ಬೆಂಗಳೂರು,ಆ.9- ಎರಡು ದಿನಗಳ ಹಿಂದೆ ಜೈಪುರದಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಂಡಿಗೋ ವಿಮಾನದ ಶೌಚಾಲಯದ ಬಳಿ ದೊರೆತ ಟಿಶ್ಯೂ ಪೇಪರ್‍ನಲ್ಲಿ ಬಾಂಬ್ ಬೆದರಿಕೆ ಸಂದೇಶ ಪತ್ತೆಯಾದ ಹಿನ್ನೆಲೆಯಲ್ಲಿ ಶಂಕಿತ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ವಿಮಾನದಲ್ಲಿ 174 ಪ್ರಯಾಣಿಕರು ಬಂದಿದ್ದು, ಅವರ ಬ್ಯಾಗ್‍ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಪೈಕಿ ಶಂಕಿತ 12 ಮಂದಿಯ ಕೈಬರಹವನ್ನು ಪರಿಶೀಲಿಸಲಾಗಿದ್ದು, ಟಿಶ್ಯೂ ಪೇಪರ್‍ನಲ್ಲಿ ಬರೆದಿದ್ದ ಬರಹವನ್ನು ಹೋಲಿಕೆ ಮಾಡಲಾಗುತ್ತಿದೆ.
ಟಿಶ್ಯೂ ಪೇಪರ್‍ನಲ್ಲಿದ್ದ ಬಾಂಬ್ ಬೆದರಿಕೆ ಸಂದೇಶದಿಂದ ಕೆಲಕಾಲ ಆತಂಕ ಉಂಟಾಗಿತ್ತು. ಇದೀಗ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.