ಅಹಮದಾಬಾದ್,ಫೆ.18- 56 ಜನರು ಮರಣಿಸಲು ಮತ್ತು 200ಕ್ಕೂ ಹೆಚ್ಚು ಅಧಿಕ ಮಂದಿ ಗಾಯಗೊಳ್ಳಲು ಕಾರಣವಾಗಿದ್ದ 2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿನ 38 ಅಪರಾಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ಇಂದು ತೀರ್ಪು ನೀಡಿದೆ. ವಿಶೇಷ ನ್ಯಾಯಾಲಯದ ನ್ಯಾಯಾೀಧಿಶ ಎ.ಆರ್.ಪಟೇಲ್ ಅವರು ಪ್ರಕರಣದ ಇತರ 11 ತಪ್ಪಿತಸ್ಥರಿಗೆ ಸಾಯುವ ತನಕ(ಜೀವಿತಾವಧಿ) ಸೆರೆವಾಸದ ಶಿಕ್ಷೆ ವಿಧಿಸಿದ್ದಾರೆ.
ಫೆ.8ರಂದು ನ್ಯಾಯಾಲಯವು ಪ್ರಕರಣದಲ್ಲಿ 49 ಆರೋಪಿಗಳನ್ನು ದೋಷಿಗಳು ಎಂದು ತಿಳಿಸಿತ್ತು. ಇತರ 28 ಮಂದಿಯನ್ನು ಖುಲಾಸೆಗೊಳಿಸಿತ್ತು.
2008ರ ಜುಲೈ 26ರಂದ 71 ನಿಮಿಷಗಳಲ್ಲಿ 21ಕ್ಕೂ ಅಧಿಕ ಕಡೆ ಸ್ಫೋಟಗಳ ಸಂಭವಿಸಿದ್ದವು. ನ್ಯಾಯಾಲಯವು ಕಳೆದ ವರ್ಷ ಸೆಪ್ಟೆಂಬರ್‍ನಲ್ಲಿ 77 ಆರೋಪಿಗಳ ವಿಚಾರಣೆಯನ್ನು ಪೂರೈಸಿತ್ತು.
ವಿಚಾರಣೆಗೊಳಪಟ್ಟ 78 ಆರೋಪಿಗಳ ಪೈಕಿ ಒಬ್ಬ ಮಾಜಿ ಸಾಕ್ಷಿಯಾಗಿ ಪರಿವರ್ತಿತನಾಗಿದ್ದ. ಇಂಡಿಯನ್ ಮುಜಾಹಿದೀನ್( ಐಎಂ) ಉಗ್ರಗಾಮಿ ಸಂಘಟನೆ ಈ ಕೃತ್ಯದ ಹೊಣೆ ಹೊತ್ತಿತ್ತು. ಈ ಘಟನೆಯಲ್ಲಿ 56 ಮಂದಿ ಅಸುನೀಗಿ 200 ಜನರು ಗಾಯಗೊಂಡಿದ್ದರು. ತೀರ್ಪು ನೀಡಿದ ವಿಶೇಷ ನ್ಯಾಯಾೀಧಿಶ ಎ.ಆರ್.ಪಟೇಲ್ ಅವರು ಸೋಟಗಳಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ 1 ಲಕ್ಷ ರೂ. ಪರಿಹಾರ ಪ್ರಕಟಿಸಿದರು. ಗಂಭೀರವಾಗಿ ಗಾಯಗೊಂಡವರಿಗೆ 50,000ರೂ. ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 25,000ರೂ. ಪರಿಹಾರ ನೀಡಬೇಕೆಂದು ಅವರು ಆದೇಶಿಸಿದರು.
