ನವದೆಹಲಿ,ಜ.25- ಇನ್ಮುಂದೆ ವಿಮಾನದಲ್ಲಿ ಪ್ರಯಾಣಿಕರು ಕೇಳಿದಷ್ಟು ಎಣ್ಣೆ ನೀಡುವುದಿಲ್ವಂತೆ!
ಯಾಕೆ ಅಂತೀರಾ.. ಇತ್ತಿಚೆಗೆ ವಿಮಾನಗಳಲ್ಲಿ ಕುಡಿದು ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸುವುದು ಇತರರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಏರ್ ಇಂಡಿಯಾ ಈ ನಿರ್ಧಾರ ಕೈಗೊಂಡಿದೆಯಂತೆ.
ವಿಮಾನ ಪ್ರಯಾಣಿಕರು ಕೇಳಿದಷ್ಟು ಎಣ್ಣೆ ನೀಡುವುದನ್ನು ಸೌಮ್ಯವಾಗಿಯೇ ನಿರಾಕರಿಸಿ ಅವರಿಗೆ ತಿಳಿ ಹೇಳುವಂತೆ ಏರ್ ಇಂಡಿಯಾ ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ. ಕೆಲ ದುರ್ಘಟನೆಗಳಿಗಾಗಿ ಟಾಟಾ ಸಮೂಹ ಒಡೆತನದ ವಿಮಾನಯಾನ ಸಂಸ್ಥೆಗೆ ದಂಡ ವಿಧಿಸಿರುವುದರಿಂದ ಏರ್ ಇಂಡಿಯಾ ಇಂತಹ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ.
ರಾಹುಲ್ ಯಾತ್ರೆಯಲ್ಲಿ ಊರ್ಮಿಳಾ ಕಲರವ
ಕೆಲ ದಿನಗಳ ಹಿಂದೆ ಹೊರಡಿಸಲಾದ ಪರಿಷ್ಕøತ ನೀತಿಯ ಪ್ರಕಾರ ಪ್ರಯಾಣಿಕರಿಗೆ ಕೇಳಿದಷ್ಟು ಮದ್ಯಪಾನ ನೀಡಬಾರದು ಹಾಗೂ ಪ್ರಯಾಣಿಕರು ತಮ್ಮ ಸ್ವಂತ ಮದ್ಯ ಸೇವಿಸುವುದನ್ನು ತಡೆಹಿಡಿಯಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ.
ವಿಮಾನ ಕ್ಯಾಬಿನ್ ಸಿಬ್ಬಂದಿ ಸಭ್ಯರಾಗಿರಬೇಕು ಮತ್ತು ಮೌಲ್ಯ ನಿರ್ಣಯಗಳನ್ನು ತಪ್ಪಿಸಬೇಕು ಮತ್ತು ಅತಿಥಿಗೆ ನೀವು ಇನ್ನು ಮುಂದೆ ಮದ್ಯವನ್ನು ನೀಡುವುದಿಲ್ಲ ಎಂದು ನಯವಾಗಿ ತಿಳಿಸಲು ಚಾತುರ್ಯವನ್ನು ಬಳಸಬೇಕು ಎಂದು ಸೂಚ್ಯವಾಗಿ ತಿಳಿಸಲಾಗಿದೆ.
Air India, modifies, flight, alcohol, service, policy,