ಬಾನಂಗಳದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ಕಣ್ತುಂಬಿಕೊಳ್ಳಲು ಕಾತುರ

Social Share

ಬೆಂಗಳೂರು, ಫೆ .12- ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಉತ್ತೇಜಿಸುವ ಮತ್ತು ದೇಶೀಯ ವಿಮಾನಯಾನ ಕ್ಷೇತ್ರಕ್ಕೆ ಹೊಸ ಶಕ್ತಿ ನೀಡುವ ದೇಶದ ಅತಿದೊಡ್ಡ ವೈಮಾನಿಕ ಮತ್ತು ರಕ್ಷಣಾ ಪ್ರದರ್ಶನದ 14 ನೇ ಆವೃತ್ತಿ ಏರೋ ಇಂಡಿಯಾ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.

ಯಲಹಂಕದ ವಾಯು ನೆಲೆಯಲ್ಲಿ ನಡೆಯುವ ಐದು ದಿನಗಳ(ಫೆ.13-17 ) ಈ ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ನಾಳೆ ಬೆಳಿಗ್ಗೆ 9.30 ಕ್ಕೆ ಉದ್ಘಾಟಿಸಲಿದ್ದಾರೆ ಇಂದು ಸಂಜೆ ಪ್ರಧಾನಿ ನಗರಕ್ಕೆ ಆಗಮಿಸುತ್ತಿದ್ದಾರೆ.

ಯುದ್ದ ವಿಮಾನ, ಪ್ರಯಾಣಿಕರ ವಿಮಾನ, ಹೆಲಿಕಾಪ್ಟರ್‍ಗಳು, ಮಾನವರಹಿತ ಗುಪ್ತಚರ ವಿಮಾನ,ರೆಡಾರ್‍ಗಳು ಮತ್ತು ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಗಳ ಆಧುನಿಕ ಉಪಕರಣಗಳ ದೊಡ್ಡ ಪ್ರದರ್ಶನ ಮತ್ತು ವ್ಯಾಪಾರ ಮೇಳ ಭಾರಿ ನಿರೀಕ್ಷೆ ಮೂಡಿಸಿದೆ.

ಒಟ್ಟಾರೆ ಈ ಪ್ರದರ್ಶನದಲ್ಲಿ 110 ವಿದೇಶಿ ಸೇರಿದಂತೆ 809 ಪ್ರದರ್ಶಕರು ಭಾಗವಹಿಸುವುದನ್ನು ಖಚಿತಪಡಿಸಿದ್ದಾರೆ, ಮೇಕ್ ಇನ್ ಇಂಡಿಯಾ ಫಾರ್ ದಿ ವಲ್ರ್ಡ್ ವೇದಿಕೆಯಾಗಿ ರೂಪಿಸಲಾಗಿದೆ ಎಂದು ರಕ್ಷಣಾ ಅಕಾರಿಗಳು ತಿಳಿಸಿದ್ದಾರೆ.
ಅಮೆರಿಕ ರಾಯಭಾರ ಕಚೇರಿಯ ಪ್ರಭಾರ ರಾಯಭಾರಿ ಎಲಿಜಬೆತ್ ಜೋನ್ಸ್ ಅವರು ಏರೋ ಇಂಡಿಯಾಕ್ಕೆ ಅತಿ ದೊಡ್ಡ ನಿಯೋಗವನ್ನು ಕರೆತಂದಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರ ಸಾವು

ಪ್ರದರ್ಶನಕ್ಕೂ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಭಾರತವು ತನ್ನ ರಕ್ಷಣಾ ಸಾಮಥ್ರ್ಯಗಳನ್ನು ಆಧುನೀಕರಿಸಿದಂತೆ, ಖಂಡಿತವಾಗಿಯೂ ನಾವು ಆಯ್ಕೆಯ ಪಾಲುದಾರರಾಗಲು ಬಯಸುತ್ತೇವೆ. ನಾವು ಪರಸ್ಪರ ಲಾಭದಾಯಕ ಸಹ-ಉತ್ಪಾದನೆ ಮತ್ತು ಸಹ-ಅಭಿವೃದ್ಧಿ ಪಾಲುದಾರಿಕೆಗಳ ಮೇಲೆ ಹೆಚ್ಚು ಗಮನಹರಿಸುತ್ತೇವೆ ಎಂದು ಅವರು ಹೇಳಿದರು.

