ಕೋಲಾರ, ಜು.21- ಸೈನ್ಯಕ್ಕೆ ಸೇರಲು ಬಯಸಿದ ಅಗ್ನಿವೀರರಿಗೆ ತರಬೇತಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ದೇವರಾಜ್ ಭೇಟಿ ನೀಡಿ ಸೂರ್ತಿ ತುಂಬಿದರು.
ನಗರದ ರೈಲ್ವೆ ನಿಲ್ದಾಣ ಸಮೀಪದ ಮೈದಾನದಲ್ಲಿ ಕೋಲಾರ ಸೋರ್ಟ್ ಕ್ಲಬ್ ವತಿಯಿಂದ ಅಗ್ನಿವೀರರಿಗೆ 20 ದಿನಗಳಿಂದ ಉಚಿತ ತರಬೇತಿ ನೀಡಲಾಗುತ್ತಿದ್ದು, ಇಂದು ಬೆಳಗ್ಗೆ ಎಸ್ಪಿ ದೇವರಾಜ್ ಅವರು ಭೇಟಿ ನೀಡಿ ಕವಾಯತುಗಳನ್ನು ವೀಕ್ಷಿಸಿದ ನಂತರ ಅಗ್ನಿವೀರರಿಗೆ ಸೂರ್ತಿ ತುಂಬಿ ಧೈರ್ಯದ ಸಲಹೆಗಳನ್ನು ನೀಡಿ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು.
ಅಗ್ನಿವೀರರಿಗೆ ನಿವೃತ್ತ ಸೈನಿಕರಾದ ಸುರೇಶ್, ಕೃಷ್ಣಮೂರ್ತಿ ತರಬೇತಿ ನೀಡುತ್ತಿದ್ದಾರೆ. ತರಬೇತಿಗೆ ಪೂರಕವಾದ ಎಲ್ಲಾ ವ್ಯವಸ್ಥೆಗಳನ್ನು ಕೋಲಾರ ಸೋಟ್ರ್ಸ್ ಕ್ಲಬ್ನ ಪುರುಷೋತ್ತಮ್, ಜಯಪ್ರಕಾಶ್, ಸಾ.ಮ. ಬಾಬು, ಅಪ್ಪಿ ನಾರಾಯಣಸ್ವಾಮಿ, ಸುರೇಶ್ ನೇತೃತ್ವ ವಹಿಸಿದ್ದಾರೆ.