ಅಹಮದಾಬಾದ್.ಜು.25- ದುಶ್ಚಟಕ್ಕೆ ಬಿದ್ದ ಮಕ್ಕಳನ್ನು ಸರಿ ದಾರಿಗೆ ತರಲು ಪೊೀಷಕರು ಪರಿ ಪರಿಯಾಗಿ ಕಷ್ಟ ಪಡುತ್ತಾರೆ ಆದರೆ ಅದು ಸಾಧ್ಯವಾಗದಿದ್ದಾಗ ಕಠಿಣ ನಿರ್ಧಾರಕ್ಕೆ ಬರುತ್ತಾರೆ ಅದು ಕೊಲ್ಲುವ ಹಂತಕ್ಕೆ ಬಂದರೆ ?….. ಇಂತಹ ಭೀಕರ ಘಟನೆಯೊಂದು ಇಲ್ಲಿ ನಡೆದಿದೆ.
ತನ್ನ 21 ವರ್ಷದ ಮಗ ಡ್ರಗ್ಸï ಸೇವಿಸುತ್ತಿದ್ದಾನೆ ಎಂದು ಗೊತ್ತಾದಾಗ ಭಾರಿ ನೋವನ್ನು ಅನುಭವಿಸಿದ ತಂದೆಯೊಬ್ಬ ಬುದ್ದಿ ಹೇಳಿದರೂ ಪ್ರಯೋಜನವಾಗದೆ ಮಗನನ್ನು ಕೊಂದು, ಆತನ ದೇಹದ ಭಾಗಗಳನ್ನು ಕತ್ತರಿಸಿ ರಸ್ತೆ ಬದಿ ಬಿಸಾಡಿದ್ದ ಘಟನೆ ಬೆಳಕಿಗೆ ಬಂದಿದೆ .
ಮಗನನ್ನು ಕೊಂದ ನಿವೃತ್ತ ಸರ್ಕಾರಿ ನೌಕರ ನೀಲೇಶ್ ಜೋಶಿ ಎಂಬಾತ ನೇಪಾಳಕ್ಕೆ ಹೋಗುತ್ತಿದ್ದಾಗ ಪೊೀಲಿಸರಿಗೆ ಸಿಕ್ಕಿಬಿದ್ದಿದ್ದಾರೆ. ಜುಲೈ 20 ಮತ್ತು 21ರಂದು ಅಹಮದಾಬಾದ್ ನಗರದ 2 ಸ್ಥಳಗಳಲ್ಲಿ ವ್ಯಕ್ತಿಯೊಬ್ಬರ ಕತ್ತರಿಸಿದ ತಲೆ, ಕೈ ಮತ್ತು ಕಾಲುಗಳನ್ನು ಪತ್ತೆಯಾಗಿತ್ತು, ಅವು ಒಂದೇ ವ್ಯಕ್ತಿಗೆ ಸೇರಿದವು ಎಂದು ನಂತರ ದೃಢಪಟ್ಟಿತ್ತು.
ಈ ಕೊಲೆಯ ಹಿಂದೆ ಮೃತನ ತಂದೆಯ ಕೈವಾಡವಿದೆ ಎಂಬುದು ಪೊಲೀಸರಿಗೆ ಖಚಿತವಾಗುತ್ತಿದ್ದಂತೆ ಅವರ ಮನೆಗೆ ಹೋದಾಗ ಬಾಗಿಲಿಗೆ ಬೀಗ ಹಾಕಲಾಗಿತ್ತು . ಆದರೆ ನೀಲೇಶ್ ಜೋಶಿ ಜುಲೈ 22ರಂದು ಅಹಮದಾಬಾದ್ನಿಂದ ಸೂರತ್ಗೆ ಬಸ್ನಲ್ಲಿ ತೆರಳಿದ್ದರು. ಅಲ್ಲಿಂದ ನೇಪಾಳಕ್ಕೆ ತಪ್ಪಿಸಿಕೊಳ್ಳಲು ಗೋರಖ್ಪುರಕ್ಕೆ ರೈಲನ್ನು ಹತ್ತಿದ್ದರು.
ಅಪರಾಧ ವಿಭಾಗ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ಆರೋಪಿಯನ್ನು ರಾಜಸ್ಥಾನದ ಗಂಗಾನಗರ ರೈಲು ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫï) ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಡ್ರಗ್ಸï ಮತ್ತು ಮದ್ಯದ ಚಟಕ್ಕೆ ದಾಸನಾಗಿದ್ದ ತನ್ನ ಮಗ ಸ್ವಯಂನನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ನೀಲೇಶ್ ಜೋಶಿ ಬಹಿರಂಗಪಡಿಸಿದ್ದಾರೆ.
ಜುಲೈ 18ರ ಬೆಳಗ್ಗೆ ಮಾದಕ ದ್ರವ್ಯ ಸೇವಿಸಿ ವಿಚಿತ್ರವಾಗಿ ವರ್ತಿಸಿದ್ದಾನೆ ನಂತರ ಹಣ ನೀಡುವಂತೆ ಒತ್ತಾಯಿಸಿ ತಂದೆಯ ಮೇಲೆ ಹಲ್ಲೆ ನಡೆಸಿದ ಕೋಪಗೊಂಡ ತಂದೆ ನೀಲೇಶ್ ತನ್ನ ಮಗನನ್ನು ಒದ್ದು, ಆತನ ತಲೆಗೆ ಕಲ್ಲಿನಿಂದ 7 ಬಾರಿ ಹೊಡೆದು ಕೊಲೆ ಮಾಡಿದ್ದಾರೆ.
ನಂತರ ಆ ಶವವನ್ನು ವಿಲೇವಾರಿ ಮಾಡಲು ಎಲೆಕ್ಟ್ರಿಕ್ ಗ್ರೈಂಡರ್ಮತ್ತು ದೊಡ್ಡ ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಿದರು. ಎಲೆಕ್ಟ್ರಿಕ್ ಗ್ರೈಂಡರ್ ಮೂಲಕ ಮಗನ ಶವದ ತಲೆ, ಕಾಲು ಮತ್ತು ಕೈಗಳನ್ನು ಕತ್ತರಿಸಿ, ಆರು ಭಾಗಗಳಾಗಿ ವಿಂಗಡಿಸಿ ನಂತರ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದಾರೆ
ಚೀಲಗಳನ್ನು ಬೈಕ್ನಲ್ಲಿ ಹೊತ್ತೊಯ್ದು ನಗರದ ಬೇರೆ ಬೇರೆ ಕಡೆ ಬಿಸಾಡಿದ್ದರು.