ಭುವನೇಶ್ವರ್, ಡಿ.23- ಭತ್ತದ ಪೈರು ಕತ್ತರಿಸುವ ಯಂತ್ರಕ್ಕೆ ಸಿಲುಕಿ ತುಂಡಾಗಿದ್ದ ಕೈ ಅನ್ನು ಯಶಸ್ವಿಯಾಗಿ ಮರು ಜೋಡಣೆ ಮಾಡುವ ಮೂಲಕ ಭುವನೇಶ್ವರದ ಎಐಐಎಂಎಸ್ನ ವೈದ್ಯರು, ಯುವತಿಯೊಬ್ಬಳಿಗೆ ಕಳೆದು ಹೋಗುತ್ತಿದ್ದ ಜೀವನವನ್ನು ಧಕ್ಕಿಸಿಕೊಟ್ಟಿದ್ದಾರೆ.
ಒಡಿಸ್ಸಾ ರಾಜ್ಯದ ಪುರಿ ಜಿಲ್ಲೆಯಲ್ಲಿ 25 ವರ್ಷದ ಯುವತಿ ಬರ್ಷಾದಾಸ್ ಡಿಸೆಂಬರ್ 9ರಂದು ಜಮೀನಿನಲ್ಲಿ ಕೆಲಸ ಮಾಡುವಾಗ ಆಕೆಯ ದುಪ್ಪಟ್ಟ ಭತ್ತದ ಪೈರು ಕತ್ತರಿಸುವ ಯಂತ್ರಕ್ಕೆ ಸಿಲುಕಿತ್ತು. ಕ್ಷಣಾರ್ಧದಲ್ಲಿ ಯಂತ್ರದ ಸೆಳೆತಕ್ಕೆ ಸಿಲುಕಿದ ಬರ್ಷಾಳ ಎಡಗೈ ಕೂಡಕತ್ತರಿಸಿ ಹೋಗಿತ್ತು.
ಬೆಂಗಳೂರು ವಿವಿ ಆವರಣದಲ್ಲಿ ಮಾಸ್ಕ್ ಕಡ್ಡಾಯ
ತಕ್ಷಣವೇ ಆಕೆಯನ್ನು ಸಮೀಪದ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಸಂಪೂರ್ಣ ತುಂಡಾಗಿದ್ದ ಕೈ ಅನ್ನು ಐಸ್ ಬಾಕ್ಸ್ನಲ್ಲಿ ಸಂರಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರದ ಎಐಐಎಂಎಸ್ಗೆ ಕರೆದೊಯ್ಯಲಾಯಿತು.
ರಾತ್ರಿ 9 ಗಂಟೆಗೆ ಆಸ್ಪತ್ರೆ ತಲುಪಿದ ಆಕೆಯನ್ನು ಪ್ರಾಸ್ಟಿಕ್ ಸರ್ಜರಿ ಮತ್ತು ಸುಟ್ಟ ಗಾಯಗಳ ಚಿಕಿತ್ಸಾ ಘಟಕದ ಮುಖ್ಯಸ್ಥ ಡಾ.ಸಂಜಯ್ ಕುಮಾರ್ ಗಿರಿ ತಂಡ ಪರಿಶೀಲನೆ ನಡೆಸಿದೆ. ತಕ್ಷಣವೇ ಶಸ್ತ್ರ ಚಿಕಿತ್ಸೆ ನಡೆಸಿ ಕೈ ಅನ್ನು ಮರು ಜೋಡಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಅದೇ ದಿನ ರಾತ್ರಿ 11.30ಕ್ಕೆ ಶಸ್ತ್ರ ಚಿಕಿತ್ಸೆ ಶುರುವಾಗಿದೆ. ಕತ್ತರಿಸಿದ್ದ ಅಂಗವನ್ನು ಮರು ಜೋಡಣೆ ಮಾಡಲು ಎರಡು ಮೂಳೆಗಳ ಸ್ಥಿರಿಕರಣ ಮಾಡಲಾಗಿದೆ. ನಂತರ ಅಭಿಧಮನಿಯ ಜೊತೆಗೆ ಅಪಧಮನಿಯ ಪರಿಚಲನೆಯನ್ನು ಮರು ಸಂಪರ್ಕಿಸಲಾಗಿದೆ. ಎರಡು ಪ್ರಮುಖ ನರಗಳನ್ನು, ಸ್ನಾಯುಗಳು ಹಾಗೂ ಚರ್ಮದ ಜೊತೆಗೆ ದುರಸ್ಥಿ ಮಾಡಲಾಗಿದೆ. ಬೆಳಗ್ಗೆ 8 ಗಂಟೆವರೆಗೂ ನಿರಂತರವಾಗಿ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಯಶಸ್ವಿಯಾಗಿದೆ. ಬಳಿಕ ಆಕೆಯನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ.
