ಬಾನಂಗಳದಲ್ಲಿ ಲೋಹದ ಹಕ್ಕಿಗಳ ರೋಚಕ ತಾಲೀಮು

Social Share

ಬೆಂಗಳೂರು,ಫೆ.9- ಬಹುನಿರೀಕ್ಷಿತ ಏರೋ ಇಂಡಿಯಾ 2023ರ ಆರಂಭಕ್ಕೆ ಕ್ಷಣಗಣನೆ ಶುರುವಾಗುತ್ತಿದ್ದಂತೆ ಬಾನಾಂಗಳದಲ್ಲಿ ಲೋಹದಕ್ಕಿಗಳ ಆರ್ಭಟ ಕೂಡ ಶುರುವಾಗಿದೆ. ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನವೆಂದೇ ಹೆಸರಾಗಿರುವ ಅದರಲ್ಲೂ ವೈಮಾನಿಕ ಕ್ಷೇತ್ರದಲ್ಲಿ ಮಹತ್ತರ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಸತತವಾಗಿ ಏರೋ ಶೋ ನಡೆದುಕೊಂಡು ಬರುತ್ತಿದೆ.

ಭಾರತದ ವಾಯುಪಡೆ ಭತ್ತಳಿಕೆಗೆ 5ನೇ ತಲೆಮಾರಿನ ಯುದ್ದ ವಿಮಾನಗಳ ಸೇರ್ಪಡೆಗಾಗಿ ಉತ್ಸುಕತೆ
ಹೆಚ್ಚಿರುವ ಹಿನ್ನೆಲೆಯಲ್ಲಿ ವಿಶ್ವದ ಮುಂಚೂಣಿ ವೈಮಾನಿಕ ಸಂಸ್ಥೆಗಳಾದ ಬೋಯಿಂಗ್, ಏರ್ ಬಸ್, ಲೆಡ್‍ಹೆಡ್ ಮಾರ್ಟಿನ್, ಡೆಸಾಲ್ಟ್ ಸೇರಿದಂತೆ ಹಲವು ಕಂಪನಿಗಳು ಆಧುನಿಕ ತಂತ್ರಜ್ಞಾನದಿಂದ ಕೂಡಿರುವ ಹೊಸ ಯುದ್ದ ವಿಮಾನಗಳನ್ನು ಪರಿಚಯಿಸಲು ಮುಂದಾಗಿವೆ.

ಅಮೆರಿಕದ ಬೋಯಿಂಗ್‍ನ ಎಫ್ -16, ಎಫ್-18, ಎಫ್-21 ಯುದ್ಧ ವಿಮಾನಗಳನ್ನು ಭಾರತಕ್ಕೆ ನೀಡಲು ಸಿದ್ದವಿದ್ದರೂ ಕೂಡ ಅದರ ಬೆಲೆಯಲ್ಲಿ ದುಬಾರಿಯಾಗಿರುವ ಕಾರಣ ಫ್ರಾನ್ಸ್‍ನ ರೆಫೆಲ್ ಯುದ್ಧ ವಿಮಾನವನ್ನು ಭಾರತ ಖರೀದಿಸಿತ್ತು.

ಅಮೆರಿಕ ಭಾರತದ ಪ್ರಮುಖ ಪಾಲುದಾರ ದೇಶವಾಗಿರಲಿದೆ : ಪೆಂಟಗಾನ್

ಈಗಾಗಲೇ ಭಾರತೀಯ ವಾಯುಪಡೆಯಲ್ಲಿ ಹೊಸ ಬತ್ತಳಿಕೆಯಾಗಿ ಸೇರ್ಪಡೆಯಾಗಿರುವ ರೆಫೆಲ್ ಯುದ್ದ ವಿಮಾನಗಳಿಗೆ ಸಾಥ್ ಕೊಡಲು ರಷ್ಯಾದ ಸುಕೋಯ್ ಸಮೂಹದ ಆಧುನಿಕ ಸಮರ ವಿಮಾನಗಳು ಸೇರುವ ಸಾಧ್ಯತೆಯೇ ಹೆಚ್ಚಾಗಿದೆ.

ಇದರ ಜೊತೆಗೆ ಸ್ವದೇಶಿ ನಿರ್ಮಿತ ತೇಜಸ್ ಕೂಡ ಹೊಸ ಶಕ್ತಿಯನ್ನು ನೀಡಲಿದೆ. ಸುಕೋಯ್ ಯುದ್ದ ವಿಮಾನದಂತೆ ಹೋಲುವ ಎರಡು ಇಂಜಿನ್‍ನ ತೇಜಸ್ ಮಾರ್ಕ್2 ಯುದ್ಧ ವಿಮಾನ ತಯಾರಿಕೆ ಭರದಿಂದ ಸಾಗಿದ್ದು, ಮುಂದಿನ 2024ರ ವೇಳೆಗೆ ಪ್ರಥಮ ಹಾರಾಟ ನಿರೀಕ್ಷಿಸಲಾಗಿದೆ.

