ಸರ್ವಪಕ್ಷ ಸಭೆ ಕರೆದ ಕೇಂದ್ರ ಸರ್ಕಾರ

Social Share

ನವದೆಹಲಿ,ಜ.30-ತೀವ್ರ ಕುತೂಹಲ ಕೆರಳಿಸಿರುವ 2023-24 ಸಾಲಿನ ಬಜೆಟ್ ಕುರಿತಂತೆ ಇಂದು ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದಿದೆ. ಬಜೆಟ್ ಅಧಿವೇಶನ ಸರಾಗವಾಗಿ ಸಾಗಲು ಎಲ್ಲಾ ಪಕ್ಷಗಳೂ ಸಹಕಾರ ಕೊಡಬೇಕೆಂದು ಸರ್ಕಾರ ಈ ಸಂದರ್ಭದಲ್ಲಿ ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಈ ಸಭೆಯಲ್ಲಿ ವಿಪಕ್ಷಗಳು ತಮ್ಮ ಅನಿಸಿಕೆ ತೋರ್ಪಡಿಸಲಿದ್ದು, ಅಧಿವೇಶನದಲ್ಲಿ ತಾವು ಪ್ರಸ್ತಾಪಿಸುವ ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಳ್ಳುವ ನಿರೀಕ್ಷೆ ಇದೆ.

ಸರ್ವಪಕ್ಷ ಸಭೆಯ ಬಳಿಕ ಆಡಳಿತಾರೂಢ ಎನ ಡಿಎ ಮೈತ್ರಿಕೂಟದ ನಾಯಕರು ಕೂಡ ಸಭೆ ಸೇರಿ ಬಜೆಟ್ ಅಧಿವೇಶನದ ಕುರಿತು ಚರ್ಚಿಸಲಿದ್ದಾರೆ. ಫೆಬ್ರುವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದು , ಇದು ಈ ಸರ್ಕಾರದ ಕೊನೆಯ ಪೂರ್ಣಪ್ರಮಾಣದ ಬಜೆಟ್ ಆಗಿರುವುದರಿಂದ ಜನಸಾಮಾನ್ಯರಿಗೆ ಬಹಳಷ್ಟು ನಿರೀಕ್ಷೆಗಳಿವೆ.

ಜಾಗತಿಕ ಆರ್ಥಿಕ ಹಿಂಜರಿತ ಎದುರಾಗುತ್ತಿರುವುದರಿಂದ ಆ ನಿಟ್ಟಿನಲ್ಲಿ ಸರ್ಕಾರ ಸುಧಾರಣಾ ಕ್ರಮಗಳತ್ತ ಗಮನ ನೀಡುವ ಜೊತೆಗೆ ಅಥವಾ ಚುನಾವಣೆ ಹಿನ್ನೆಲೆಯಲ್ಲಿ ಜನಪ್ರಿಯ ಬಜೆಟ್ ಮಮಡನೆಯಾಗಲಿದೆ ಎಂದು ಹೇಳಲಾಗ್ತಿದೆ.

ಹುತಾತ್ಮ ವಿಂಗ್ ಕಮಾಂಡರ್ ಹನುಮಂತರಾವ್ ಅವರಿಗೆ ಸರ್ಕಾರೀ ಗೌರವಗಳೊಂದಿಗೆ ವಿದಾಯ

ವಿಶೇಷ ಎಂದರೆ ಹೊಸದಾಗಿ ನಿರ್ಮಿಸಿರುವ ಸಂಸದೀಯ ಭವನದಲ್ಲಿ. ಬಜೆಟ್ ಅಧಿವೇಶನ ನಾಳೆ ಆರಂಭವಾಗಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತïನ ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದಾದ ಬಳಿಕ ಆರ್ಥಿಕ ಸಮೀಕ್ಷೆಯನ್ನು ಸಂಸತïನಲ್ಲಿ ಮಂಡನೆ ಮಾಡಲಾಗುತ್ತದೆ.

ಫೆ.1 ರಂದು ಬಜೆಟ್ ಮಂಡನೆಯಾದ ಬಳಿಕವೂ ಅಧಿವೇಶ ಮುಂದುವರಿದು ಉಭಯ ಸದನಗಳಲ್ಲಿ ಕಲಾಪ ಫೆಬ್ರುವರಿ 13ರವರೆಗೂ ನಡೆಯಲಿದೆ.

Budget Session, govt, convenes, all-party, meeting,

Articles You Might Like

Share This Article