ಶಸ್ತ್ರ ಚಿಕಿತ್ಸೆಯ 10 ದಿನಗಳ ಬಳಿಕ ಮತ್ತೆ ಯುವತಿಯನ್ನು ಶಸ್ತ್ರ ಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಹೋಗಲಾಗಿದೆ. ಮೊಣಕೈ ಬಳಿಕ ಚರ್ಮ ಸರಿಯಾಗಿ ಇರಲಿಲ್ಲ ಎಂಬ ಕಾರಣಕ್ಕೆ ಮತ್ತೊಮ್ಮೆ ಸಣ್ಣ ಪ್ರಮಾಣದ ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯರ ತಂಡ ವಿರೂಪಗಳನ್ನು ತೆರವು ಮಾಡಿ, ಬೇರೆಯಿಂದ ಚರ್ಮವನ್ನು ನಾಟಿ ಮಾಡಿದೆ. ಈಗ ಆಕೆಯ ಕೈ ಕತ್ತರಿಸಿತ್ತು ಎಂಬುದನ್ನು ತಕ್ಷಣವೇ ಕಾಣಸಿಗದಷ್ಟು ನೈಜ್ಯತೆ ಮೂಡಿದೆ.
ಬಿಜೆಪಿಗೆ ಬಿಸಿ ತುಪ್ಪವಾದ ಫ್ಯಾಮಿಲಿ ಪಾಲಿಟಿಕ್ಸ್
ಕೈ ನಲ್ಲಿನ ಎಲ್ಲಾ ನರಗಳು ಸರಿಯಾಗಿ ಕೆಲಸ ಮಾಡುತ್ತಿದ್ದು, ಆಕೆ ಉತ್ತಮವಾಗಿ ಸ್ಪಂದಿಸುತ್ತಿದ್ದಾಳೆ ಎಂದು ವೈದ್ಯಕೀಯ ಅಕ್ಷಕ ಡಾ.ಬಿಸ್ವಾಸ್ ಹೇಳಿದ್ದಾರೆ. ವೈದ್ಯಾಕಾರಿಗಳ ತಂಡದ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಸಂಪೂರ್ಣ ಸುಧಾರಿಸಿಕೊಂಡಿರುವ ಬರ್ಷಾ, ನಾನು ವಿಕಲಚೇತನಲಾಗುವುದರಿಂದ ಸ್ವಲ್ಪದರಲ್ಲೇ ಪಾರಾಗಿದ್ದೇನೆ. ಅಪಘಾತ ಸಂಭವಿಸಿದಾಗ ಇನ್ನೂ ನನ್ನ ಎಡಗೈ ನನ್ನ ಜೊತೆಗಿರುವುದಿಲ್ಲ ಎಂಬುದು ಅರಿವಾದಾಗ ಆಘಾತಕ್ಕೆ ಒಳಗಾಗಿದ್ದೆ. ಆದರೆ ವೈದ್ಯರು ನನಗೆ ಹೊಸ ಜೀವನ ಕಲ್ಪಿಸಿದ್ದಾರೆ. ವೈದ್ಯರನ್ನು ಏಕೆ ಎರಡನೇ ದೇವರು ಎಂದು ಕರೆಯುತ್ತಾರೆ ಎಂದು ನನಗೆ ಈಗ ಅರ್ಥವಾಗಿದೆ ಎಂದಿದ್ದಾರೆ.
AIIMS, doctors, Odisha, girl, replant, amputated, hand,