ತಾಂತ್ರಿಕ ದೋಷ : ಏರ್ ಇಂಡಿಯಾ ವಿಮಾನ ತುರ್ತು ಭೂ ಸ್ಪರ್ಶ

Social Share

ನವದೆಹಲಿ ,ಫೆ.22 – ನ್ಯೂಯಾರ್ಕ್‍ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದ ಮಾರ್ಗಮಧ್ಯೆ ಇಂಜಿನ್ ಒಂದರಲ್ಲಿ ತೈಲ ಸೋರಿಕೆಯಾದ ಕಾರಣ ಸ್ವೀಡನ್‍ನ ಸ್ಟಾಕ್‍ಹೋಮ್ ವಿಮಾನನಿಲ್ದಾಣದಲ್ಲಿ ಇಳಿಸಲಾಗಿದೆ.

ನಿಗದಿಯಂತೆ ನವದೆಹಲಿಯಿಂದ ಮೇಲೆ ಹಾರಿದ ಏರ್ ಇಂಡಿಯಾ ಬೋಯಿಂಗ್ 777-300 ಇಆರ್ ವಿಮಾನ ಪೈಲಟ್ ಇಂಜಿನ್ ಒಂದರಲ್ಲಿ ತೈಲ ಸೋರಿಕೆ ಯಾಗಿದೆ ತಿಳಿಸಿದ್ದು ಕೂಡಲೆ ಹಿಂತಿರುಗುವಂತೆ ಸೂಚಿಸಲಾಯಿತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಆರತಕ್ಷತೆಗೆ ಮುನ್ನವೇ ನವವಿವಾಹಿತ ದಂಪತಿ ಸಾವು

ತೈಲ ಸೋರಿಕೆಯ ಆಗಿ ಎಂಜಿನ್ ಸ್ಥಗಿತಗೊಳಿಸ ನಂತರ ವಿಮಾನವನ್ನು ಪೈಲಟ್‍ ಸುರಕ್ಷಿತವಾಗಿ ಸ್ಟಾಕ್‍ಹೋಮ್‍ನಲ್ಲಿ ಇಳಿಸಿದರು ವಿಮಾನ ನಿಲ್ದಾಣದಲ್ಲಿ ತಪಾಸಣೆಯ ಸಮಯದಲ್ಲಿ, ಎಂಜಿನ್ ಎರಡರ ಡ್ರೈನ್ ಮಾಸ್ಟ್‍ನಿಂದ ತೈಲ ಹೊರಬರುತ್ತಿರುವುದು ಕಂಡುಬಂದಿದೆ,

ನವದೆಹಲಿಯಿಂದ ಹೊರಟಿದ್ದ ವಿಮಾನವನ್ನು ತಾಂತ್ರಿಕ ಸಮಸ್ಯೆಯಿಂದಾಗಿ ಸ್ವೀಡನ್‍ನ ಸ್ಟಾಕ್‍ಹೋಮ್‍ಗೆ ತಿರುಗಿಸಲಾಗಿದೆ .ಪ್ರಯಾಣಿಕರು ಸುರಕ್ಷಿತವಾಗಿದ್ದು ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ನಂತರ ತಿಳಿಸಿದ್ದಾರೆ.

IAS- IPS ಬೀದಿ ಜಗಳಕ್ಕೆ ಮತ್ತೊಂದು ಟ್ವಿಸ್ಟ್

ಕಳೆದ ಸೋಮವಾರ, ನ್ಯೂಯಾರ್ಕ್‍ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಲಂಡನ್‍ಗೆ ತಿರುಗಿಸಲಾಗಿತ್ತು .

Air India, New York, Delhi, flight, diverted, Sweden, technical fault,

Articles You Might Like

Share This Article