ತುಂಡು ತುಂಡಾಗಿ ಕತ್ತರಿಸುವುದಾಗಿ 2020ರಲ್ಲೇ ಬೆದರಿಕೆ ಹಾಕಿದ್ದ ಅಫ್ತಾಬ್‍

Social Share

ನವದೆಹಲಿ,ನ.23- ದೇಶವೇ ಬೆಚ್ಚಿ ಬೀಳುವಂತೆ ಮಾಡಿದ ಶ್ರದ್ಧಾ ಕೊಲೆ ಪ್ರಕರಣದಲ್ಲಿ ಮತ್ತೊಂದು ಮಾಹಿತಿ ಹೊರ ಬಂದಿದ್ದು, 2020ರಲ್ಲೇ ಅಫ್ತಾಬ್‍ನನ್ನು ಕೊಂದು ತುಂಡು ತುಂಡಾಗಿ ಕತ್ತರಿಸುವ ಬೆದರಿಕೆ ಹಾಕಿದ್ದಾನೆ ಎಂದು ಆಕೆ ದೂರು ನೀಡಿರುವುದು ಬೆಳಕಿಗೆ ಬಂದಿದೆ.

ಶ್ರದ್ಧಾಳೊಂದಿಗೆ ಸಹ ಜೀವನ ನಡೆಸುತ್ತಿದ್ದ ಅಫ್ತಾಬ್ ಅಮೀನ್ ಪೂನಾವಾಲ ಕಳೆದ ಮೇ ತಿಂಗಳಿನಲ್ಲಿ ಕೊಲೆ ಮಾಡಿ ಆಕೆಯ ದೇಹವನ್ನು 35 ತುಂಡುಗಳನ್ನಾಗಿ ಕತ್ತರಿಸಿ ದೆಹಲಿಯ ವಿವಿಧ ಪ್ರದೇಶಗಳಲ್ಲಿ ಎಸೆದು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ್ದ.

ಸ್ನೇಹಿತರ ಸುಳಿವಿನ ಮೇರೆಗೆ ಪ್ರಕರಣ ಬಯಲಿಗೆ ಬಂದಿತ್ತು. ಈಗ ಮತ್ತೊಂದು ಮಾಹಿತಿ ಹೊರ ಬಂದಿದ್ದು, 2020ರ ನವೆಂಬರ್ 23ರಂದು ಶ್ರದ್ಧಾ ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ತುಳಿಂಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಉದ್ಯಮವಾಗುತ್ತಿದೆ ರಾಜಕಾರಣ, ಎಲ್ಲಾ ಪಕ್ಷಗಳಲ್ಲೂ ಫ್ಯಾಮಿಲಿ ಪಾಲಿಟಿಕ್ಸ್

ಅಫ್ತಾಬ್ ನನ್ನನ್ನು ನಿಂದಿಸುತ್ತಾನೆ. ಹಲ್ಲೆ ಮಾಡಿದ್ದಾನೆ. ಇಂದು ಆತ ನನ್ನನ್ನು ಉಸಿರುಗಟ್ಟಿಸಿ ಕೊಲ್ಲಲು ಪ್ರಯತ್ನಿಸಿದ. ನನ್ನನ್ನು ಬೆದರಿಸಿ ಬ್ಲಾಕ್‍ಮೇಲ್ ಮಾಡುತ್ತಿದ್ದಾನೆ. ತುಂಡು ತುಂಡಾಗಿ ಕತ್ತರಿಸಿ ದೂರ ಎಸೆಯುವುದಾಗಿ ಎಚ್ಚರಿಸಿದ್ದಾನೆ. ನನಗೆ ಆತನ ಬೆದರಿಕೆಯಿಂದ ಭಯವಾಗಿದ್ದು, ಈವರೆಗೂ ಪೊಲೀಸರಿಗೆ ದೂರು ನೀಡುವ ಧೈರ್ಯ ಬಂದಿರಲಿಲ್ಲ ಎಂದು ಹೇಳಿದ್ದಳು ಎನ್ನಲಾಗಿದೆ.

ಆಕೆ ಬರೆದಿರುವ ಪತ್ರದಲ್ಲಿ ಅಫ್ತಾಬ್ ನನ್ನ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಆತನ ಕುಟುಂಬದ ಸದಸ್ಯರಿಗೂ ಮಾಹಿತಿ ಇತ್ತು. ಕಳೆದ ಆರು ತಿಂಗಳಿನಿಂದಲೂ ಆತ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದಾನೆ. ಮೊದಲಿನಿಂದಲೂ ನಾನು ಆತನ ಜತೆ ಸಹಜೀವನ ನಡೆಸುತ್ತಿದ್ದೇನೆ. ಕುಟುಂಬ ಸದಸ್ಯರ ಅನುಪತಿ ಪಡೆದು ಮದುವೆಯಾಗುವ ಸಾಧ್ಯತೆಗಳಿದ್ದವು. ಆದರೆ, ಆತನ ವರ್ತನೆಗಳನ್ನು ನೋಡಿದ ಮೇಲೆ ನನಗೆ ಅಫ್ತಾಬ್ ಜತೆ ಬದುಕು ನಡೆಸಲು ಇಷ್ಟವಿಲ್ಲ ಎಂದು ವಿವರಿಸಿದ್ದಾಳೆ.

ಒಂದು ವೇಳೆ ನನಗೆ ದೈಹಿಕವಾಗಿ ಹಾನಿಯಾದರೆ ಆತನೇ ಕಾರಣ. ನನ್ನನ್ನು ಬೆದರಿಸುತ್ತಿರುವ ಆತ ಯಾವಾಗ, ಎಲ್ಲಿ, ಯಾವ ರೀತಿಯಲ್ಲಾದರೂ ಗಾಯಗೊಳಿಸಬಹುದು ಎಂದು ಶ್ರದ್ಧಾ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.

ಈ ದೂರು ಆಧರಿಸಿ ಪೊಲೀಸರು ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಆದರೆ, ಆಕೆಯೇ ಮತ್ತೆ ಠಾಣೆಗೆ ಬಂದು ಹೇಳಿಕೆ ನೀಡಿ ದೂರನ್ನು ಹಿಂಪಡೆದಿದ್ದಾಳೆ ಎಂದು ಮುಂಬೈನ ಡಿಸಿಪಿ ಸುಹಾಸ್ ಬಾವಾಚೆ ತಿಳಿಸಿದ್ದಾರೆ.

‘Aftab, kill, cut, me, pieces’, Shraddha, sent, SOS, police, to 2020, letter,

Articles You Might Like

Share This Article