ಇದಲ್ಲದೆ ಜಗತ್ತಿನಲ್ಲೇ ಅತ್ಯಂತ ಹಗುರವಾದ ತೇಜಸ್ ಯುದ್ಧ ವಿಮಾನಕ್ಕೆ ಮತ್ತಷ್ಟು ತಂತ್ರಜ್ಞಾನ ಉಪಕರಣಗಳನ್ನು ಅಳವಡಿಸಲಾಗಿದೆ. ಇದು ಕೂಡ ಈಗ ಪ್ರಸಕ್ತ ಏರೋ ಇಂಡಿಯಾದ ಪ್ರಮುಖ ಹೈಲೈಟ್ ಆಗಲಿದೆ. ಈಗಾಗಲೇ ಮಲೇಷ್ಯಾ, ಬರ್ಮಾ ಸೇರಿದಂತೆ ಹಲವು ದೇಶಗಳು ಕೊಳ್ಳಲು ಉತ್ಸಾಹ ತೋರಿದೆ.

ಲಾಕೆಟ್ ಮಾರ್ಟಿನ್‍ನ ಆಧುನಿಕ ಸಮರ ವಿಮಾನ ಎಫ್-21 ಈ ಬಾರಿ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿದೆ ಎಂಬು ಭಾರೀ ಕುತೂಹಲ ಕೆರಳಿಸಿದೆ. ಎಸ್-92 ಮಲ್ಟಿ ರೋಲ್ ಹೆಲಿಕಾಪ್ಟರ್, ಎಂ.ಎಚ್ 60 ಆರ್ ರೆಮೊ ಯುದ್ಧ ಹೆಲಿಕಾಪ್ಟರ್ ಮತ್ತು ಆಂಟಿಟ್ಯಾಂಕ್ ಶಸ್ತ್ರಾಸ್ತ್ರವನ್ನು ಕೂಡ ಪ್ರದರ್ಶಿಸುತ್ತಿರುವುದು ಮಹತ್ವ ಪಡೆದಿದೆ.

ಮಗುವಿಗೆ ಜನ್ಮ ನೀಡಿದ ತೃತಿಯಲಿಂಗಿ, ಭಾರತದಲ್ಲಿ ಇದೆ ಮೊದಲು

ಈಗಾಗಲೇ ಭಾರತೀಯ ವಾಯುಪಡೆ 114 ಹೊಸ ಯುದ್ಧ ವಿಮಾನಗಳನ್ನು ಖರೀದಿಸುವ ನಿಟ್ಟಿನಲ್ಲಿ ಮುಂದುವರೆಯುತ್ತಿದ್ದು, ಎಫ್-21 ಅದಕ್ಕೆ ಅತ್ಯಂತ ಸೂಕ್ತ ಎಂದು ಲಾಕೆಟ್ ಮಾರ್ಟಿನ್ ಅಕಾರಿಗಳು ಹೇಳುತ್ತಿದ್ದಾರೆ.

ಬಹಳ ವರ್ಷಗಳಿಂದ ಭಾರತದ ಜೊತೆಗೆ ನಾವು ನಿಕಟ ಹಾಗೂ ವಿಶ್ವಾಸಹರ್ಹ ಸಂಬಂಧ ಹೊಂದಿದ್ದೇವೆ. ಇದು ನಮಗೆ ಮಹತ್ವದ ಪ್ರದರ್ಶನ ಎಂದು ಹೇಳಿದೆ. ಈಗಾಗಲೇ ಸುಮಾರು 731 ಪ್ರದರ್ಶಕರು ತಮ್ಮ ಉತ್ಪನ್ನಗಳನ್ನು ಇಲ್ಲಿ ಪ್ರದರ್ಶಿಸಲಿದ್ದು, ಇದರಲ್ಲಿ 633 ಭಾರತೀಯ ಕಂಪನಿಗಳಾಗಿವೆ. ಇನ್ನು 98 ವಿದೇಶಿ ಕಂಪನಿಗಳು ಕೂಡ ಪಾಲ್ಗೊಳ್ಳುತ್ತಿವೆ. ಕಳೆದ ಬಾರಿಗೆ ಹೋಲಿಸಿದರೆ ಇದು ಕಡಿಮೆಯಾಗಿದ್ದರೂ ಹೊಸ ಅನುಭವ ನೀಡುವುದು ನಿಶ್ಚಿತವಾಗಿದೆ.

ಭುಜದ ಮೇಲೆ ಪತ್ನಿ ಶವ ಹೊತ್ತು ಸಾಗಿದ ಪತಿ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ವ್ಯತ್ಯಯ:
ಯಲಹಂಕ ವಾಯುನೆಲೆಯಲ್ಲಿ ಫೆ.13ರಿಂದ 17ರವರೆಗೆ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಹಿನ್ನಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ. ಈಗಾಗಲೇ ಸಮರ ವಿಮಾನಗಳ ತಾಲೀಮು ಆರಂಭಗೊಂಡಿರುವ ಹಿನ್ನಲೆಯಲ್ಲಿ ಬೆಳಗ್ಗೆ 9ರಿಂದ 12ರವರೆಗೆ ಮಧ್ಯಾಹ್ನ 2ರಿಂದ 5ವರೆಗೆ ವಿಮಾನಗಳ ಹಾರಾಟವನ್ನು ನಿಷೇಸಲಾಗುತ್ತಿದೆ.

Aero India 2023, Asia, largest, air show, Bengaluru,

Articles You Might Like

Share This Article