ನವದೆಹಲಿ, ನ.28- ಸಹ ಜೀವನ ನಡೆಸುತ್ತಿದ್ದ ಸಂಗಾತಿ ಶ್ರದ್ಧಾ ವಾಲ್ಕರ್‍ರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ ಅಫ್ತಾಬ್ ಪೂನವಾಲರನ್ನು ಇಂದು ದೆಹಲಿಯಲ್ಲಿ ಪಾಲಿಗ್ರಾಫ್ ಪರೀಕ್ಷೆ ಒಳಪಡಿಸಲಾಗಿದೆ.
ಅಫ್ತಾಬ್ ಬೆಳಗ್ಗೆ 9.50ಕ್ಕೆ ದೆಹಲಿಯ ರೋಹಿಣಿಯಲ್ಲಿರುವ ಎಫ್‍ಎಸ್‍ಎಲ್ ಪ್ರಯೋಗಾಲಯಕ್ಕೆ ಆಗಮಿಸಿದ್ದು, 11 ಗಂಟೆಯ ವೇಳೆಗೆ ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಲಾಯಿತು. ಕಳೆದ ಬಾರಿ ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿದಾಗ ಅನಾರೋಗ್ಯದ ಕಾರಣದಿಂದ ಪ್ರಶ್ನೋತ್ತರ ತೃಪ್ತಿದಾಯಕವಾಗಿರಲಿಲ್ಲ. ನಮ್ಮ ಪ್ರಯೋಗಾಲಯದಿಂದ ಆತನಿಗೆ ಮಂಪರು ಪರೀಕ್ಷೆ ನಡೆಸಲು ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ರೋಹಿಣಿಯ ಎಫ್‍ಎಸ್‍ಎಲ್ ವಿಭಾಗದ ಕ್ರೈಮ್‍ಸಿನ್ ನಿರ್ವಹಣಾ ವಿಭಾಗದ ಮುಖ್ಯಸ್ಥ ಸಂಜೀವ್ ಗುಪ್ತಾ ಹೇಳಿದ್ದಾರೆ.
ತನಿಖೆಗೆ ಆರೋಪಿ ಸಹಕಾರ ನೀಡುತ್ತಿದ್ದಾನೆಯೇ ಇಲ್ಲವೇ ಎಂಬ ವಿಚಾರ ರಹಸ್ಯವಾಗಿದ್ದು, ಅದರ ಕುರಿತು ತನಿಖಾಕಾರಿಗಳಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು. ಕಳೆದ ಶುಕ್ರವಾರ ಮೂರು ಗಂಟೆ ಕಾಲ ಸುಳ್ಳು ಪತ್ತೆ ಪರೀಕ್ಷೆ ಒಳಪಡಿಸಲಾಯಿತು. ಆದರೆ ಆ ವೇಳೆ ನಿರೀಕ್ಷಿತ ಮಾಹಿತಿಗಳು ತಿಳಿಯಲಿಲ್ಲ ಎನ್ನಲಾಗಿದೆ.
ಆರೋಪಿ ಅಫ್ತಾಬ್ ಪ್ರಸ್ತುತ ತಿಹಾರ್ ಜೈಲಿನ ಕೊಠಡಿ ಸಂಖ್ಯೆ ನಾಲ್ಕರಲ್ಲಿದ್ದು, ಆರೋಗ್ಯ ತಪಾಸಣೆ ನಡೆಸಿದಾಗ ಯಾವುದೇ ಸಮಸ್ಯೆಗಳು ಕಂಡು ಬಂದಿಲ್ಲ ಎಂದು ಜೈಲಿನ ಸಾರ್ವಜನಿಕ ಸಂಪರ್ಕಾಕಾರಿ ೀರಜ್ ಮತೂರ್ ಹೇಳಿದ್ದಾರೆ.
ಆರೋಪಿಯನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ಸಿಸಿಟಿವಿ ಮೂಲಕ ನ ನಿಗಾ ವಹಿಸಲಾಗಿತ್ತು. ಆರೋಪಿಯನ್ನು ನವೆಂಬರ್ 28, 29 ಮತ್ತು ಡಿಸೆಂಬರ್ 5ರಂದು ಎಫ್‍ಎಸ್‍ಎಲ್ ನಿರ್ದೇಶಕರ ಮುಂದೆ ಹಾಜರು ಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ. ಅದನ್ನು ಪಾಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಶ್ರದ್ಧಾಳನ್ನು ಆರೋಪಿ ಕೊಲೆ ಮಾಡಿ 35 ತುಂಡುಗಳಾಗಿ ಕತ್ತರಿಸಿದ್ದು, ಈ ಹತ್ಯೆ ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ. ಆರೋಪಿಯ ಕ್ರೂರತೆಗೆ ದೇಶವೇ ಬೆಚ್ಚಿ ಬಿದ್ದಿದೆ.
#AftabAminPoonawalla, #undergo, #pending, #polygraphtest,