ಬೆಂಗಳೂರು,ಜ.27- ನಗರದಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನ ಸಂದರ್ಭದಲ್ಲಿ ತನ್ನ ಮಾನ ಹರಾಜಾಗದಂತೆ ನೋಡಿಕೊಳ್ಳಲು ಬಿಬಿಎಂಪಿ ಮುಂಜಾಗೃತೆ ವಹಿಸಿದೆ. ಕಳೆದ ಬಾರಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಹಾಕಲಾದ ರಸ್ತೆಗಳು ಮೂರೇ ದಿನಗಳಲ್ಲಿ ಹಾಳಾಗಿ ಹೋಗಿದ್ದರಿಂದ ಬೆಂಗಳೂರಿನ ಮಾನ ಹರಾಜಾಗಿತ್ತು.
ಈ ಘಟನೆ ನಂತರ ಎಚ್ಚೆತ್ತಿರುವ ಬಿಬಿಎಂಪಿ ಏರ್ ಷೋ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸುವ ಮೂಲಕ ಮಾನ ಮತ್ತೆ ಹರಾಜಾಗದಂತೆ ನೋಡಿಕೊಳ್ಳಲು ಮುಂದಾಗಿದೆ.
ಏರ್ ಷೋ ಮೂಲಭೂತ ಸೌಕರ್ಯ ಕಲ್ಪಿಸಲು ಬಿಬಿಎಂಪಿ ಬರೊಬ್ಬರಿ ಒಂದು ಕೋಟಿ ರೂ.ಗಳ ಟೆಂಡರ್ ಕರೆದಿದೆ. ಐದು ದಿನಗಳ ನಡೆಯಲಿರುವ ವೈಮಾನಿಕ ಪ್ರದರ್ಶನದ ಸಂದರ್ಭದಲ್ಲಿ ತಾತ್ಕಾಲಿಕ ಶೌಚಾಲಯ, ಕುಡಿಯುವ ನೀರು ಸೌಲಭ್ಯಕ್ಕಾಗಿ 1.17 ಕೋಟಿ ರೂ.ಗಳನ್ನು ಬಿಬಿಎಂಪಿ ಖರ್ಚು ಮಾಡುತ್ತಿದೆ.
ಭದ್ರತೆ ವೈಫಲ್ಯ: ಭಾರತ್ ಜೋಡೋ ಯಾತ್ರೆ ದಿಡೀರ್ ಸ್ಥಗಿತ
ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 13ರಿಂದ 17ರವರೆಗೂ ನಡೆಯಲಿರೋ ಏರ್ ಷೋ ಸಂದರ್ಭದಲ್ಲಿ ಪಬ್ಲಿಕ್ ಪಾರ್ಕಿಂಗ್ ಸ್ಥಳವಾಗಿರೊ ಪಿ4 ಲಾಟ್‍ನಲ್ಲಿ ಮೂಲ ಸೌಲಭ್ಯ ಕಲ್ಪಿಸಲಾಗುತ್ತಿದೆ. ತಾತ್ಕಾಲಿಕ ಶೌಚಾಲಯಗಳು, ಆಟೋ ಟಿಪ್ಪರ್, ಕಾಂಪ್ಯಾಕ್ಟರ್, ಕಸದ ಬಿನ್‍ಗಳು, ಸೈನ್ ಬೋರ್ಡ್‍ಗಳು ಹಾಗೂ ನೀರಿನ ಟ್ಯಾಂಕರ್‍ಗಳು ಅಳವಡಿಕೆ ಮಾಡಲಾಗುತ್ತಿದೆ.
ವೈಮಾನಿಕ ಪ್ರದರ್ಶನಕ್ಕೆ ದೇಶ ವಿದೇಶಗಳ ಸಾವಿರಾರು ಪ್ರತಿನಿಧಿಗಳು ಆಗಮಿಸುತ್ತಿರುವುದರಿಂದ ಮೂಲಭೂತ ಸೌಕರ್ಯದಲ್ಲಿ ಕೊರತೆಯಾಗದಂತೆ ನೋಡಿಕೊಳ್ಳಲು ಸಿದ್ದತೆ ಮಾಡಿಕೊಂಡಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಅಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಉಪವಾಸಕ್ಕೆ ಕರೆ ನೀಡಿದ ಪ್ರಧಾನಿ ಮೋದಿ
ರಕ್ಷಣಾ ಇಲಾಖೆ ನಡೆಸುತ್ತಿರುವ ವೈಮಾನಿಕ ಪ್ರದರ್ಶನದಲ್ಲಿ ಬಿಬಿಎಂಪಿಗೆ ಕೆಟ್ಟ ಹೆಸರು ತರದಂತೆ ನೋಡಿಕೊಳ್ಳುವ ಮೂಲಕ ಮೋದಿ ಬಂದು ಹೋದ ನಂತರ ರಸ್ತೆಗಳು ಹಾಳಾದ ರೀತಿಯಲ್ಲಿ ಕೆಲಸ ಮಾಡಬೇಡಿ ಎಂದು ಆಯುಕ್ತರು ಅಧಿಕಾರಿಗಳಿಗೆ ತಿಳಿ ಹೇಳಿದ್ದಾರೆ ಎನ್ನಲಾಗಿದೆ.
AeroIndia2023, airshow, Bengaluru, BBMP,