ತೀರ್ಥಹಳ್ಳಿ, ಅ.1- ದೇಶಾದ್ಯಂತ ಪಾದಯಾತ್ರೆ ನಡೆಸಿ ಈ ಮೂಲಕ ದೇಶದ ಸಮಸ್ಯೆಗಳನ್ನು ಅರಿತು ದೇಶವಾಸಿಗಳ ವಿಶ್ವಾಸ ಗಳಿಸಲು ತಾವು ಮುಂದಾಗಬೇಕೆಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ 2021ರಲ್ಲೇ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಪತ್ರ ಬರೆದಿದ್ದರು.
ಪ್ರಸ್ತುತ ರಾಹುಲ್‍ಗಾಂಧಿ ಅವರು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸುದೀರ್ಘ ಮೂರೂವರೆ ಸಾವಿರ ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡು ರಾಷ್ಟ್ರದ ಗಮನ ಸೆಳೆದಿದ್ದಾರೆ. ಈ ನಿಟ್ಟಿನಲ್ಲಿ ಕಿಮ್ಮನೆ ರತ್ನಾಕರ್ ಅವರು ಒಂದು ವರ್ಷದ ಹಿಂದೆ ಬರೆದಿರುವ ಪತ್ರ ಕೂಡ ಅಷ್ಟೇ ಗಮನ ಸೆಳೆದಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪಾದಯಾತ್ರೆ ಮೂಲಕ ಹೋರಾಟಗಳನ್ನು ರೂಪಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ನಾಡು. ಈ ನಾಡಿನ ನಾಯಕರಲ್ಲಿ ತೀರ್ಥಹಳ್ಳಿಯ ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಕೂಡ ಪ್ರಮುಖರು.
ತಮ್ಮ ನಾಲ್ಕು ದಶಕಗಳ ಸಾರ್ವಜನಿಕ ಬದುಕಿನಲ್ಲಿ, ಜನರ ಪರವಾಗಿ, ನೊಂದವರ ಪರವಾಗಿ ನೂರಾರು ಪಾದಯಾತ್ರೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಈ ನಿಟ್ಟಿನಲ್ಲಿ ರಾಹುಲ್‍ಗಾಂಧಿ ಅವರಿಗೆ 2021ರ ಜೂನ್ 4ರಂದು ಪತ್ರ ಬರೆದು ದೇಶದ ಸಮಸ್ಯೆಗಳನ್ನು ಅರಿತು ಅದಕ್ಕೆ ಸ್ಪಂದಿಸುವ ಮೂಲಕ ಸಶಕ್ತ ಭಾರತ ನಿರ್ಮಾಣದ ನೇತೃತ್ವ ವಹಿಸಲು ಪೂರಕವಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದರು.
ರಾಹುಲ್‍ಗಾಂಧಿ ಅವರು ಕೈಗೊಂಡಿರುವ ಪಾದಯಾತ್ರೆಗೆ ನಿರೀಕ್ಷೆಗೂ ಮೀರಿ ಜನಸ್ಪಂದನ ವ್ಯಕ್ತವಾಗುತ್ತಿದೆ. ಜನರು ತಮ್ಮ ನೋವುಗಳು, ಅಹವಾಲುಗಳನ್ನು ಮುಗಿಬಿದ್ದು ರಾಹುಲ್‍ಗಾಂಧಿ ಅವರ ಬಳಿ ಹೇಳಿಕೊಳ್ಳುತ್ತಿದ್ದಾರೆ. ತಾಂಡವವಾಡುತ್ತಿರುವ ಬೆಲೆ ಏರಿಕೆ, ಭ್ರಷ್ಟಾಚಾರ, ನಿರುದ್ಯೋಗ, ರೈತ, ಕಾರ್ಮಿಕರ ಸಮಸ್ಯೆಗಳಿಗೆ ರಾಹುಲ್‍ಗಾಂ ಅವರು ಕಿವಿಯಾಗಿದ್ದಾರೆ.
