ಯುಪಿ ಡಿಸಿಎಂಗಳಿಗೆ ಬಂಪರ್ ಆಫರ್ ನೀಡಿದ ಅಖಿಲೇಶ್ ಯಾದವ್

Social Share

ಲಕ್ನೋ,ಡಿ.2-ನಿಮಗೆ ನಮ್ಮ ಪಕ್ಷದ 100 ಶಾಸಕರು ಬೆಂಬಲ ನೀಡುತ್ತಾರೆ. ನಮ್ಮ ಬೆಂಬಲ ಪಡೆದು ನೀವು ಮುಖ್ಯಮಂತ್ರಿಗಳಾಗಿ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಉತ್ತರಪ್ರದೇಶದ ಡಿಸಿಎಂಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಅವರಿಗೆ ಕರೆ ನೀಡಿದ್ದಾರೆ.

ನೀವು ಬಿಜೆಪಿ ಸರ್ಕಾರದಲ್ಲಿ ಡಿಸಿಎಂಗಳಾಗಿದ್ದೀರಿ ನಿಮಗೂ ಸಿಎಂ ಆಗುವ ಇಚ್ಚೆ ಇದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ನಿಮ್ಮ ಈ ಪ್ರಯತ್ನಕ್ಕೆ ನಮ್ಮ ಪಕ್ಷದ 100 ಶಾಸಕರು ಬೆಂಬಲಕ್ಕೆ ನಿಲ್ಲಲಿದ್ದಾರೆ. ಈ ಅವಕಾಶವನ್ನು ಕೈಚೆಲ್ಲಬೇಡಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ರಾಂಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಎಸ್‍ಪಿ ಅಭ್ಯರ್ಥಿ ಪರ ನಡೆದ ರ್ಯಾಲಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತ ಅಖಿಲೇಶ್ ಈ ಬಂಪರ್ ಆಫರ್ ನೀಡಿದ್ದಾರೆ.

ಗಾಯಕ ಸಿಧು ಮೂಸೆವಾಲಾ ಹಂತಕ ಗೋಲ್ಡಿ ಅಮೆರಿಕಾದಲ್ಲಿ ಸೆರೆ..!

ರಾಜ್ಯದಲ್ಲಿ ನಮ್ಮ ಸರ್ಕಾರ ಆಡಳಿತದಲ್ಲಿದ್ದಾಗ ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧದ ಕಡತ ನನ್ನ ಬಳಿ ಬಂದಿತ್ತು. ಆದರಲ್ಲಿ ಅವರನ್ನು ಬಂಧಿಸುವಂತೆಯೂ ಸೂಚನೆ ನೀಡಲಾಗಿತ್ತು. ಆದರೆ, ನಾವು ಪ್ರತಿಪಕ್ಷದವರನ್ನು ಬಂಧಿಸುವ ಸಾಹಸಕ್ಕೆ ಕೈ ಹಾಕಲಿಲ್ಲ.

ಉಗ್ರ ಶಾರೀಕ್‍ಗೆ ಕೇರಳ ನಂಟು ಕುರಿತು ಅಧಿಕಾರಿಗಳಿಂದ ಶೋಧ

ಆದರೆ, ಯೋಗಿ ಅವರು ಪ್ರತಿಪಕ್ಷದವರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ನಮ್ಮ ಸರ್ಕಾರ ಬಂದರೆ ನಾವು ಅಂತಹ ಕಾರ್ಯಕ್ಕೆ ಕೈ ಹಾಕಬೇಕಾಗುತ್ತದೆ ಎಚ್ಚರವಿರಲಿ ಎಂದು ಅಖಿಲೇಶ್ ಗುಡುಗಿದ್ದಾರೆ.

Akhilesh Yadav, Uttar Pradesh, DCM, 100 MLAs, Yogi Adityanath,

Articles You Might Like

Share This Article