ನವದೆಹಲಿ,ಅ.2- ಪಕ್ಷದ ಅಧ್ಯಕ್ಷನಾಗಿ ಆಯ್ಕೆಯಾದರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದಾಗಿ ಎಐಸಿಸಿ ಅಧ್ಯಕ್ಷ ಚುನಾವಣೆಯ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತಮ್ಮ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಅವರು, ಯಾರನ್ನು ವಿರೋಧ ಮಾಡಲು ನಾನು ಚುನಾವಣೆಗೆ ನಿಂತಿಲ್ಲ. ಪಕ್ಷದ ಬಲವರ್ಧನೆಗಾಗಿ ಸ್ರ್ಪಸಿದ್ದೇನೆ. ಹಿರಿಯ-ಕಿರಿಯ ನಾಯಕರುಗಳ ಒತ್ತಾಯದಿಂದಾಗಿ ಅಭ್ಯರ್ಥಿಯಾಗಿರುವುದಾಗಿ ಹೇಳಿದರು.
ಚುನಾವಣೆಯ ಮತ್ತೊಬ್ಬ ಅಭ್ಯರ್ಥಿ ಶಶಿ ತರೂರ್ ಅವರು ಬದಲಾವಣೆ ಬೇಕಾದರೆ ತಮಗೆ ಮತ ನೀಡಿ ಎಂದು ಪ್ರಚಾರ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಬದಲಾವಣೆ ಒಬ್ಬ ವ್ಯಕ್ತಿಯಿಂದ ಸಾದ್ಯವಿಲ್ಲ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ತೆಗೆದುಕೊಳ್ಳಬೇಕಿದೆ ಎಂದರು.