ಕೆನಡಾದಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ

Social Share

ಟೊರೊಂಟೊ,ಜ.31- ಕೆನಡಾದಲ್ಲಿ ಮತ್ತೊಮ್ಮೆ ಹಿಂದೂ ದೇವಾಲಯದ ಮೇಲೆ ದಾಳಿ ನಡೆದಿದ್ದ ಈ ಬಾರಿ ಬ್ರಾಂಪ್ಟನ್ನ ನ ಜನಪ್ರಿಯ ಗೌರಿ ಶಂಕರ ದೇವಸ್ಥಾನದಲ್ಲಿ ಗೋಡೆಗಳ ಮೇಲೆ ಹಿಂದೂ ಧರ್ಮ ಅವಹೇಳನ , ಭಾರತ ವಿರೋ ಘೋಷಣೆಗಳನ್ನು ಬರೆಯಲಾಗಿದೆ.

ಕಳೆದ ಜುಲೈನಿಂದ ಇಂತಹ ಮೂರು ಘಟನೆಗಳು ಇಲ್ಲಿನ ಹಿಂದೂ ದೇವಾಲಯಗಳಲ್ಲಿ ನಡೆದಿವೆ ಟೊರೊಂಟೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ಘಟನೆಯನ್ನು ಖಂಡಿಸಿದೆ.ದ್ವೇಷದ ವಿಧ್ವಂಸಕ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳನ್ನು ಆಳವಾಗಿ ಘಾಸಿಗೊಳಿಸಿದೆ.

ಮತ್ತು ಭಾರತೀಯರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಹೇಳಿದೆ . ಈ ವಿಷಯ ಕುರಿತು ನಾವು ಕೆನಡಾದ ಸರ್ಕಾರಕ್ಕೆ ನಮ್ಮ ಕಳವಳವನ್ನು ವ್ಯಕ್ತಪಡಿಸಿದ್ದೇವೆ, ಭಾರತೀಯ ಪರಂಪರೆಯ ಪ್ರತೀಕವಾಗಿರುವ ದೇವಾಲಯದ ಗೋಡೆಗಳ ಮೇಲೆ ಇಂತಹ ಬರಗದ ಮೂಲಕ ವಿರೂಪಗೊಳಿಸುವುದು ಖಂಡನೀಯ ಎಂದು ಹೇಳಿದೆ.

ಕೆನಡಾ ಸರ್ಕಾರದ ಅಕೃತ ಅಂಕಿ ಅಂಶಗಳ ಪ್ರಕಾರ 2019 ಮತ್ತು 2021ರ ನಡುವೆ ಕೆನಡಾದಲ್ಲಿ ಧರ್ಮ, ಲೈಂಗಿಕ ದೌರ್ಜನ್ಯ, ಕೋಮು ದ್ವೇಷಕ್ಕೆ ಸಂಬಂಧಿಸಿದ ಅಪರಾಧ ಪ್ರಕರಣಗಳು ಶೇ.72ರಷ್ಟು ಹೆಚ್ಚಾಗಿದೆ. ಇದು ಅಲ್ಲಿನ ಭಾರತೀಯರಲ್ಲಿ ಭಯ ಹುಟ್ಟಿಸಿದೆ.

ವಿಶೇಷವಾಗಿ ಭಾರತೀಯ ಸಮುದಾಯವು ಕೆನಡಾದಲ್ಲಿ ವೇಗವಾಗಿ ಬೆಳೆಯುತ್ತಿರುವ ಜನಸಂಖ್ಯಾ ಗುಂಪಾಗಿದೆ, ಇದು ಜನಸಂಖ್ಯೆಯ ಸುಮಾರು ನಾಲ್ಕು ಪ್ರತಿಶತವನ್ನು ಹೊಂದಿದೆ. ಖಲಿಸ್ತಾನಿ ಪರವಾದ ಶಕ್ತಿಗಳು ಭಾರತೀಯ ಸಮುದಾಯದ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಭಾರತೀಯ ಅಧಿಕಾರಿಗಳು ಪದೇ ಪದೇ ಪ್ರಸ್ತಾಪಿಸಿದ್ದಾರೆ ಇದರ ಜೊತೆಗೆ ಆಸ್ಟ್ರೇಲಿಯಾ , ನ್ಯೂಜಿಲೆಂಡ್ನಲ್ಲೂ ಹಿಂದೂ ದೇವಾಲಯಗಳ ಮೇಲೆ ದಾಳಿ ಹೆಚ್ಚುತ್ತಿರುವುದು ಮತ್ತಷ್ಟು ಕಳವಳಕಾರಿ ಸಂಗತಿಯಾಗಿದೆ.

#Australia, #Canada, #HinduTemple, #vandalised,

Articles You Might Like

Share This Article