ನವದೆಹಲಿ,ಡಿ.16- ಸಹ ಜೀವನ ನಡೆಸುತ್ತಿದ್ದ ಶ್ರದ್ಧಾವಾಲ್ಕರ್ ಅವರನ್ನು ಭೀಕರವಾಗಿ ಹತ್ಯೆ ಮಾಡಿ ಜೈಲು ಸೇರಿರುವ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ.ನಾಳೆ ಹೆಚ್ಚುವರಿ ಸೆಷನ್ಸ್ ನ್ಯಾಯಾೀಶರಾದ ವೃಂದಾಕುಮಾರಿ ಅವರ ಮುಂದೆ ಅರ್ಜಿ ವಿಚಾರಣೆಗೆ ಬರಲಿದೆ ಎಂದು ಅಫ್ತಾಬ್ ಪರ ವಕೀಲ ಹೇಳಿದ್ದಾರೆ.
ಆರಂಭಿಕ ತನಿಖೆಗಳು ಮುಗಿದಿವೆ. ದೋಷಾರೋಪಣ ಪಟ್ಟಿ ಸಲ್ಲಿಸುವುದು ಬಾಕಿ ಇದೆ. ಹೀಗಾಗಿ ಆತನನ್ನು ನ್ಯಾಯಾಂಗ ಬಂಧನದಲ್ಲಿಟ್ಟುಕೊಳ್ಳುವ ಅಗತ್ಯ ಇಲ್ಲ ಎಂದು ವಕೀಲರು ತಿಳಿಸಿದ್ದಾರೆ.
ಸ್ಥಳೀಯ ನ್ಯಾಯಾಲಯ ಡಿ.9ರಂದು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ್ತಿತ್ತು. ಕಳೆದ 6 ತಿಂಗಳ ಹಿಂದೆ ಅಫ್ತಾಬ್ ಶ್ರದ್ಧಾಳನ್ನು ಕತ್ತು ಹಿಸುಕಿ ಕೊಲೆ ಮಾಡಿ 35 ತುಂಡುಗಳನ್ನಾಗಿ ಕತ್ತರಿಸಿ 300 ಲೀಟರ್ ಫ್ರಿಡ್ಜ್ನಲ್ಲಿ ಸಂಗ್ರಹಿಸಿಟ್ಟಿದ್ದ.
ಉಗ್ರರ ಮೇಲಿನ ತಮ್ಮ ಪ್ರೇಮವನ್ನು ಡಿಕೆಶಿ ಜಗಜ್ಜಾಹೀರು ಮಾಡಿದ್ದಾರೆ : ಕಟೀಲ್
ನಂತರ ಒಂದೊಂದೆ ತುಂಡುಗಳನ್ನು ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆಯುವ ಮೂಲಕ ಕೆಲವು ತುಂಡುಗಳನ್ನು ವಿಲೇವಾರಿ ಮಾಡಿದ್ದ. ಶ್ರದ್ಧಾಳ ಸಂಬಂಕರಿಗೆ ಆಕೆ ಅದೃಶ್ಯವಾಗಿರುವ ಬಗ್ಗೆ ಅನುಮಾನ ಬಂದು ದೂರು ನೀಡಿದ್ದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಈ ಹತ್ಯೆ ಅತ್ಯಂತ ಭೀಕರ ಹಾಗೂ ವಿಕೃತವಾಗಿದ್ದು, ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಆರೋಪಿಯನ್ನು ಗರಿಷ್ಠ ಶಿಕ್ಷೆಗೊಳಪಡಿಸಬೇಕೆಂದು ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ.
#AftabPoonawala, #DelhiCourt, #seeking, #bail, #ShraddhaWalkar, #MurderCase,