ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸಲು ಅಮೆರಿಕಾ ಅನುಮತಿ

ವಾಷಿಂಗ್ಟನ್,ಮೇ.21-ಅಮೆರಿಕಾದ ಅಲಬಾಮಾ ರಾಜ್ಯದ ಶಾಲೆಗಳಲ್ಲಿ ಯೋಗ ಕಲಿಸಲು ಮತ್ತೆ ಅನುಮತಿ ನೀಡಲಾಗಿದೆ.ಶಾಲೆಗಳಲ್ಲಿ ಭಾರತೀಯ ಮೂಲದ ಯೋಗ ಕಲಿಕೆಗೆ ಅವಕಾಶ ಕಲ್ಪಿಸುವ ಕಾಯ್ದೆಗೆ ಅಲ್ಲಿನ ಗವರ್ನರ್ ಕೇ ಐವೇ ಅಂಕಿತ ಹಾಕಿದ್ದಾರೆ.

ಯೋಗದಲ್ಲಿ ಹಿಂದೂ ಸಂಪ್ರದಾಯದಂತೆ ನಮಸ್ಕಾರ ಮಾಡುವ ಪದ್ಧತಿ ಇದ್ದ ಕಾರಣ ಈ ಹಿಂದೆ ಶಾಲೆಗಳಲ್ಲಿ ಯೋಗ ಕಲಿಸಲು ನೆಷೇಧ ವಿಧಿಸಲಾಗಿತ್ತು.

ಇದೀಗ ಮತ್ತೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಯೋಗ ಕಲಿಸಲು ಅನುಮತಿ ನೀಡಲಾಗಿದ್ದು, ಈ ನಿಯಮ ಬರುವ ಆಗಷ್ಟ್‍ನಿಂದ ಜಾರಿಗೆ ಬರಲಿದೆ.

Sri Raghav

Admin