ನಿನ್ನೆಯಷ್ಟೆ ರಾಹುಲ್‍ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಕರ್ನಾಟಕವನ್ನು ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಕಿಮ್ಮನೆ ರತ್ನಾಕರ್ ಅವರು ರಾಹುಲ್ ಅವರಿಗೆ ಬರೆದಿರುವ ಪತ್ರ ಕೂಡ ಗಮನ ಸೆಳೆದಿದೆ.
ನರೇಂದ್ರ ಮೋದಿ, ಅಮಿತ್ ಷಾ ನೇತೃತ್ವದ ಬಿಜೆಪಿ ಸರ್ಕಾರದ ದುರಾಡಳಿತ, ಕೋಮುವಾದ, ಬಂಡವಾಳ ಶಾಹಿ ನೀತಿ ವಿರುದ್ಧ ತಾವು ಸಮರ್ಥವಾಗಿ ವಾದಗಳನ್ನು ಮಂಡಿಸುತ್ತ ರೈತರು, ಕಾರ್ಮಿಕರ ಪರ ದನಿ ಎತ್ತುತ್ತ ಭವಿಷ್ಯದ ಪ್ರಧಾನಿಯಾಗಿ ಬಿಂಬಿಸಲ್ಪಡುತ್ತಿರುವ ನಿಮಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ.
ವೈಯಕ್ತಿಕ ಆಸ್ತಿಗಳಾದ ಮಹಲುಗಳನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ಮೋತಿಲಾಲ್ ನೆಹರು, ತಮ್ಮ ವೈಯಕ್ತಿಕ ಬದುಕಿನ ಬಹುಪಾಲು ಜೀವನವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಸೆರೆಮನೆ ವಾಸ ಅನುಭವಿಸಿದ ಸ್ಮರಣೀಯ ಜವಾಹರ್‍ಲಾಲ್ ನೆಹರು, ದುರ್ಗಾಮಾತೆ ಎಂದೇ ಕರೆಯಲ್ಪಟ್ಟ ದೇಶದ ಭದ್ರತೆಗಾಗಿ ಹುತಾತ್ಮರಾದ ಇಂದಿರಾಗಾಂ, ಯುವ ಜನರ ಐಕಾನ್ ಆಗಿ ಟೆಲಿಕಾಂ ಕ್ಷೇತ್ರದ ಕ್ರಾಂತಿಕಾರಿ ದಿ.ರಾಜೀವ್‍ಗಾಂಧಿ ಪಕ್ಷ ಹಾಗೂ ನಮ್ಮ ನಾಯಕರ ತ್ಯಾಗ-ಬಲಿದಾನ ವ್ಯರ್ಥವಾಗಲು ಬಿಡಲಾರೆವು.
ಈ ನಿಟ್ಟಿನಲ್ಲಿ ತಾವು ಕನ್ಯಾಕುಮಾರಿಯಿಂದ ದೆಹಲಿತನಕ ಪಾದಯಾತ್ರೆ ಮಾಡಿ ಕಾಂಗ್ರೆಸ್ ಪಕ್ಷದ ತತ್ವ-ಸಿದ್ಧಾಂತ, ಕೋಮು ಸೌಹಾರ್ದತೆಯೊಂದಿಗೆ ಬುದ್ಧ, ಬಸವ, ಮಹಾತ್ಮಗಾಂ, ಅಂಬೇಡ್ಕರ್, ನೆಹರು ಅವರ ಸಾರ್ವಕಾಲಿಕ ಚಿಂತನೆ ಹಾಗೂ ಆದರ್ಶಗಳನ್ನು ಯುವ ಪೀಳಿಗೆಗೆ ಪ್ರಚಾರಗೊಳಿಸಬೇಕು. ಪಾದಯಾತ್ರೆ ಸಮಯದಲ್ಲಿ ಪ್ರತಿ 100 ಕಿ.ಮೀ. ನಡುವೆ ವಿಚಾರ ಸಂಕಿರಣ, ವಿಚಾರ ಗೋಷ್ಠಿಗಳನ್ನು ಏರ್ಪಡಿಸಬೇಕು ಎಂಬ ಹಲವಾರು ಸಲಹೆಗಳನ್ನೊಳಗೊಂಡ ಪತ್ರ ಬರೆದಿದ್ದರು.
