ಚೆನ್ನೈ, ಜು 11 – ಎಐಎಡಿಎಂಕೆ ಪ್ರಧಾನ ತಾರ್ಯದರ್ಶಿ ಆಯ್ಕೆಗಾಗಿ ನಡೆದ ಕೌನ್ಸಿಲ್ ಸಭೆ ನಡುವೆ ಎರಡು ಬಣಗಳ ನಡುವೆ ಘರ್ಷಣೆ ನಡೆದಿದೆ. ಇಲ್ಲಿನ ಪಕ್ಷದ ಕಛೇರಿ ಆವರಣದಲ್ಲಿ ಮಾಜಿ ಸಿಎಂ ಕೆ .ಪಳನಿಸ್ವಾಮಿ ಮತ್ತು ಓ ಪನ್ನೀರಸೆಲ್ವಂ ಬೆಂಬಲಿತ ನಾಯಕರು ಪರಸ್ಪರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿ ಸಬೆಗೆ ಮುನ್ನವೇ ಬಡಿದಾಡಿಕೊಂಡಿದ್ದಾರೆ.
ಇಂದು ಇಬ್ಬರು ನಾಯಕರ ಬೆಂಬಲಿಗರು ಪಕ್ಷದ ಧ್ವಜಗಳನ್ನು ಹಿಡಿದು ಪ್ರಧಾನ ಕಚೇರಿ ಮುಂದೆ ಜಮಾಯಿಸಿದ್ದರು. ಏಕಾಏಕಿ ಎರಡು ಗುಂಪುಗಳ ಕಾರ್ಯಕರ್ತರು ವಾಗ್ವಾದ ನಡೆಸಿ ಪರಸ್ಪರ ಕಲ್ಲು ತೂರಾಟ ನಿಲ್ಲಿಸಿ ವಾಹನಗಳನ್ನು ಹಾನಿಗೊಳಿಸಲಾಗಿದೆ. ಕಲವರು ಕಛೇರಿಯ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ. ಪೊಲೀಸರು ಲಾಠಿ ಚಾರ್ಚ್ ನಡೆಸಿ ಪರಿಸ್ಥಿತಿ ತಹಬದಿಗೆ ತಂದಿದ್ದಾರೆ.
ನಾಯಕನ ಆಯ್ಕೆ ಸಂಬಂಧ ಎದಿದ್ದ ವಿವಾದಕ್ಕೆ ಮದ್ರಾಸ್ ಹೈಕೋರ್ಟ್‍ಕೂಡ ಮಧ್ಯಪ್ರವೇಶಿಸಿ ಇಂದು ಸಭೆ ನಡೆಸಲು ದಿನಾಂಕ ನಿಗದಿಪಡಿಸಿತ್ತು ಆದರೂ ಸಭೆಯ ನಡವಳಿಕೆಯು ಫಲಿತಾಂಶವನ್ನು ತೀರ್ಪಿನ ಆಧಾರವಾಗಿರುತ್ತದೆ ಎಂದು ತಿಳಿಸಿತ್ತು.
ಆದರೆ ಗಲಾಟೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ, ಸಿಎಂ ಆಗಿದ್ದ ಜಯಲಲಿತಾ ಕಳೆದ 2016 ವರೆಗೆ ಎಐಎಡಿಎಂಕೆ ಪ್ರಧಾನ ತಾರ್ಯದರ್ಶಿ ಸ್ಥಾನದಲ್ಲಿದ್ದರು ನಂತರ ನಡೆದ ನಾಟಕೀಯ ಬದಲಾವಣೆ ನಡುವೆ ಇಂದು ಎಐಎಡಿಎಂಕೆ ಪರಮೊಚ್ಚ ನಾಯಕ ಸ್ಥಾನದ ಆಯ್ಕೆ ನಡೆದಿದೆ .ಮೂಲಗಲ ಪ್ರಕಾರ ಪಳನಿಸ್ವಾಮಿ ಬಣ ಮೇಲುಗೈ ಸಾಸಿದೆ ಎನ್ನಲಾಗಿದೆ.
ಕೌನ್ಸಿಲ್ ಸಭೆಯಲ್ಲಿ ಪಳನಿಸ್ವಾಮಿ ಹಂಗಾಮಿ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಂದು ಕೂಡ ಘೋಷಿಸಲಾಗಿದೆ.