ಕೃಷಿ ಯಂತ್ರೋಪಕರಣಗಳ ಅಂಗಡಿಗಳಿಗೆ ಲಾಕ್‍ಡೌನ್‍ನಿಂದ ವಿನಾಯಿತಿ

ಬೆಂಗಳೂರು, ಏ.5-ಕೇಂದ್ರ ಗೃಹ ಸಚಿವಾಲಯದ ನಿರ್ದೇಶನದಂತೆ ರಾಜ್ಯದಲ್ಲಿ ಕೃಷಿ ಯಂತ್ರೋಪಕರಣಗಳ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.

ಗೃಹ ಸಚಿವಾಲಯದ ಮಾರ್ಗಸೂಚಿ ಪ್ರಕಾರ ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ಬೀಗ ಹಾಕಿರುವ ಕೃಷಿ ಯಂತ್ರೋಪಕರಣಗಳು ಮತ್ತು ಬಿಡಿ ಭಾಗಗಳನ್ನು ಮಾರಾಟ ಮಾಡುವ ಅಂಗಡಿಗಳಿಗೆ ವಿನಾಯಿತಿ ನೀಡಲಾಗಿದೆ.

ಕೃಷಿ ಯಂತ್ರೋಪಕರಣಗಳ ಅಂಗಡಿಗಳು, ಅದರ ಬಿಡಿ ಭಾಗಗಳು (ಸರಬರಾಜು ಸರಪಳಿ ಸೇರಿದಂತೆ) ಮತ್ತು ರಿಪೇರಿ ಮಾಡುವವರು ತಕ್ಷಣದಿಂದ ಗೃಹ ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ ಸಾಮಾಜಿಕ ಅಂತರದೊಂದಿಗೆ ಅಂಗಡಿಗಳನ್ನು ತೆರೆದು ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ.

# ಕೊರೋನ ಬಿಸಿಗೆ ಬಾಡಿದ ಹೂಗಳು: ಕಂಗಾಲಾದ ರೈತರು : 
ಹೂ ಬೆಳೆಯುವುದರಲ್ಲಿ ತಾಲ್ಲೂಕು ನಂಬರ್ ಒನ್ ಆಗಿದ್ದು, ಮಾರುಕಟ್ಟೆಯಲ್ಲಿ ಹೂವಿನ ರಪ್ತು ಸ್ಥಗಿತಗೂಂಡ ಕಾರಣ ಸಾವಿರಾರು ರೈತ ಕುಟುಂಬಗಳು ಕಂಗಲಾಗಿವೆ.  ಜಿಲ್ಲೆಯಲ್ಲಿ ಹೂವಿನ ಕೃಷಿಯಲ್ಲಿ ತೊಡಗಿಕೊಂಡವರು ಸಣ್ಣ ಸಣ್ಣ ರೈತರೆ ಹೆಚ್ಚು ಸಂಖ್ಯೆಯಲ್ಲಿದ್ದಾರೆ.

ತಾಲ್ಲೂಕಿನಲ್ಲಿ ಹೆಚ್ಚಾಗಿ ಗುಲಾಬಿ, ಸೇವಂತಿಗೆ, ಚಂಡು ಹೂ, ಕನಕಾಂಬರ ಸುಗಂಧರಾಜ, ಮಲ್ಲಿಗೆ ಹೂಗಳನ್ನು ಬೆಳೆಯುತ್ತಿದ್ದಾರೆ. ಆದರೆ ಲಾಕ್‍ಡೌನ್ ಮಾಡಿದ ಪರಿಣಾಮ ರೈತರ ತೋಟಗಳಲ್ಲಿ ಗುಲಾಬಿ ಮತ್ತು ಸೇವಂತಿಗೆ ಹೂಗಳನ್ನು ಕೇಳುವವರಿಲ್ಲದಂತಾಗಿದೆ. ಯಾವ ತೋಟದಲ್ಲಿ ನೋಡಿದರೂ ಹೂ ತುಂಬಿಕೊಂಡಿದ್ದು ಅದನ್ನು ಬಿಡಿಸಿ ರಫ್ತು ಮಾಡಲು ಕೊರೊನಾ ಅಡ್ಡಿಯಾಗಿದೆ.

ಪೊಲೀಸರು ಸಹ ರೈತರ ವಾಹನಗಳನ್ನು ಬಿಡುತ್ತಿಲ್ಲ ವಾದ್ದರಿಂದ ಹೂ ಬೆಳೆದ ಬೆಳೆದ ರೈತರು ಕಂಗಾಲಾಗಿದ್ದಾರೆ. ಸಾವಿರಾರು ರೂ. ಔಷಧಿಗಳನ್ನು ಸಿಂಪಡಿಸಿ ಬೆಳೆದ ರೈತನ ಗೋಳು ಕೇಳುವವರಿಲ್ಲದಂತಾಗಿದೆ. ಹಬ್ಬ ಹರಿದಿನಗಳಲ್ಲಿ 200 ರೂ. ಮತ್ತು ಸೇವಂತಿಗೆ 250 ರೂ. ಕೆಜಿಗೆ ಕೊಟ್ಟು ಗ್ರಾಹಕರು ಖರೀದಿಸುತ್ತಿದ್ದರು. ಕಳೆದ 28 ದಿನಗಳಿಂದ ತೊಟಗಳಲ್ಲೇ ಹೂ ಒಣಗುತ್ತಿರುವ ದೃಶ್ಯ ತಾಲ್ಲೂಕಿನಾದ್ಯಂತ ಕಾಣಬಹುದಾಗಿದೆ.

ರೈತರು ಬೆಳದು ನಿಂತ ಹೂಗಿಡಗಳನ್ನು ಬುಡದ ಮಟ್ಟಕ್ಕೆ ಕತ್ತರಿಸಿ ಬೆಂಕಿ ಹಾಕುತ್ತಿದ್ದಾರೆ. ಸಂಕಷ್ಟದಲ್ಲಿರುವ ರೈತನ ನೆರವಿಗೆ ಸರ್ಕಾರ ಧಾವಿಸಬೇಕು ಎಂಬುದು ರೈತರ ಆಗ್ರಹವಾಗಿದೆ.

Sri Raghav

Admin