Sunday, September 8, 2024
Homeಅಂತಾರಾಷ್ಟ್ರೀಯ | Internationalವಿಶ್ವದಲ್ಲಿ ವಾಯು ಮಾಲಿನ್ಯಕ್ಕೆ 2021ರಲ್ಲಿ 8.1 ಮಿಲಿಯನ್‌ ಜನರು ಸಾವು..!

ವಿಶ್ವದಲ್ಲಿ ವಾಯು ಮಾಲಿನ್ಯಕ್ಕೆ 2021ರಲ್ಲಿ 8.1 ಮಿಲಿಯನ್‌ ಜನರು ಸಾವು..!

ನವದೆಹಲಿ, ಜೂನ್‌ 19-ಅಮೆರಿಕ ಮೂಲದ ಸಂಶೋಧನಾ ಸಂಸ್ಥೆಯಾದ ಹೆಲ್ತ್‌‍ ಎಫೆಕ್ಟ್‌ ಇನ್‌ಸ್ಟಿಟ್ಯೂಟ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಹಲವು ಸ್ಪೋಟಕ ಮಾಹಿತಿ ಇದ್ದು ,ವಾಯು ಮಾಲಿನ್ಯದಿಂದ ಕಳೆದ 2021ರಲ್ಲಿ ವಿಶ್ವಾದ್ಯಂತ 8.1 ಮಿಲಿಯನ್‌(81ಲಕ್ಷ)ಜನರು ಸಾವನ್ನಪ್ಪಿದ್ದಾರೆ.

ಇನ್ನು ಭಾರತದಲ್ಲಿ 21 ಲಕ್ಷ ಮತ್ತು ಚೀನಾ ಮತ್ತು 23 ಲಕ್ಷ ಜನರು ಬಲಿಯಾಗಿದ್ದಾರೆ ಎಂದು ತಿಳಿಸಲಾಗಿದೆ. ಇನ್ನು ಆಳವಾಗಿ ನೋಡಿದರೆ ಭಾರತದಲ್ಲಿ ಐದು ವರ್ಷದೊಳಗಿನ 1,69,400 ಮಕ್ಕಳ ಸಾವಿಗೆ ವಾಯು ಮಾಲಿನ್ಯವು ಕಾರಣವಾಗಿದೆ ಎಂದು ಯುನಿಸೆಫ್‌ ಸಹಭಾಗಿತ್ವದಲ್ಲಿ ಸ್ವತಂತ್ರ ಯುಎಸ್‌‍ ಮೂಲದ ಸಂಶೋಧನಾ ಸಂಸ್ಥೆ ಪ್ರಕಟಿಸಿದೆ.

ನೈಜೀರಿಯಾ 1,14,100 ಮಕ್ಕಳ ಸಾವುಗಳೊಂದಿಗೆ, ಪಾಕಿಸ್ತಾನ 68,100, ಇಥಿಯೋಪಿಯಾ 31,100 ಮತ್ತು ಬಾಂಗ್ಲಾದೇಶ 19,100 ಮಕ್ಕಳ ಸಾವುಗಳು ಸಂಭವಿಸಿದೆ.ದಕ್ಷಿಣ ಏಷ್ಯಾದಲ್ಲಿ ಸಾವುಗಳಿಗೆ ವಾಯು ಮಾಲಿನ್ಯವು ಪ್ರಮುಖ ಅಪಾಯಕಾರಿ ಅಂಶವಾಗಿದೆ ಎಂದು ವರದಿ ಹೇಳಿದೆ, ನಂತರ ಅಧಿಕ ರಕ್ತದೊತ್ತಡ, ಆಹಾರ ಮತ್ತು ತಂಬಾಕು ಅಪಾಯ ಸೃಷ್ಠಿಸಿದೆ ಎಂದು ಎಚ್ಚರಿಸಿದೆ.

