ಖರ್ಗೆ AICC ಅಧ್ಯಕ್ಷರಾಗುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ‘ಸಂಚಲನ’

Social Share

ಬೆಂಗಳೂರು,ಅ.27- ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಪಕ್ಷಕ್ಕೆ ಹೊಸ ಚೈತನ್ಯ ತುಂಬವ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಗಿದ್ದು, 47 ಮಂದಿಯ ಸಂಚಲನ ಸಮಿತಿ ರಚನೆ ಭರವಸೆಗಳನ್ನು ಹುಟ್ಟುಹಾಕಿದೆ.

ಬಹಳ ದಿನಗಳಿಂದ ರಾಷ್ಟ್ರಮಟ್ಟದಲ್ಲಿ ದುರ್ಬಲತೆಯಿಂದ ಬಳಲುತ್ತಿದ್ದ ಕಾಂಗ್ರೆಸ್‍ನ ಸಂಘಟನೆ ಶಕ್ತಿ ಹೆಚ್ಚಿಸಲು ಆಕ್ರಮಣಕಾರಿ ತಂತ್ರಗಾರಿಕೆಯ ಅಗತ್ಯವಿದ್ದು, ಅದಕ್ಕಾಗಿ ಖರ್ಗೆ ಅವರು ತಮ್ಮದೇ ಆದ ತಂಡ ಕಟ್ಟಲು ಮುಂದಾಗಿದ್ದಾರೆ.

ಕೆಲವು ರಾಜ್ಯಗಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ, ಶಾಸಕಾಂಗ ಪಕ್ಷಗಳ ನಾಯಕರ ಸ್ಥಾನಪಲ್ಲಟ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳಿಗೆ ಖರ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಚುನಾಯಿತ ಅಧ್ಯಕ್ಷರಾಗಿರುವುದರಿಂದ ತಮ್ಮದೇ ಆದ ಅಧಿಕಾರಗಳನ್ನು ಬಳಸಲು ಮುಂದಾಗಿದ್ದಾರೆ.

ಚೀನಾ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಭಾರತ, ಯಾವ ಕ್ಷೇತ್ರದಲ್ಲಿ ಗೊತ್ತೇ..?

ಈ ಮೊದಲು ಸುಮಾರು 22 ವರ್ಷಗಳ ಕಾಲ ಗಾಂ ಕುಟುಂಬದ ಹಿಡಿತದಲ್ಲಿದ್ದ ಕಾಂಗ್ರೆಸ್‍ಗೆ ಈಗ ಗಾಂಧಿಯೇತರ ವ್ಯಕ್ತಿಯ ಅಪತ್ಯದಲ್ಲಿ ಹೆಜ್ಜೆ ಹಾಕಲಾರಂಭಿಸಿದೆ. ನಿನ್ನೆ ಎಐಸಿಸಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ತತಕ್ಷಣದಿಂದಲೇ ಕಾರ್ಯಾರಂಭ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ಹಿರಿಯರನ್ನು ಒಳಗೊಂಡ ಸಂಚಲನ ಸಮಿತಿಯನ್ನು ರಚಿಸಿದ್ದಾರೆ.

ಬಹಳಷ್ಟು ಮಂದಿ ಈವರೆಗೂ ಗಾಂ ಕುಟುಂಬದ ಸುತ್ತಲೇ ಸುತ್ತುತ್ತಾ ರಾಜಕಾರಣ ಮಾಡುತ್ತಿದ್ದರು. ಸಂಘಟನೆ ವಿಷಯ ಬಂದಾಗ ಸ್ವಾರ್ಥ, ಬಟ್ಟಂಗಿತನ, ಪಾರುಪತ್ಯವನ್ನೇ ಆಧರಿಸಿ ಕ್ರಮ ವಹಿಸುತ್ತಿದ್ದರು. ಖರ್ಗೆ ಅವರು ರಾಜಕೀಯವಾಗಿ ಅರ್ಧ ಶತಮಾನಕ್ಕೂ ಹೆಚ್ಚಿನ ಅನುಭವ ಹೊಂದಿದ್ದು, ರಾಜ್ಯ ರಾಜಕಾರಣದಿಂದ ರಾಷ್ಟ್ರ ರಾಜಕಾರಣದವರೆಗೆ ಎಲ್ಲಾ ರೀತಿಯ ಅನುಭವಗಳನ್ನು ಹೊಂದಿದ್ದಾರೆ.

