ಉಕ್ರೇನ್‍ನಿಂದ ಸ್ವದೇಶಕ್ಕೆ ಮರಳಿದ 240 ಭಾರತೀಯರು

Social Share

ನವದೆಹಲಿ.ಫೆ.23- ಉಕ್ರೇನ್‍ನಿಂದ ತಡರಾತ್ರಿ ಮುದಲ ತಂಡದ 240 ಭಾರತೀಯರು ಸ್ವದೇಶಕ್ಕೆ ಮರುಳಿದ್ದಾರೆ. ಏರ್ ಇಂಡಿಯಾದ ಬೋಯಿಂಗ್ 787 ವಿಮಾನ ಕೈವ್‍ನ ಬೋರಿಸ್ಪಿಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳವಾರ ಸಂಜೆ 6 ಗಂಟೆಗೆ ಹೊರಟಿತು ಮತ್ತು ರಾತ್ರಿ 11.40 ರ ಸುಮಾರಿಗೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ಪರಿಸ್ಥಿತಿ ಶಾಂತಿಯುತವಾಗಿರುವಂತೆ ತೋರುತ್ತಿದ್ದರೂ, ಸಾಕಷ್ಟು ಭಯ ಆವರಿಸಿದೆ ಎಂದು ಕೆಲ ವಿದ್ಯಾರ್ಥಿಗಳು ಹೇಳಿದ್ದಾರೆ. ಸದ್ಯದ ಪರಿಸ್ಥಿತಿ ಬಿಗುವಿನಿಂದ ಕೂಡಿದೆ ರಾಯಭಾರ ಕಚೇರಿ ನಮಗೆ ತಿಳಿಸಿರುವಂತೆ ಸ್ವದೇಶಕ್ಕೆ ಮರುಳುತ್ತಿದ್ದೇವೆ ಹೇಳಿದರು. ಹೆಚ್ಚಿನ ಭಾರತೀಯರು ಅಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿದ್ದಾರೆ

Articles You Might Like

Share This Article