2021 ರಲ್ಲಿ ಯಾವುದೇ ಹಿಂದಿನ ವರ್ಷಕ್ಕೆ ಅಂದಾಜು ಮಾಡಲಾಗಿದ್ದಕ್ಕಿಂತ ಹೆಚ್ಚಿನ ಸಾವುಗಳು ವಾಯುಮಾಲಿನ್ಯಕ್ಕೆ ಸಂಬಂಧಿಸಿವೆ. ತಲಾ 1 ಶತಕೋಟಿ ಜನಸಂಖ್ಯೆಯೊಂದಿಗೆ, ಭಾರತ (2.1 ಮಿಲಿಯನ್‌ ಸಾವುಗಳು) ಮತ್ತು ಚೀನಾ (2.3 ಮಿಲಿಯನ್‌ ಸಾವುಗಳು) ಒಟ್ಟು ಜಾಗತಿಕ ಒಟ್ಟು 54 ಪ್ರತಿಶತದಷ್ಟಿದೆ ಎಂದು ವರದಿ ಎಚ್ಚರಿಕೆ ಗಂಟೆ ಬಾರಿಸಿದೆ.

ದಕ್ಷಿಣ ಏಷ್ಯಾದಲ್ಲಿ ಪಾಕಿಸ್ತಾನ (2,56,000 ಸಾವುಗಳು), ಬಾಂಗ್ಲಾದೇಶ (2,36,300) ಮತ್ತು ವ್ಯಾನಾರ್‌ (1,01,600 ಸಾವುಗಳು) ಸೇರಿದಂತೆ ಹೆಚ್ಚಿನ ಪರಿಣಾಮಗಳನ್ನು ಹೊಂದಿರುವ ಇತರ ದೇಶಗಳಲ್ಲಿ ಆಗ್ನೇಯ ಏಷ್ಯಾದಲ್ಲಿ ಇಂಡೋನೇಷ್ಯಾ (2,21,600 ಸಾವುಗಳು), ವಿಯೆಟ್ನಾಂ (99,700),

ಫಿಲಿಪೈನ್‌್ಸ(98,209), ಆಫ್ರಿಕಾದನೈಜೀರಿಯಾ (2,06,700 ಸಾವುಗಳು) ಮತ್ತು ಈಜಿಪ್ಟ್‌‍ (1,16,500 ಸಾವುಗಳು) ದಾಖಲಾಗಿವೆ.ಒಟ್ಟಾಗಿ ಓಝೋನ್‌ನಿಂದ ವಾಯು ಮಾಲಿನ್ಯವು 8.1 ಮಿಲಿಯನ್‌ ಸಾವುಗಳಿಗೆ ಕೊಡುಗೆ ನೀಡುತ್ತದೆ ಎಂದು ಅಂದಾಜಿಸಲಾಗಿದೆ ಒಟ್ಟು ಜಾಗತಿಕ ಸಾವುಗಳಲ್ಲಿ ಸುಮಾರು 12 ಪ್ರತಿಶತ 2021 ರಲ್ಲಿ ಸಂಭವಿಸಿದೆ.

2.5 ಮೈಕ್ರೊಮೀಟರ್‌ಗಳಿಗಿಂತ ಕಡಿಮೆ ಪ್ರಮಾಣದ ಸಣ್ಣ ಕಣಗಳು ಶ್ವಾಸಕೋಶದಲ್ಲಿ ಉಳಿಯುತ್ತವೆ ಮತ್ತು ರಕ್ತಪ್ರವಾಹಕ್ಕೆ ಪ್ರವೇಶಿಸಬಹುದು, ಅನೇಕ ಅಂಗ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ವಯಸ್ಕರಲ್ಲಿ ಹದ್ರೋಗ, ಪಾರ್ಶ್ವವಾಯು, ಮಧುಮೇಹ, ಶ್ವಾಸಕೋಶದ ಕ್ಯಾನ್ಸರ್‌ನಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತವೆ ಎಂದು ವರದಿ ಹೇಳಿದೆ.

RELATED ARTICLES

Latest News