ಭಾರತ್ ಜೋಡೋ ಯಾತ್ರೆಗೆ ಸಾಂಸ್ಕøತಿಕ ಜವಾಬ್ದಾರಿ: ಪ್ರಸ್ತುತ ಕಿಮ್ಮನೆ ರತ್ನಾಕರ್ ಅವರಿಗೆ ಭಾರತ್ ಜೋಡೋ ಯಾತ್ರೆಯ ಸಾಂಸ್ಕøತಿಕ ಜವಾಬ್ದಾರಿ ನೀಡಲಾಗಿದೆ. ಅ.13ರ ವರೆಗೆ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಸಂಚರಿಸಲಿದೆ.
ನಂಜನಗೂಡಿನಲ್ಲಿ ಗಾಂಧೀಜಿ ಭೇಟಿ ನೀಡಿದ್ದ ಚರಕ ಘಟಕಕ್ಕೆ ಗಾಂಧಿ ಜಯಂತಿಯಂದು ರಾಹುಲ್‍ಗಾಂಧಿ ಆಗಮಿಸಲಿದ್ದಾರೆ.
ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆಯ ಸಾಂಸ್ಕøತಿಕ ಹಾಗೂ ಗಾಂಧಿ ಜಯಂತಿ ಕಾರ್ಯಕ್ರಮದ ನಿರ್ವಹಣೆ ಸಮಿತಿಗೆ ಕಿಮ್ಮನೆ ರತ್ನಾಕರ್ ಅವರನ್ನು ನಿಯೋಜಿಸಲಾಗಿದ್ದು, ಒಂದು ವಾರ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲಿದ್ದಾರೆ.
ಪಾದಯಾತ್ರೆಗೆ ಪತ್ರ ಬರೆದ ಬಗ್ಗೆ ಕಿಮ್ಮನೆ ರತ್ನಾಕರ್ ಅವರಿಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ ನಾನು ಪತ್ರ ಬರೆದಿದ್ದಕ್ಕೆ ಅವರು ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಹೇಳಲಾಗದು. ಈ ರೀತಿ ಹಲವರು ಅವರಿಗೆ ಸಲಹೆಗಳನ್ನು ನೀಡಿರಬಹುದು. ನಾನು ಕೂಡ ಈ ನಿಟ್ಟಿನಲ್ಲಿ ಅವರಿಗೆ ಪತ್ರ ಬರೆದಿದ್ದೆ.
ಅದು ಅವರನ್ನು ಪ್ರೇರೇಪಿಸಿರಬಹುದು. ಈ ಹಿಂದೆ ಯುಪಿಎ ಸರ್ಕಾರದ ಅವಯಲ್ಲಿ ರಾಹುಲ್‍ಗಾಂಧಿ ಡಿಸ್ಕವರಿ ಆಫ್ ಇಂಡಿಯಾ ಕಾರ್ಯಕ್ರಮದ ಮೂಲಕ ದೇಶ ಸುತ್ತಿದ್ದನ್ನು ನಾನಿಲ್ಲಿ ಸ್ಮರಿಸುತ್ತಿದ್ದೇನೆ. ಪಾದಯಾತ್ರೆ ಕಾರ್ಯಕ್ರಮದ ಮೂಲಕ ಜನರನ್ನು ತಲುಪುವುದಕ್ಕೂ, ಪಕ್ಷಕ್ಕೂ, ದೇಶಕ್ಕೂ ಪ್ರಯೋಜನಕಾರಿ ಎಂದು ವರ್ಷದ ಹಿಂದೆ ರಾಹುಲ್‍ಗಾಂಧಿ ಅವರಿಗೆ ಪತ್ರ ಬರೆದಿದ್ದೆ ಎಂದು ಅವರು ಹೇಳಿದರು.