ಗಲ್ಲುಶಿಕ್ಷೆಗೆ ಗುರಿಯಾದವರ ಪೈಕಿ ಶಸ್ತ್ರಾಸ್ತ್ರ ಕಾಯ್ದೆಯಡಿ ದೋಷಿ ಎಂದು ಸಾಬೀತಾದ ಏಕೈಕ ಆರೋಪಿ ಉಸ್ಮಾನ್ ಅಗರ್‍ಬತ್ತಿವಾಲಾಗೆ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 49 ದೋಷಿಗಳ ಪೈಕಿ ಪ್ರತಿಯೊಬ್ಬರಿಗೂ ಐಪಿಸಿ, ಯುಎಪಿಎ, ಸೋಟಕ ವಸ್ತುಗಳ ಅಧಿನಿಯಮ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ತಡೆಗಟ್ಟುವ ಕಾಯ್ದೆಯ ಸೆಕ್ಷನ್‍ಗಳಡಿ ಶಿಕ್ಷೆ ವಿಧಿಸಲಾಗಿದೆ.
ಇದಲ್ಲದೆ, 48 ದೋಷಿಗಳಿಗೆ ತಲಾ 2.85 ಲಕ್ಷ ರೂ. ಜುಲ್ಮಾನೆಯನ್ನೂ ನ್ಯಾಯಾೀಧಿಶರು ವಿಧಿಸಿದರು. ಶಸ್ತ್ರಾಸ್ತ್ರ ಕಾಯ್ದೆಯಡಿ ಹೆಚ್ಚುವರಿ ಶಿಕ್ಷೆಗೆ ಗುರಿಯಾಗಿರುವ ಅಗರ್‍ಬತ್ತಿವಾಲಾ 2.88 ಲಕ್ಷ ರೂ. ಜುಲ್ಮಾನೆಗೂ ಗುರಿಯಾಗಿದ್ದಾನೆ.
ಈ ಮುನ್ನ ನ್ಯಾಯಾೀಧಿಶರು ದೋಷಿಗಳಿಗೆ ನೀಡಬೇಕಾದ ಶಿಕ್ಷೆಯ ಪ್ರಮಾಣ ಕುರಿತು ವಾದ-ಪ್ರತಿವಾದ ಆಲಿಸಿದರು. ಆರೋಪಿಗಳ ಪರ ವಕೀಲರು ತಮ್ಮ ಕಕ್ಷಿದಾರರಿಗೆ ಕನಿಷ್ಠ ಪ್ರಮಾಣದ ಶಿಕ್ಷೆ ವಿಸಬೇಕೆಂದು ಮನವಿ ಮಾಡಿದರೆ, ತಪ್ಪಿತಸ್ಥರಿಗೆ ಗರಿಷ್ಠ ಶಿಕ್ಷೆ ಅಂದರೆ ಮರಣ ದಂಡನೆ ವಿಧಿಸಬೇಕೆಂದು ಪ್ರಾಸಿಕ್ಯೂಷನ್ ಕೋರಿತ್ತು.
2008ರ ಜುಲೈ 26ರಂದು ಅಹಮದಾಬಾದ್‍ನಲ್ಲಿ ಸರ್ಕಾರಿ ಸ್ವಾಮ್ಯದ ಸಿವಿಲ್ ಆಸ್ಪತ್ರೆ, ಅಹಮದಾಬಾದ್ ನಗರ ಪಾಲಿಕೆ ಸ್ವಾಮ್ಯದ ಎಲ್‍ಜಿ ಆಸ್ಪತ್ರೆ, ಬಸ್‍ಗಳು, ನಿಲ್ಲಿಸಲಾಗಿದ್ದ ಸೈಕಲ್‍ಗಳು, ಕಾರ್‍ಗಳು ಮತ್ತು ಇತರ ಸ್ಥಳಗಳೂ ಸೇರಿದಂತೆ ವಿವಿಧ ತಾಣಗಳಲ್ಲಿ ಸುಮಾರು 22 ಬಾಂಬ್‍ಗಳು ಸ್ಫೋಟಗೊಂಡವು.
ಘಟನೆಯಲ್ಲಿ 56 ಮಂದಿ ಸಾವನ್ನಪ್ಪಿ ಸುಮಾರು 200 ಜನರು ಗಾಯಗೊಂಡರು. 24 ಬಾಂಬ್‍ಗಳ ಪೈಕಿ ಕಲೋಲ್ ಮತ್ತು ನರೋಡಾದಲ್ಲಿ ಇರಿಸಿದ್ದ ಬಾಂಬ್‍ಗಳು ಮಾತ್ರ ಸ್ಫೋಟಗೊಳ್ಳಲಿಲ್ಲ.
