ನನ್ನ ಕೊನೆಯ ಕಾಲದಲ್ಲಾದರೂ ಜೆಡಿಎಸ್‌ಗೆ ಒಮ್ಮೆ ಅಧಿಕಾರ ಕೊಡಿ : ದೇವೇಗೌಡರು

ಚಿಕ್ಕಮಗಳೂರು, ಮೇ 10- ಮುಂಬರುವ 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ತೊಟ್ಟಿದ್ದೇನೆ. ಪಕ್ಷದಲ್ಲಿ ಎಲ್ಲರಿಗಿಂತ ಕಾರ್ಯಕರ್ತರು ಮುಖ್ಯ. ಪಕ್ಷ ಬಲಪಡಿಸಲು ನಿಮ್ಮೆಲ್ಲರ ಸಹಕಾರ ಬೇಕು ಎಂದು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.

ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷವನ್ನು ಬಲವಾಗಿ , ಕಟ್ಟುವುದು ಮುಖ್ಯ ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ರಾಜಕಾರಣದಲ್ಲಿ ಸುದೀರ್ಘವಾಗಿ ದುಡಿದಿದ್ದೇನೆ. ಪಕ್ಷಾಂತರ ಎಂದೂ ನಾನು ಮಾಡಿಲ್ಲ. ಜೆಡಿಎಸ್‍ಅನ್ನು ಸದೃಢಗೊಳಿಸುವ ಶಕ್ತಿ ಇದೆ. ಜಿಲ್ಲೆಯಲ್ಲಿ ನಾಲ್ವರು ಜೆಡಿಎಸ್ ಶಾಸಕರಿದ್ದರು. ಆ ದಿನಗಳು ಮತ್ತೆ ಮರುಕಳಿಸುವಂತೆ ಮಾಡಲು ಪ್ರಯತ್ನಿಸಬೇಕಿದೆ ಪಕ್ಷದ ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಈ ಬಾರಿಯ ಚುನಾವಣೆಗೆ ನಾನು ಮತದಾರರನ್ನು ಕೇಳುವುದು ಕೊನೆಗಾಲದಲ್ಲಿ ಈ ದೇವೇಗೌಡರಿಗೆ ನಿಮ್ಮ ಒಂದು ಮತ ನೀಡಿ ಎಂದು ಹಾಗಾಗಿ ಈ ಬಾರಿ ಜೆಡಿಎಸ್ ಪಕ್ಷ ಗೆಲುವು ಖಚಿತ ಅಧಿಕಾರ ಹಿಡಿಯುವುದು ನಿಶ್ಚಿತ ಎಂದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್ .ಬೋಜೇಗೌಡ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಂಜಿತ್ ಕುಮಾರ್, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮುಖಂಡರಾದ ಮಂಜಪ್ಪ ವೆಂಕಟೇಶ್ ಹೊಲಗದ್ದೆಗಿರೀಶ್ ಮುಂತಾದವರು ಹಾಜರಿದ್ದರು.

Sri Raghav

Admin