ಜಾಗತಿಕ ವಾಯುಯಾನ ಉದ್ಯಮದಲ್ಲಿ ಒಂದು ಪ್ರಮುಖ ಪ್ರದರ್ಶನ, ಏರೋ ಇಂಡಿಯಾ ಸುಮಾರು 35,000 ಚದರ ಮೀಟರ್ ಪ್ರದೇಶದಲ್ಲಿ ನಡೆಯುತ್ತದೆ, ಉದ್ಯಮಕ್ಕೆ ಅದರ ಸಾಮಥ್ರ್ಯಗಳು, ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ಅವಕಾಶವನ್ನು ಒದಗಿಸುತ್ತದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸೆ ಅಭಿವೃದ್ಧಿಪಡಿಸಿದ ಗುಪ್ತಚರ, ಕಣ್ಗಾವಲು, ಗುರಿ ಸ್ವಾೀನ ಮತ್ತು ವಿಚಕ್ಷಣ ಅಗತ್ಯತೆ ಪೂರೈಸುವ ತಪಾಸ್ ಹೆಸರಿನ ಮಾನವ ರಹಿತ ವೈಮಾನಿಕ ವಾಹಕ ಹಾರಾಟ ನಡೆಸಲಿದೆ ಇದು 28000 ಅಡಿ ಎತ್ತರದಲ್ಲಿ ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ. ಗರಿಷ್ಠ 350 ಕೆಜಿ ವರೆಗೆ ವಿವಿಧ ಭಾರದ ವಸ್ತುಸಾಗಿಸುವ ಸಾಮಥ್ರ್ಯ ಹಿಂದಿದೆ ಎಂದು ಡಿಆರ್‍ಡಿಒ ಅಕಾರಿಗಳು ತಿಳಿಸಿದ್ದಾರೆ.

ಡಿಆರ್‍ಡಿಒ ಪೆವಿಲಿಯನ್‍ನಲ್ಲಿ ಯುದ್ಧ ವಿಮಾನ ಮತ್ತು ಯುಎವಿಗಳು, ಕ್ಷಿಪಣಿಗಳು ಮತ್ತು ಕಾರ್ಯತಂತ್ರದ ವ್ಯವಸ್ಥೆಗಳು, ಎಂಜಿನ್ ಮತ್ತು ಪೆÇ್ರಪಲ್ಷನ್ ಸಿಸ್ಟಮ್‍ಗಳು, ವಾಯುಗಾಮಿ ಕಣ್ಗಾವಲು ವ್ಯವಸ್ಥೆಗಳು ಮತ್ತು ಸೆನ್ಸರ್‍ಗಳು ಎಲೆಕ್ಟ್ರಾನಿಕ್ ವಾರ್‍ಫೇರ್ ಮತ್ತು ಸಂವಹನ ವ್ಯವಸ್ಥೆಗಳು ಸೇರಿದಂತೆ 12 ವಲಯಗಳಾಗಿ ವರ್ಗೀಕರಿಸಲಾದ 330 ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ ಎಂದು ಹೇಳಿದರು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‍ಎಎಲ್ ) ಸುಧಾರಿತ ಲೈಟ್ ಹೆಲಿಕಾಪ್ಟರ್, ಪ್ರಚಂಡ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್ ಮತ್ತು ಲೈಟ್ ಯುಟಿಲಿಟಿ ಹೆಲಿಕಾಪ್ಟರ್‍ನ ಎಲ್ಲಾ ರೂಪಾಂತರಗಳನ್ನು ಒಳಗೊಂಡಿರುವ 15 ಹೆಲಿಕಾಪ್ಟರ್‍ಗಳು ಪ್ರದರ್ಶಿಸಲಿದೆ.

ನಾಲ್ಕು ಹೈಕೋರ್ಟ್‍ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

ರಕ್ಷಣಾ ಸಚಿವಾಲಯವು ಫೆ.13 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಂಪನಿಗಳ ಸಿಇಒಗಳ ರೌಂಡ್ ಟೇಬಲï ಸಭೆ ಆಯೋಜಿಸುತ್ತಿದೆ.

ಇದರಲ್ಲಿ ಬೋಯಿಂಗ್, ಲಾಕ್‍ಹೀಡ್ ಮಾರ್ಟಿನ್, ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್, ಜನರಲ್ ಅಟಾಮಿಕ್ಸ್, ಲೈಬರ್ ಗ್ರೂಪ್, ರೇಥಿಯಾನ್ ಟೆಕ್ನಾಲಜೀಸ್, ಸಫ್ರಾನ್ ಮತ್ತು ಮಿಲಿಟರಿ ಇಂಡಸ್ಟ್ರೀಸ್ ಜನರಲ್ ಅಥಾರಿಟಿ ನಂತಹ ಜಾಗತಿಕ ಹೂಡಿಕೆದಾರರು ಸೇರಿದಂತೆ 26 ದೇಶಗಳ ಅಧಿಕಾರಿಗಳು, ಪ್ರತಿನಿಗಳು ಭಾಗವಹಿಸುತ್ತಾರೆ.

ಈ ವರ್ಷದ ಪ್ರದರ್ಶನದಲ್ಲಿ ಅತ್ಯಾಕ ಪ್ರಮಾಣದ ಕಂಪನಿಗಳು ಭಾಗವಹಿಸುವಿಕೆಯೊಂದಿಗೆ ಅತಿದೊಡ್ಡ ವೈಮಾನಿಕ ಪ್ರದರ್ಶನವಾಗಲಿದೆ.

Aero India, 2023, show, Bengaluru,

Articles You Might Like

Share This Article