ಸೀಟು ಹಂಚಿಕೆ ಕುರಿತು ಶಾ ಜೊತೆ ಎಐಎಡಿಎಂಕೆ ಮುಖಂಡರ ಮಾತುಕತೆ

ಚೆನ್ನೈ, ಮಾ.1 (ಪಿಟಿಐ)- ಎಐಎಡಿಎಂಕೆ ಪಕ್ಷದ ಉನ್ನತ ನಾಯಕತ್ವವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಿನ್ನೆ ತಮಿಳುನಾಡು ವಿಧಾನಸಭಾ ಚುನಾವಣೆ ಸೀಟು ಹಂಚಿಕೆ ಮಾತುಕತೆ ನಡೆಸಿದೆ. ಎಐಎಡಿಎಂಕೆ ಪಕ್ಷದ ಜಂಟಿ ಸಂಯೋಜಕ ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಹಾಗೂ ಮತ್ತೊಬ್ಬ ಸಂಯೋಜಕ ಉಪಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು ಚೆನೈನ ಹೋಟೆಲೊಂದರಲ್ಲಿ ತಂಗಿದ್ದ ಅಮಿತ್ ಶಾ ಅವರನ್ನು ತಡರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಎರಡು ಗಂಟೆ ಸಾಗಿದ ಮಾತುಕತೆಯಲ್ಲಿ ಬಿಜೆಪಿ ಗೆಲ್ಲಬಹುದಾದ ಕ್ಷೇತ್ರಗಳನ್ನು ಗುರುತಿಸಿ 60 ಸೀಟುಗಳ ನಿರೀಕ್ಷೆಯನ್ನು ಸಿಎಂ ಮತ್ತು ಉಪ ಮುಖ್ಯಮಂತ್ರಿಯಲ್ಲಿ ವ್ಯಕ್ತಪಡಿಸಿದ್ದಾರೆ. ಎಐಎಡಿಎಂಕೆ ಈ ಹಿಂದೆ ಮಿತ್ರ ಪಕ್ಷವಾದ ಪಿಎಂಕೆ ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಂಡಿದ್ದು, ಅದಕ್ಕೆ 23 ಸ್ಥಾನಗಳನ್ನು ನೀಡಿತ್ತು ಎಂಬುದು ತಿಳಿದುಬಂದಿದೆ.
ತಮಿಳುನಾಡಿನಲ್ಲಿ ಒಂದೇ ಹಂತದಲ್ಲಿ ಏ.6ರಂದು ವಿಧಾನಸಭೆ ಚುನಾವಣೆಗಳು ನಡೆಯಲಿವೆ.