ಪ್ರಧಾನಿ ಭದ್ರತೆ ಲೋಪವಾದ ಅಣತಿ ದೂರದಲ್ಲೇ ಪಾಕ್ ದೋಣಿ ಪತ್ತೆ..!

Social Share

ನವದೆಹಲಿ, ಜ.8- ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಪ್ರಕರಣದ ಕುರಿತು ತನಿಖೆ ನಡೆಯುತ್ತಿರುವಾಗಲೇ ಭದ್ರತಾ ಲೋಪವೆಸಗಲಾಗಿದ್ದ ಪಂಜಾಬ್‍ನ ಫಿರೋಜ್‍ಪುರ್ ಜಿಲ್ಲೆಯ ಗಡಿಭಾಗದ ಔಟ್‍ಪೋಸ್ಟ್ ಬಳಿ ಪಾಕಿಸ್ತಾನದ ಬೋಟ್ ಪತ್ತೆಯಾಗಿದ್ದು, ಅದನ್ನು ಬಿಎಸ್‍ಎಫ್ ವಶಕ್ಕೆ ಪಡೆದುಕೊಂಡಿದೆ.
ಫಿರೋಜ್‍ಪುರ್ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಂತಿರುವ ಪಂಜಾಬ್ ಪ್ರಾಂತ್ಯದ ಜಿಲ್ಲೆಯಾಗಿದ್ದು, ಭದ್ರತೆ ವಿಚಾರದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಈ ಮೊದಲು ಪಾಕಿಸ್ತಾನದ ಹಲವು ಡ್ರೋಣ್‍ಗಳು ಈ ಜಿಲ್ಲೆಯಲ್ಲಿ ಹಾರಾಡುತ್ತಿದ್ದು, ಬಿಎಸ್‍ಎಫ್ ಯೋಧರು ಹಲವು ಬಾರಿ ಈ ಡ್ರೋಣ್‍ಗಳನ್ನು ಹೊಡೆದುರುಳಿಸಿದ್ದರು.
ಗಡಿಯಲ್ಲಿರುವ ಟಿಡಿ ಮಾಲ್ ಔಟ್‍ಪೋಸ್ಟ್ ಬಳಿ ಬಿಎಸ್‍ಎಫ್‍ನ 136ನೆ ಬೆಟಾಲಿಯನ್‍ಗೆ ಸೇರಿದ ಸಿಬ್ಬಂದಿ ಗಸ್ತು ತಿರುಗುತ್ತಿದ್ದ ವೇಳೆ ಮರದ ದೋಣಿಯನ್ನು ಗಮನಿಸಿ ಅದನ್ನು ವಶಕ್ಕೆ ಪಡೆಯಲಾಗಿದೆ ಎಂದು ಬಿಎಸ್‍ಎಫ್ ಹಿರಿಯ ಅಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಚಳಿಗಾಲವಾದ ಕಾರಣದಿಂದ ಈ ಪ್ರದೇಶ ಪೂರ್ತಿ ಮಂಜಿನಿಂದ ಕೂಡಿತ್ತು. ದೋಣಿಯನ್ನು ವಶಕ್ಕೆ ಪಡೆದ ನಂತರ ಯಾವುದೇ ಅನುಮಾನಾಸ್ಪದವಾದ ಚಟುವಟಿಕೆ ಕಂಡರೆ ಬಿಎಸ್‍ಎಫ್‍ಗೆ ಮಾಹಿತಿ ನೀಡುವಂತೆ ಸುತ್ತಮುತ್ತಲ ಗ್ರಾಮಸ್ಥರ ಜನರಿಗೆ ಸೂಚನೆ ನೀಡಲಾಗಿದೆ.
ಸಾಮಾನ್ಯವಾಗಿ ಶಸ್ತ್ರಗಳನ್ನು ಮತ್ತು ಮಾದಕ ವಸ್ತುಗಳನ್ನು ಕಳ್ಳ ಸಾಗಾಣಿಕೆ ಮಾಡಲು ಇಂತಹ ಬೋಟ್‍ಗಳನ್ನು ಬಳಸಲಾಗುತ್ತದೆ ಎಂದು ಅಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Articles You Might Like

Share This Article