share

ಬೆಂಗಳೂರು, ಡಿ.5- ದೇಹಕ್ಕೆ ತನ್ನದೇ ಆದ ಇತಿಮಿತಿ ಇರುತ್ತದೆ. ಆದರೆ, ಅದರ ಶೃಂಗಾರ ಮತ್ತು ಪೋಷಣೆಗೆ ಹೆಚ್ಚು ಗಮನ ಹರಿಸಲಾಗುತ್ತದೆ. ಆದರೆ, ಅದೇ ರೀತಿ ಮನಸ್ಸಿನಲ್ಲೂ ಒಳ್ಳೆಯ ಸಂಸ್ಕಾರ ಬೆಳೆಸಿಕೊಂಡರೆ ದೈವಸ್ವರೂಪಿಗಳಾಗಿ ಬದುಕಬಹುದು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ರಾಜ್ಯ ಒಕ್ಕಲಿಗರ ಮಹಾಸಭಾದ ವತಿಯಿಂದ ಅರಮನೆ ಮೈದಾನದ ಗಾಯತ್ರಿ ವಿಹಾರ್‍ನಲ್ಲಿ ಹನುಮ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಶಿವದೂತೆ ಗುಳಿಗೆ ನಾಟಕ ವೀಕ್ಷಿಸಿ ಮೆಚ್ಚುಗೆ

ಸಂಸ್ಕಾರ, ಆಧ್ಯಾತ್ಮಿಕತೆ ಇಲ್ಲದಿದ್ದರೆ ಮನಸ್ಸಿನಲ್ಲಿ ರಾಕ್ಷಸಿ ಸ್ವರೂಪದ ಭಾವನೆಗಳು ಮೂಡುತ್ತವೆ. ಇದರಿಂದ ಕುಟುಂಬದ ಮೇಲೂ ಕೂಡ ದುಷ್ಪರಿಣಾಮ ಬೀರುತ್ತದೆ. ಇದರಿಂದಾಗಿ ಒಳ್ಳೆಯ ಆಚಾರ-ವಿಚಾರ, ಸಂಸ್ಕಾರವನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ದೈನಂದಿನ ಬದುಕಿನಲ್ಲಿ ಸಾಕಷ್ಟು ಮಾನಸಿಕ ಗೊಂದಲಗಳು, ಜಂಜಾಟಗಳು ಇರುತ್ತವೆ. ಇವುಗಳಿಂದ ಪರಿಹಾರ ಪಡೆಯಲು, ಶಾಂತಿ-ನೆಮ್ಮದಿ ಹೊಂದಲು ಸತ್ಸಂಗಗಳು ಉತ್ತಮ ಪರಿಹಾರ ನೀಡುತ್ತವೆ. ದೇಹ, ಬುದ್ಧಿ, ಮನಸ್ಸನ್ನು ಹತೋಟಿಗೆ ತರಲು ಆಧ್ಯಾತ್ಮ ಅತ್ಯಂತ ಅಗತ್ಯ ಎಂದು ಹೇಳಿದರು.

ಬಿಜೆಪಿಗೆ ಕಗ್ಗಂಟಾದ ರೌಡಿ ಶೀಟರ್ ಗಳ ಸೇರ್ಪಡೆ ವಿವಾದ

ಸಾಕಷ್ಟು ಕಡೆಗಳಲ್ಲಿ ಸತ್ಸಂಗಗಳು ನಡೆಯುತ್ತವೆ. ಆದರೆ, ಇಲ್ಲಿ ನಡೆಯುತ್ತಿರುವುದು ಅತ್ಯಂತ ವಿಶೇಷವಾದದ್ದು. ಮನಸ್ಸಿನ ಮೇಲೆ ಹಿಡಿತ ಇಟ್ಟುಕೊಂಡು ಉತ್ತಮ ಜೀವನ ನಡೆಸುವುದು ಮನುಷ್ಯನ ಕರ್ತವ್ಯ ಎಂದರು.

ಕ್ರಿಕೆಟ್ ಬೆಟ್ಟಿಂಗ್ : ಮೂವರು ಬುಕ್ಕಿಗಳ ಸೆರೆ, 10.5 ಲಕ್ಷ ನಗದು, 3 ಮೊಬೈಲ್‍ಗಳ ವಶ

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ, ಒಕ್ಕಲಿಗರ ಮಹಾಸಭಾ ಅಧ್ಯಕ್ಷ ಎ.ಎಚ್. ಆನಂದ್, ಪ್ರಧಾನ ಕಾರ್ಯದರ್ಶಿ ಸತೀಶ್ ಕಡತಮಲೆ, ಗೌರವಾಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ, ಅಕ್ಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷರಾದ ಅಮರನಾಥಗೌಡ ಸೇರಿದಂತೆ ಹಲವು ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.

#Adichunchanagiri, #NirmalanandanathaSwamiji, #HanumanJayanti,

Articles You Might Like

Share This Article