ಅಹಮದಾಬಾದ್, ಫೆ.26 – ಮೆಕ್ಸಿಕೋದಿಂದ ಅಕ್ರಮವಾಗಿ ಭಾರತೀಯ ಪ್ರಜೆಯನ್ನು ಅಮೆರಿಕದ ಒಳಗೆ ನುಸುಳಿಸವ ಪ್ರಯತ್ನದಲ್ಲಿ ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಗುಜರಾತ್ ಪೊಲೀಸರು ಮಾನವ ಕಳ್ಳಸಾಗಣೆಗಾಗಿ ಇಬ್ಬರು ಏಜೆಂಟ್ಗಳನ್ನು ಬಂಧಿಸಿದ್ದಾರೆ.
ಅಹಮದಾಬಾದ್ ಒಬ್ಬರು ಮತ್ತು ಗಾಂಧಿನಗರದ ಇತರ ಏಳು ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಸದ್ಯ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ತಿಳಿಸಿದ್ದಾರೆ.
ಈ ಏಳು ವ್ಯಕ್ತಿಗಳು, ಬ್ರಿಜ್ಕುಕುಮಾರ್ ಯಾದವ್ ಮತ್ತು ಅವರ ಕುಟುಂಬದಿಂದ ಹಣವನ್ನು ಪಡೆದು ಅವರ ಪತ್ನಿ ಪೂಜಾ ಮತ್ತು ಮಗ ತನ್ಮಯ್ ಅವರನ್ನು ಅಕ್ರಮವಾಗಿ ಅಮೆರಿದ ಒಳಗೆ ಪ್ರವೇಶಿಸಲು ಪ್ರಯತ್ನಿಸಿದರು.ಇದರಿಂದ ಉಂಟಾಗುವ ಅಪಾಯಗಳ ಬಗ್ಗೆ ಅವರಿಗೆ ತಿಳಿಸಿರಲಿಲ್ಲ,
ಯಾದವ್ ಕಳೆದ ನವೆಂಬರ್- 11ರಂದು ಮುಂಬೈಗೆ ಕರೆದೊಯ್ಯಲಾಯಿತು, ಇಸ್ತಾನ್‍ಬುಲ್‍ಗೆ ತೆರಳಿ ನಂತರ ಮೆಕ್ಸಿಕೊಕ್ಕೆ ಕರೆದೊಯ್ಯಲಾಗಿತ್ತು ಈ ನಡುವೆ ಡಿಸೆಂಬರ್ 21 ರಂದು ಟ್ರಂಪ್ ವಾಲ್ ಎಂದೂ ಕರೆಯಲ್ಪಡುವ ಅಮೆರಿಕ -ಮೆಕ್ಸಿಕೊ ಗಡಿಯಲ್ಲಿನ ಗೋಡೆ ಮೆಇಳೆ ಸೈಕಲ್ ಮೂಲಕ ಹೋಗುವಾಗ ಕೆಳಗೆ ಬಿದ್ದು ಸಾವನ್ನಪ್ಪಿದರು .
ಘಟನೆಯಲ್ಲಿ ಪತ್ನಿ ಮತ್ತು ಮೂರು ವರ್ಷದ ಮಗನಿಗೆ ತೀವ್ರ ಗಾಯಗಳಾಗಿತ್ತು ಈ ಬಗ್ಗೆ ತನಿಖೆ ನಡೆಸಿದಾಗ ಅಕ್ರಮ ಮಾನವ ಕಳ್ಳಸಾಗಣೆ ದಂಧೆ ಗೊತ್ತಾಗಿತ್ತು.
ಉತ್ತರ ಪ್ರದೇಶ ಮೂಲದ ಯಾದವ್ ಮತ್ತು ಅವರ ಕುಟುಂಬ ಗಾಂನಗರ ಜಿಲ್ಲೆ ಯ ಕಲೋಲ್ ತಾಲೂಕಿನಲ್ಲಿ ವಾಸಿಸುತ್ತಿದ್ದರು ಅವರಿಕ ಅಮೆರಿಕ್ಕೆ ಕಳುಹಿಸುವ ಆಸೆ ತೋರಿಸಿ ಮರುಳು ಮಾಡಲಾಗಿತ್ತು.ಅಮೆರಿಕದ ಮಾಧ್ಯಮದಲ್ಲೂ ಇದು ವರದಿ ಬಂದಿತ್ತು.
ಯಾದವ್ ಸಾವಿನ ನಂತರ ಕಲೋಲ್ ತಾಲೂಕು ಪೊಲೀಸ್ ಠಾಣೆಯಲ್ಲಿ ಮಾನವ ಕಳ್ಳಸಾಗಣೆ ಪ್ರಕರಣ ದಾಖಲಾಗಿತ್ತು. ಕಳೆದ ಮಾರ್ಚ್ 2022 ರಲ್ಲಿ, ಕೆನಡಾ ಗಡಿಯ ಸಮೀಪವಿರುವ ಸೇಂಟ್ ರೆಗಿಸ್ ನದಿಯಲ್ಲಿ ದೋಣಿ ಮುಳುಗಿದ ಸಂದರ್ಭದಲ್ಲಿ ಅಮೆರಿಕ ಗಡಿ ಅಕಾರಿಗಳು ಗುಜರಾತ್‍ನ ಆರು ಯುವಕರನ್ನು ರಕ್ಷಿಸಿದ್ದರು ಆದರೆ ಅಕ್ರಮವಾಗಿ ಅಮರಿಕ ಪ್ರವೇಶಿಸಲು ಪ್ರಯತ್ನಿಸುತ್ತಿದ್ದರು ಎಂಬುದು ಗೊತ್ತಾಗಿ ಬಂಸಿದ್ದರು.
#GujaratMan, #fallstodeath, #tryingtoenter, #US, #illegally, #traffickers, #held,