ಇತಿಹಾಸ ಸೃಷ್ಟಿಸಿದ ಅಫ್ಘಾನ್ ಆಟಗಾರ ರಶೀದ್‌ಖಾನ್

ಕಿಂಗ್‌ಸ್ಟನ್‌ , ಜೂ.25- ತಮ್ಮ ಸ್ಪಿನ್‌ ಬೌಲಿಂಗ್‌ನಿಂದ ಬಾಂಗ್ಲಾದ ಹುಲಿಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ ಆಫಾಘಾನಿಸ್ತಾನದ ನಾಯಕ ರಶೀದ್‌ ಖಾನ್‌ ಕ್ರಿಕೆಟ್‌ ಇತಿಹಾಸ ಪುಟದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 150 ವಿಕೆಟ್‌ ಪಡೆದ ಬೌಲರ್‌ ಎಂಬ ದಾಖಲೆಗೆ ಪಾತ್ರರಾದ ರಶೀದ್‌ಖಾನ್‌, ಎರಡನೇ ಗರಿಷ್ಠ ವಿಕೆಟ್‌ ಟೇಕರ್‌ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ರಶೀದ್‌ ಖಾನ್‌ ಅವರು 92 ಪಂದ್ಯಗಳಿಂದ 2 ಬಾರಿ 5 ವಿಕೆಟ್‌ ಹಾಗೂ 7 ಬಾರಿ 4 ವಿಕೆಟ್‌ ಸೇರಿದಂತೆ 152 ವಿಕೆಟ್‌ ಪಡೆದಿದ್ದಾರೆ. ನ್ಯೂಜಿಲೆಂಡ್‌ನ ಅನುಭವಿ ವೇಗಿ ಟಿಮ್‌ ಸೋಧಿ ಅವರು 123 ಇನಿಂಗ್‌್ಸನಿಂದ 164 ವಿಕೆಟ್‌ ಪಡೆದಿದ್ದು ಅಗ್ರಸ್ಥಾನದಲ್ಲಿದ್ದರೆ, 2 ಬಾರಿ 5 ವಿಕೆಟ್‌ ಹಾಗೂ 2 ಬಾರಿ 4 ವಿಕೆಟ್‌ ಸಾಧನೆ ಮಾಡಿದ್ದಾರೆ.