ಬೆಂಗಳೂರು, ಆ.08, : ಭಾರತದ ಪ್ರಮುಖ ವಿಮಾ ದಲ್ಲಾಳಿಗಳಲ್ಲಿ ಒಂದಾಗಿರುವ ಪಾಲಿಸಿ ಬಜಾರ್ ತನ್ನ ಕಾರ್ಪೊರೇಟ್ ವಿಮಾ ಬದ್ಧತೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ವರ್ಷದ ಆರಂಭದಲ್ಲಿ ‘ಪಾಲಿಸಿಬಜಾರ್ ಫಾರ್ ಬ್ಯುಸಿನೆಸ್’ ಸೇವೆ ಪ್ರಾರಂಭಿಸಿತು.
ವೇಗವಾಗಿ ಬೆಳೆಯುತ್ತಿರುವ ಹೊಸ ಬ್ರ್ಯಾಂಡ್ ಜತೆಗೆ ಭಾರತದಲ್ಲಿ ವ್ಯಾಪಾರ ವಿಮೆಯ ವ್ಯಾಪ್ತಿ ತೀರಾ ಕಡಿಮೆ! ತನ್ನ ಪರಿಣತಿ ಮತ್ತು ತಂತ್ರಜ್ಞಾನದಿಂದ ಮತ್ತಷ್ಟು ಹೆಚ್ಚಿಸಲು ತನ್ನ ಗ್ರಾಹಕರೊಂದಿಗೆ ನಿಕಟವಾಗಿ ಕೆಲಸ ಮಾಡಲು ಅನುಭವಿ ಸಲಹಾ ಮಂಡಳಿಯ ತೆರೆದು ಇದರ ಮುಖ್ಯ ಸಲಹೆಗಾರರಾಗಿ ಅಜಿತ್ ಕುಮಾರ್ ಅವರನ್ನು ನೇಮಿಸಿದೆ.
ಅಜಿತ್ ಕುಮಾರ್, ಓರಿಯೆಂಟಲ್ ಇನ್ಶುರೆನ್ಸ್ ಕಂ ಲಿಮಿಟೆಡ್‍ನ ಮಾಜಿ ಜನರಲ್ ಮ್ಯನೇಜರ್, ಇವರು 37ವರ್ಷಗಳ ಕಾಲ ಓರಿಯೆಂಟಲ್ ಇನ್ಶುರೆನ್ಸ್ ಉದ್ಯಮದ ಯಶಸ್ಷಿಯ ಹಾದಿಯಲ್ಲಿ ಭಾಗಿಯಾಗಿ ಸಮೃದ್ಧ ಅನುಭವದ ಸಂಪತ್ತು ಹೊಂದಿದ್ದಾರೆ. ನಮ್ಮ ಸಲಹಾ ಮಂಡಳಿಯ ಮೌಲ್ಯಯುತ ಅನುಭವನ್ನು ನಮ್ಮ ಬ್ಯ್ರಾಂಡ್‍ನ ಟ್ರೇಡ್‍ಮಾರ್ಕ್ ನವೀನ ಪರಿಹಾರಗಳೊಂದಿಗೆ ಸಂಯೋಜಿಸುವ ಕೆಲಸ ಮಾಡುತ್ತಿದ್ದೇವೆ.
ಬ್ಲಾಕ್‍ಮೇಲ್ ಮತ್ತು ಬೆದರಿಕೆಗಳಿಗೆ ನಾನು ಜಗ್ಗಲ್ಲ : ಡಿಕೆಶಿ ತಿರುಗೇಟು
ಭಾರತೀಯ ವ್ಯವಹಾರಗಳನ್ನು ನಿರ್ಭೀತವಾಗಿ ಪ್ರವರ್ಧಮಾನಕ್ಕೆ ತರಲು ಸಂಪ್ರದಾಯ ಮತ್ತು ತಂತ್ರಜ್ಞಾನದ ಅತ್ಯುತ್ತಮ ಮಿಶ್ರಣವನ್ನು ತರುವುದು ಕಲ್ಪನೆಯೊಂದಿಗೆ ಶ್ರೀ ಅಜಿತ್ ಕುಮಾರ್ ಅವರನ್ನು ಸೇರಿಸಿಕೊಳ್ಳಲು ನಮಗೆ ಸಂತೋಷವಾಗಿದೆ ಇವರ ಅಪಾರ ಅನುಭವ, ಆರೋಗ್ಯ ವಿಮೆ ಮತ್ತು ಹೊಣೆಗಾಗಿಕೆ ಉತ್ಪನ್ನಗಳು ಕಾರ್ಪೋರೇಟ್ ಜಗತ್ತಿನ ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಪಾಲಿಸಿಬಜಾರ್ ಫಾರ್ ಬ್ಯುಸಿನೆಸ್ ಮುಖ್ಯಸ್ಥರಾದ ಸಜ್ಜಾ ಪ್ರವೀಣ್ ಚೌಧರಿ ಹೇಳಿದರು.
ಪಾಲಿಸಿಬಜಾರ್ ಫಾರ್ ಬ್ಯುಸಿನೆಸ್ ಜತೆಗಿನ ಒಡನಾಟವನ್ನು ವಿವರಿಸುತ್ತಾ ಅಜಿತ್ ಕುಮಾರ್, ವ್ಯಾಪಾರ ವಿಮೆಯು ಭಾರತದಲ್ಲಿ ಅತ್ಯಂತ ನಿರ್ಣಾಯಕ ಮತ್ತು ದುರ್ಬಲ ಮಾರುಕಟ್ಟೆಯಾಗಿ ಉಳಿದಿದೆ. ವ್ಯಾಪಾರಕ್ಕಾಗಿ ಪಾಲಿಸಿಬಜಾರ್ ನಂತಹ ವೇದಿಕೆಯು ಇಂದಿನ ಕಾಲಘಟ್ಟಕ್ಕೆ ಅಗತ್ಯವಾಗಿದೆ. ಸಲಹಾ ಮಂಡಳಿಯ ಸದಸ್ಯನಾಗಿ ನನ್ನ ಪಾತ್ರದಲ್ಲಿ ಉದ್ಯಮಕ್ಕೆ ಮತ್ತಷ್ಟು ಗಣನೀಯ ವ್ಯತ್ಯಾಸವನ್ನು ತರಲು ಸಾಧ್ಯವಾಗುತ್ತದೆ ಎಂಬ ಭರವಸೆಯನ್ನು ನಾನು ಹೊಂದಿದ್ದೇನೆ ಎಂದು ಬಣ್ಣಿಸಿದರು.
#AjithKumar, #appointed, #PolicyBazaar, #BusinessConsultant,