AC ಸ್ಫೋಟ : ತಾಯಿ, ಮಕ್ಕಳು ಸಜೀವ ದಹನ

Social Share

ರಾಯಚೂರು,ಮಾ.7- ಮನೆಯ ಬೆಡ್‍ರೂಮ್‍ನಲ್ಲಿ ಅಳವಡಿಸಿದ್ದ ಏಸಿ(ಹವಾನಿಯಂತ್ರಕ)ಸ್ಪೋಟಗೊಂಡು ಹೊತ್ತಿಕೊಂಡ ಬೆಂಕಿಯಿಂದ ತಾಯಿ ಇಬ್ಬರು ಮಕ್ಕಳು ಸಜೀವವಾಗಿ ದಹನಗೊಂಡಿರುವ ಘಟನೆ ಶಕ್ತಿನಗರದಲ್ಲಿ ನಡೆದಿದೆ.

ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದಲ್ಲಿ ಇಂಜಿನಿಯರ್ ಆಗಿರುವ ಸಿದ್ದಲಿಂಗಯ್ಯ ಅವರ ಪತ್ನಿ ರಂಜಿತಾ(33), ಪುತ್ರಿಯರಾದ ಮೃದುಲ(13) ಹಾಗೂ ತಾರುಣ್ಯ(5) ಮೃತ ದುರ್ದೈವಿಗಳು.

ಕಳೆದ ರಾತ್ರಿ ಮಲಗುವಾಗ ಏಸಿ ಆನ್ ಮಾಡಿದ್ದರು. ಸ್ವಲ್ಪ ಸಮಯದಲ್ಲಿ ಅದು ಸ್ಪೋಟಗೊಂಡು ಬೆಂಕಿ ಕಿಡಿ ಬಟ್ಟೆಗೆ ಮೇಲೆ ಬಿದ್ದಿದೆ. ಕ್ಷಣಮಾತ್ರದಲ್ಲಿ ಬೆಂಕಿ ಇಡೀ ಕೋಣೆ ಆವರಿಸಿ ಎಲ್ಲರೂ ಹೊರಬರಲಾಗದೆ. ಸಜೀವವಾಗಿ ದಹನಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್, ಜಾಮೀನು ಮಂಜೂರು

ಅವರು ಶಕ್ತಿನಗರದ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿತ್ತು. ಸಿದ್ದಲಿಂಗಯ್ಯ ಅವರು ರಾತ್ರಿಪಾಳಯಕ್ಕೆ ಕೆಲಸಕ್ಕೆ ಹೋಗಿದ್ದರು ಈ ವೇಳೆ ಪತ್ನಿ ಹಾಗೂ ಮಕ್ಕಳು ಮಾತ್ರ ಇದ್ದರು ಎಂದು ತಿಳಿದುಬಂದಿದೆ.
ಮೂಲತಃ ಮಂಡ್ಯದವರಾದ ಇವರು ಕಳೆದ ಎರಡು ವರ್ಷಗಳ ಹಿಂದೆಯಷ್ಟೆ ರಾಯಚೂರಿಗೆ ಸ್ಥಳಾಂತರಗೊಂಡಿದ್ದರು.

ಜೈಲಿನಲ್ಲಿ ಒಂದು ದಿನ ಕಳೆದ ಸಿಸೋಡಿಯಾ

ಸ್ಥಳಕ್ಕೆ ಧಾವಿಸಿದ ಶಕ್ತಿನಗರ ಠಾಣೆ ಪೊಲೀಸರು ಮೃತ ದೇಹಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ. ತಾಯಿ, ಮಕ್ಕಳ ಘೋರ ದುರಂತಕ್ಕೆ ಸಂಬಂಧಿಕರು ಹಾಗೂ ಸ್ಥಳೀಯರ ಆಕ್ರಂದನ ಮುಗಿಲು ಮುಟ್ಟಿತ್ತು.

air conditioner, explosion, Mother, children, burn, Raichur,

Articles You Might Like

Share This Article