ಚೆನ್ನೈ,ಜ.28- ಪ್ರೇಮ ವೈಫಲ್ಯದಿಂದ ಮನನೊಂದ ವೈದ್ಯರೊಬ್ಬರು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಯತ್ನಿಸಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ.
29 ವರ್ಷದ ವೈದ್ಯ ಕಾಂಚೀಪುರಂನ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ವಿದ್ಯಾರ್ಥಿನಿಯೊಬ್ಬರನ್ನು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಓದು ಮುಗಿದ ನಂತರ ಆಕೆ ವೈದ್ಯನ ಪ್ರೀತಿಯನ್ನು ನಿರಾಕರಿಸಿದ್ದರು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವೈದ್ಯ ತನ್ನ ಪ್ರೇಮಿಯೊಂದಿಗೆ ಅತಿ ಹೆಚ್ಚು ಕಾಲ ಕಳೆಯುತ್ತಿದ್ದ ಸ್ಥಳಕ್ಕೆ ತೆರಳಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಮರ್ಸಿಡಿಸ್ ಕಾರಿಗೆ ಬೆಂಕಿ ಹಚ್ಚಿ ವೈದ್ಯ ಕಾರಿನಲ್ಲೇ ಕುಳಿತಿದ್ದ ಕಾರು ಹೊತ್ತಿ ಉರಿಯುತ್ತಿದ್ದರೂ ಆತ ಹೊರ ಬರಲಿಲ್ಲ. ತಕ್ಷಣ ಸ್ಥಳೀಯರು ಪೊಲೀಸರ ಸಹಾಯದಿಂದ ಕಾರಿನಿಂದ ವೈದ್ಯರನ್ನು ಹೊರ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಕಮಲ್ ಕಾಂಗ್ರೆಸ್ ಸೇರುವುದನ್ನು ಅಲ್ಲಗಳೆದ ಮಕ್ಕಳ್ ನಿಧಿ ಮೈಯಂ ಪಕ್ಷ
ಪ್ರಾಣಾಪಾಯದಿಂದ ಪಾರಾಗಿರುವ ಭಗ್ನ ಪ್ರೇಮಿ ವೈದ್ಯರನ್ನು ಮಾನಸಿಕ ಖಿನ್ನತೆ ನಿವಾರಣೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿಗೆ ಬೆಂಕಿ ಹಚ್ಚಿಕೊಳ್ಳುವ ಸಂದರ್ಭದಲ್ಲಿ ವೈದ್ಯನ ಪ್ರೇಯಸಿ ಅಲ್ಲಿರಲಿಲ್ಲ. ತಕ್ಷಣ ಆಕೆಯ ನಂಬರ ಪಡೆದು ಪರಿಶೀಲಿಸಿದಾಗ ಆಕೆ ಬೇರೊಂದು ಸ್ಥಳದಲ್ಲಿ ಸೇಫ್ ಆಗಿರುವ ವಿಷಯ ತಿಳಿಯಿತು ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಪ್ರೇಮ ವೈಫಲ್ಯದಿಂದ ಖಿನ್ನತೆಗೊಳಗಾಗಿ ವೈದ್ಯ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಅದೃಷ್ಟವಶಾತ್ ಆತ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
tiff, girlfriend, doctor, burns, luxury car, Tamil Nadu,