ನವದೆಹಲಿ,ಜ.6- ಎರಡು ಕಹಿ ಘಟನೆಗಳ ಬಳಿಕ ಎಚ್ಚೆತ್ತುಕೊಂಡ ಏರ್ ಇಂಡಿಯಾ ಸಂಸ್ಥೆ, ವಿಮಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆದರೂ ಅದನ್ನು ಮೇಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಪ್ರಾಧಿಕಾರಗಳಿಗೆ ವರದಿ ಮಾಡುವಂತೆ ತನ್ನ ಸಿಬ್ಬಂದಿಗಳಿಗೆ ಕಟ್ಟಪ್ಪಣೆ ಮಾಡಿದೆ.
ಏರ್ಇಂಡಿಯಾದ ಮುಖ್ಯಕಾರ್ಯನಿರ್ವಹಣಾಕಾರಿ ಕ್ಯಾಂಪ್ಬೆಲ್ ವಿಲ್ಸನ್ ಅವರು ಆತಂರಿಕ ಸಂವಹನದಲ್ಲಿ ಎಲ್ಲಾ ಸಿಬ್ಬಂದಿಗಳು ಗಮನಾರ್ಹವಾದ ಪ್ರತಿ ಘಟನೆಯನ್ನು ವರದಿ ಮಾಡುವಂತೆ ತಾಕೀತು ಮಾಡಿದ್ದಾರೆ.
ನವೆಂಬರ್ 26ರಂದು ನ್ಯೂಯಾಕ್-ದೆಹಲಿ ನಡುವಿನ ಏರ್ಇಂಡಿಯಾ ವಿಮಾನದಲ್ಲಿ ಪಾನಮತ್ತ ಪುರುಷ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕರೊಬ್ಬರ ಬ್ಲಾಂಕೆಟ್ ಮೇಲೆ ಮೂತ್ರ ಮಾಡಿದ್ದರು. ಪ್ಯಾರಿಸ್-ದೆಹಲಿ ಸೆಕ್ಟರ್ನಲ್ಲಿ ನಡೆದ ಸಂಧಾನದಲ್ಲಿ ಪುರುಷ ಪ್ರಯಾಣಿಕರು ಕ್ಷಮೆ ಕೇಳಿದ್ದರಿಂದ ಪ್ರಕರಣ ಅಲ್ಲಿಗೆ ಮುಕ್ತಾಯವಾಗಿತ್ತು. ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಬಿಬಿಎಂಪಿಯ ಹೊಸ ಐಡಿಯಾ, ಸಸಿಗಳ ಸಂರಕ್ಷಣೆಗೂ ಜಿಪಿಎಸ್ ವ್ಯವಸ್ಥೆ
ಡಿಸೆಂಬರ್ 6ರಂದು ಇದೇ ರೀತಿಯ ಮತ್ತೊಂದು ಪ್ರಕರಣ ವರದಿಯಾಗಿದೆ. ಏರ್ ಇಂಡಿಯಾದ ವಿಮಾನ ಸಂಖ್ಯೆ 142ರಲ್ಲಿ ಪ್ರಯಾಣಿಕರೊಬ್ಬರು ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ಮಾಡಿದ್ದರು. ವಿಮಾನದ ಪೈಲೆಟ್ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ಗೆ ಮಾಹಿತಿ ನೀಡಿದ್ದರಿಂದ ಅಸಭ್ಯವಾಗಿ ವರ್ತಿಸಿದ ಪುರುಷ ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಏರ್ ಇಂಡಿಯಾ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಿದೆ. ಮಹಿಳಾ ಪ್ರಯಾಣಿಕರಿಗೆ ಆಗಿರುವ ನೋವಿನಲ್ಲಿ ನಾವು ಭಾಗಿಯಾಗಿದ್ದೇವೆ. ಸಹ ಪ್ರಯಾಣಿಕರ ಅಸಭ್ಯ ವರ್ತನೆಯಿಂದ ಉಂಟಾಗುವ ತೊಂದರೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ವಿಲ್ಸನ್ ತಿಳಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯದಲ್ಲಿ 9.02 ಕೋಟಿಗೂ ಹೆಚ್ಚು ಮತದಾರು
ಒಂದು ವೇಳೆ ಪ್ರಯಾಣಿಕರ ನಡುವೆ ಸಂಧಾನದ ಮೂಲಕ ಇತ್ಯರ್ಥವಾಗುವ ಪ್ರಕರಣವಾಗಿದ್ದರೂ ಅದರ ಕುರಿತು ವಿಮಾನದ ಸಿಬ್ಬಂದಿಗಳು ಮೇಲಾಕಾರಿಗಳಿಗೆ ಮತ್ತು ಸಂಬಂಧಿಸಿದ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಪ್ರಯಾಣಿಕರ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
Air India, staff, urination, incident, cause, notices,