ವಿವಾದಕ್ಕೆಡೆಯಾಯ್ತು ಯುವ ಕಾಂಗ್ರೆಸ್ ನಾಯಕರ ಡ್ಯಾನ್ಸ್

Spread the love

ಮುಂಬೈ, ಮೇ 12- ಕಾಂಗ್ರೆಸ್ ಕಾರ್ಯಕರ್ತರ ರಾತ್ರಿ ಜೀವನ ಮತ್ತೊಮ್ಮೆ ವಿವಾದಕ್ಕೇ ಈಡಾಗಿದೆ. ಮಹಾರಾಷ್ಟ್ರದ ಯುವ ಕಾಂಗ್ರೆಸ್ ಕಾರ್ಯಕರ್ತರಿಗಾಗಿ ನಾಗ್ಪುರದಲ್ಲಿ ಆಯೋಜಿಸಲಾಗಿದ್ದ ತರಬೇತಿಯ ಬಳಿಕ ಯುವ ನಾಯಕರು ಮ್ಯೂಸಿಕ್, ಡ್ಯಾನ್ಸ್ ಮೊರೆ ಹೋಗಿದ್ದಾರೆ.

ಈ ಕುರಿತ ವಿಡಿಯೋವನ್ನು ಫೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಝಾದ್ ಪೂನವಾಲ, ಯಥಾ ರಾಜ ತಥಾ ಪ್ರಜಾ ಎಂದು ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿ ನೇಪಾಳದ ಕಠ್ಮಂಡುವಿನ ನೈಟ್ ಕ್ಲಬ್‍ನಲ್ಲಿ ಇರುವ ವಿಡಿಯೋ ವೈರಲ್ ಆಗಿತ್ತು. ತನ್ನ ಸ್ನೇಹಿತೆಯ ಮದುವೆಗೆ ರಾಹುಲ್ ಹೋಗಿದ್ದರು ಎಂಬ ಸಮರ್ಥನೆ ನೀಡಲಾಗಿದ್ದರು. ಬಿಜೆಪಿ ಅದೇ ವಿಡೀಯೋವನ್ನು ಇಟ್ಟುಕೊಂಡು ಪದೇ ಪದೇ ಕಾಂಗ್ರೆಸ್ ಕಾಲೆಳೆಯುತ್ತಿದೆ.

ನಾಗ್ಪುರದಲ್ಲಿ ಯುವ ನಾಯಕರು ಪೀಲೆ ಪೀಲೇ ಓ ಮರ್ಜಾನಿ ಮತ್ತು ನಾಯಕ್ ನಹಿ ಕಳ್‍ನಾಯಕ್ ಹೂ ಮೇ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ವಿಡಿಯೋ ಫೋಸ್ಟ್ ಮಾಡಿರುವ ಪೂನವಾಲ, ಐಎನ್‍ಸಿ ಎಂದರೆ ಐ ನೀಡ್ ಸೆಲಬರೇಷನ್ ಅಂಡ್ ಪಾರ್ಟಿ ಎಂದರ್ಥ. ಜೈಸಾ ರಾಜ ವೈಸಿ ಪ್ರಜಾ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಕೋಮು ಗಲಭೆಗಳು ನಡೆಯುತ್ತಿವೆ. ಜನರ ಮೇಲೆ ಸುಳ್ಳು ಕೇಸುಗಳನ್ನು ಹಾಕಲಾಗುತ್ತಿದೆ. ಭ್ರಷ್ಟಾಚಾರ ಹೆಚ್ಚಾಗಿದೆ. ಈ ನಡುವೆ ಯುವ ನಾಯಕರು ಎಲ್ಲಾ ಮರೆತು ರಾತ್ರಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ತರಬೇತಿ ಎಂದರೆ ಇದೇನಾ ಎಂದು ಪ್ರಶ್ನಿಸಿದ್ದಾರೆ.

Facebook Comments