ಅಧಿಕಾರದ ರಾಜಕಾರಣದಲ್ಲೂ ಸಾಕಷ್ಟು ಪರಿಣತಿ ಪಡೆದಿದ್ದಾರೆ. ಹೀಗಾಗಿ ಅಷ್ಟು ಸುಲಭವಾಗಿ ಅವರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳಿವೆ. 80ರ ವಯಸ್ಸಿನಲ್ಲೂ ಹುರುಪು ಮತ್ತು ಚುಟವಟಿಕೆಗಳಿಂದಲೇ ಕೆಲಸ ಮಾಡುತ್ತಿರುವ ಖರ್ಗೆ ಅವರು, ಮೊದಲಿನಿಂದಲೂ ಸಂಘ ಪರಿವಾರ ಮತ್ತು ಅದರ ಅಂಗ ಸಂಸ್ಥೆಗಳ ಪ್ರಬಲ ವಿರೋಧಿ ಸಿದ್ಧಾಂತವನ್ನು ಪಾಲಿಸುತ್ತಾ ಬಂದಿದ್ದಾರೆ. ಹೀಗಾಗಿ ಬಿಜೆಪಿಯವರ ಜತೆ ಯಾವುದೇ ಹೊಂದಾಣಿಕೆಯ ರಾಜಕಾರಣ ಮಾಡಿಕೊಳ್ಳದೆ ಕೈ ಪಡೆಯನ್ನು ಬಲಗೊಳಿಸಲಿದ್ದಾರೆ ಎಂಬ ನಿರೀಕ್ಷೆಗಳಿವೆ.

ರಾಷ್ಟ್ರ ರಾಜಕಾರಣದಲ್ಲೇ ಅಷ್ಟೇ ಅಲ್ಲ ರಾಜ್ಯ ರಾಜಕಾರಣದಲ್ಲೂ ಬಳಷ್ಟು ಬದಲಾವಣೆಯಾಗುವ ನಿರೀಕ್ಷೆಗಳಿವೆ.
ಈವರೆಗೂ ರಾಜ್ಯ ರಾಜಕಾರಣದಲ್ಲಿ ಗಾಂಧಿ ಕುಟುಂಬ ಅದರಲ್ಲೂ ರಾಹುಲ್‍ಗಾಂಧಿಯವರ ಅಣತಿಯಂತಲೇ ಎಲ್ಲವೂ ನಡೆಯುತ್ತಿತ್ತು. ಖರ್ಗೆ ಅವರು ಅಧ್ಯಕ್ಷರಾದ ಬಳಿಕ ಕೆಲವು ನಾಯಕರ ಪ್ರಭಾವಕ್ಕೆ ಅಡೆತಡೆ ಎದುರಾಗುವ ಸಾಧ್ಯತೆಗಳಿವೆ.

ಬೆಂಗಳೂರಿನಲ್ಲಿ ವಿಷವಾಗುತ್ತಿದೆ ಗಾಳಿ, ತಜ್ಞರ ಎಚ್ಚರಿಕೆ

2008ರಿಂದ ಈವರೆಗೂ ಸತತವಾಗಿ ಖರ್ಗೆಯವರು ರಾಜ್ಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಪಕ್ಷದ ಶಿಸ್ತಿನ ಶಿಫಾಯಿ ಆಗಿ ಎಲ್ಲವನ್ನೂ ಹೈಕಮಾಂಡ್ ಆದೇಶದಂತೆ ಪಾಲಿಸುತ್ತಾ ಬಂದಿದ್ದಾರೆ. ಇದೇ ಮೊದಲ ಬಾರಿಗೆ ಖುದ್ದು ಖರ್ಗೆ ಅವರೇ ಹೈಕಮಾಂಡ್ ಆಗಿರುವುದರಿಂದ ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳಲ್ಲಿ ಮಹತ್ವದ ಬದಲಾವಣೆಗಳಾಗುವ ನಿರೀಕ್ಷೆಗಳಿವೆ.

ಬಿಜೆಪಿ ಪ್ರಭಾವ ಹೆಚ್ಚಿದಂತೆ ಕಾಂಗ್ರೆಸ್‍ನ ಮತಗಳಿಕೆಯ ಪ್ರಮಾಣ ಸರಾಸರಿ ಶೇ.35ರಿಂದ 19ಕ್ಕೆ ಕುಸಿದಿದೆ. ಈಗ ಅದನ್ನು ಮತ್ತೆ ಶೇ.40ಕ್ಕೆ ಹೆಚ್ಚಿಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಭಾವನಾತ್ಮಕ ಮತ್ತು ವಿಭಜನಾತ್ಮಕ ರಾಜಕಾರಣವನ್ನು ಪ್ರತಿರೋಧಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲಾ ನಾಯಕರನ್ನು ಒಗ್ಗೂಡಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಯತಂತ್ರ ರೂಪಿಸಲು ಮುಂದಾಗಿದ್ದಾರೆ. ಇದು ತಳಮಟ್ಟದಲ್ಲಿ ಕಾರ್ಯಕರ್ತರ ಹುಮ್ಮಸ್ಸನ್ನು ಹೆಚ್ಚಿಸಿದೆ.

ಚುನಾವಣಾ ರಾಜಕೀಯದಲ್ಲಿ ಟಿಕೆಟ್ ಹಂಚಿಕೆ ಸೇರಿದಂತೆ ಹಲವು ಘಟ್ಟಗಳಲ್ಲಿ ಖರ್ಗೆ ಅವರು ನಿರ್ಣಾಯಕರಾಗಿರುವುದರಿಂದ ಕೆಲವು ರಾಜ್ಯಗಳ ನಾಯಕರಿಗೆ ಬಿಸಿ ತುಪ್ಪವಾಗಿಯೂ ಪರಿಣಮಿಸಿದ್ದಾರೆ.

Articles You Might Like

Share This Article