ಎ.ಜೆ ಸದಾಶಿವ ಆಯೋಗ ವರದಿ ಜಾರಿಗೆ ದಲಿತ ಸಂಘಟನೆಗಳ ಆಗ್ರಹ

Social Share

ಬೆಂಗಳೂರು, ಮಾ.2- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲವು ಶಕ್ತಿಗಳ ಪ್ರಭಾವಕ್ಕೆ ಮಣಿದು ಒಳ ಮೀಸಲಾತಿಯ ಕುರಿತ ಎ.ಜೆ ಸದಾಶಿವ ಆಯೋಗ ವರದಿ ಜಾರಿ ಮಾಡಲು ಮೀನಾ ಮೇಷ ಎಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ದಸಂಸ ಸಂಘಟನೆಗಳ ಒಕ್ಕೂಟ ಇಂದು ಎಚ್ಚರಿಸಿದವು.

ರಾಜ್ಯ ಸರ್ಕಾರ ಈ ತಕ್ಷಣವೇ ಇದರ ಕುರಿತು ಗಮನ ಹರಿಸಬೇಕು ಎಂದು ಆರ್ ಪಿಐ ಹಾಗೂ ಡಿಎಸ್ಎಸ್ ರಾಜ್ಯಾಧ್ಯಕ್ಷ ಡಾ ಆರ್. ಮೋಹನ್ ರಾಜು, ಡಿಎಸ್ಎಸ್ ರಾಜ್ಯ ಸಂಚಾಲಕರಾದ ವೆಂಕಟಗಿರಿಯಯ್ಯ ಹಾಗೂ ಮಾನವ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕ ಬಸವರಾಜು ಕೌತಾಳ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

ಇನ್ಮುಂದೆ ಕೇವಲ 10 ನಿಮಿಷದೊಳಗೆ ಆಸ್ತಿ ನೋಂದಣಿ

ಸಾಮಾಜಿಕ ನ್ಯಾಯಕ್ಕಾಗಿ ಕಳೆದ 25 ವರ್ಷಗಳಿಂದ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂದು ನಿರಂತರವಾಗಿ ರಾಜ್ಯದಲ್ಲಿ ಒಳ ಮೀಸಲಾತಿಯನ್ನು ಜಾರಿಗೆ ತರಬೇಕೆಂದು ಆಳುವ ವರ್ಗಗಳನ್ನು ಒತ್ತಾಯಿಸುತ್ತಾ ಬಂದಿದ್ದೇವೆ.

ಈ ಮಧ್ಯೆ ಬಸವರಾಜ ಬೊಮ್ಮಯ ಸರ್ಕಾರ ಸಮಿತಿಯನ್ನು ರಚಿಸಿ, ಕಳೆದ ಅಧಿವೇಶನದಲ್ಲಿ ಜಾರಿಗೆ ತರುವ ಆಶ್ವಾಸನೆಯನ್ನು ನೀಡಿದ್ದರು. ಆದರೆ ಕೆಲವು ಸುಳ್ಳು ವದಂತಿಗೆ ಹಾಗೂ ಒತ್ತಡಗಳಿಗೆ ಒಳಗಾಗಿ ನ್ಯಾಯ ಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ವಿಫಲಗೊಂಡಿದ್ದಾರೆ. ಇದನ್ನು ನಾವುಗಳು ಖಂಡಿಸುತ್ತೇವೆ.

ಪತ್ನಿ, ಇಬ್ಬರು ಪುತ್ರಿಯರಿಗೆ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪತಿ

ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರ ಸರ್ಕಾರ ಇದೇ ರೀತಿ ವಂಚಿಸಿದ ಹಿನ್ನೆಲೆಯಲ್ಲಿ ತನ್ನ ಅಧಿಕಾರವನ್ನು ಕಳೆದುಕೊಂಡಿದ್ದು ಇತಿಹಾಸ. ಇದೇ ರೀತಿ ಈ ಸರ್ಕಾರಕ್ಕೂ ಮುಂದೆ ಇದೇ ಗತಿ ಬರುತ್ತದೆ ಎಂದು ಎಚ್ಚರಿಸಿದರು

101 ಪರಿಶಿಷ್ಟ ಜಾತಿಗಳಲ್ಲಿ ನಾವು ಕೇಳುತ್ತಿರುವುದು ಒಳ ಮೀಸಲಾತಿ ಇದರಲ್ಲಿ ಯಾವುದೇ ಜಾತಿಗಳನ್ನು ಹೊರಗಿಡುವ ಸಂಚು ಇಲ್ಲ. ಈಗಾಗಲೇ ಭೋವಿ, ಲಂಬಾಣಿ, ಹಾಗೂ ಇತರೇ ಕೆಲವು ಸಮುದಾಯದ ಸ್ವಾಮೀಜಿಗಳು ಮುಖ್ಯಮಂತ್ರಿಗೆ ಇದನ್ನು ಜಾರಿಗೆ ತರಬಾರದೆಂದು ಹೇಳಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವುದು. ಇದು ಮನುವಾದದ ಪಿತೂರಿ.

ಈ ಎಲ್ಲಾದರ ಹಿನ್ನೆಲೆ ಸರ್ಕಾರ ಕೂಡಲೇ ವಿಶೇಷ ಅಧಿವೇಶನ ಕರೆದು ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿಯನ್ನು ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು. ಸರ್ಕಾರ ವಿಳಂಬ ಧೋರಣೆ ತಾಳಿದಲ್ಲಿ ತುಳಿತಕ್ಕೆ ಒಳಗಾಗಿರುವ ಎಲ್ಲಾ ಸಮುದಾಯಗಳು ಒಟ್ಟುಗೂಡಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ಮಾಡಲಿದ್ದೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

AJ Sadashiva, Commission, Dalit, organizations, demand, AJ Sadashiva Commission report

Articles You Might Like

Share This Article