ತಾಲಿಬಾನ್ ಆಡಳಿತ ಅಫ್ಘಾನಿಸ್ತಾನದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿದೆಯಂತೆ..!

ಕಾಬೂಲ್,ಆ.29- ಅಫ್ಘಾನಿಸ್ತಾನದಲ್ಲಿ ಅಪರಾಧ ಪ್ರಮಾಣವು ಶೇ.30ರಷ್ಟು ಕಡಿಮೆಯಾಗಿದೆ ಎಂದು ತಾಲಿಬಾನ್ ಸರ್ಕಾರದ ಆತಂಕರಿಕ ಸಚಿವಾಲಯವು ಮಾಹಿತಿ ನೀಡಿದೆ. ಸದಾ ರಕ್ತದೋಕುಳಿ ನೋಡುತ್ತಿದ್ದ ದೇಶದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎನ್ನುವ ಹೇಳಿಕೆಯು ಅಚ್ಚರಿಯನ್ನುಂಟುಮಾಡುತ್ತಿದೆ. ತಾಲಿಬಾನ್ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಳ್ಳುವಾಗ ಸಾಕಷ್ಟು ಸಾವುಗಳಿಗೆ ಸಾಕ್ಷಿಯಾಗಿತ್ತು. ದೇಶಾದ್ಯಂತ ಅಪರಾಧ ಪ್ರಮಾಣವು 30 ಪ್ರತಿಶತದಷ್ಟು ಕಡಿಮೆಯಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆ ಗಮನಾರ್ಹವಾಗಿ ಸುಧಾರಿಸಿದೆ. ಸದಾ ರಕ್ತದೋಕುಳಿ ನೋಡುತ್ತಿದ್ದ ದೇಶದಲ್ಲಿ ಅಪರಾಧ ಪ್ರಮಾಣ ಕಡಿಮೆಯಾಗಿದೆ ಎನ್ನುವ ಹೇಳಿಕೆಯು ಅಚ್ಚರಿಯನ್ನುಂಟುಮಾಡುತ್ತಿದೆ. ಕಾಬೂಲ್ನಲ್ಲಿ ವಾರ್ಷಿಕ ವರದಿಯನ್ನು ಮಂಡಿಸಿದ ಉಪ ಆಂತರಿಕ ಸಚಿವ ಮೊಹಮದ್ ನಬಿ ಒಮರಿ, ದೇಶದ ಭದ್ರತಾ ಪರಿಸ್ಥಿತಿ ಸುಧಾರಿಸಿದೆ ಎಂದು ಹೇಳಿದ್ದಾರೆ. ಹೆಚ್ಚಿದ ಭದ್ರತಾ ವ್ಯವಸ್ಥೆಗಳಿಂದಾಗಿ, ನಾಗರಿಕರು ಸುರಕ್ಷಿತವಾಗಿರಲು ಮತ್ತು ಪ್ರಾಂತ್ಯಗಳ ನಡುವೆ ಸುರಕ್ಷಿತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತಿದೆ. ತಾಲಿಬಾನ್ ನಾಯಕ ಮುಲ್ಲಾ ಹಿಬತುಲ್ಲಾ ಅಖುಂದ್ಜಾದಾ ಅವರ ಆದೇಶಗಳು ಮತ್ತು ನ್ಯಾಯಾಲಯದ ತೀರ್ಪುಗಳಿಗೆ ಅನುಗುಣವಾಗಿ ಸಚಿವಾಲಯದ ಚಟುವಟಿಕೆಗಳು ಈಗ ವ್ಯವಸ್ಥಿತವಾಗಿ ದೇಶವನ್ನು ಆಳುತ್ತಿವೆ ಎಂದು ಒಮರಿ ಹೇಳಿದರು. ರಾಷ್ಟ್ರೀಯ … Continue reading ತಾಲಿಬಾನ್ ಆಡಳಿತ ಅಫ್ಘಾನಿಸ್ತಾನದಲ್ಲಿ ಅಪರಾಧ ಪ್ರಕರಣಗಳು ಕಡಿಮೆಯಾಗಿದೆಯಂತೆ..!