ಸಾಹಿತ್ಯ ಸಮ್ಮೇಳನದಲ್ಲಿ ಉತ್ತರ ಕರ್ನಾಟಕ ಶೈಲಿಯ ಊಟದ ರಸದೌತಣ

North-Karnatka---0

ಧಾರವಾಡ, ಡಿ.26- ಉತ್ತರ ಕರ್ನಾಟಕದ ಹೆಮ್ಮೆಯ ಸಾಂಸ್ಕøತಿಕ ನಗರಿ ಶೈಕ್ಷಣಿಕ ಕೇಂದ್ರವಾದ ಧಾರವಾಡದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಜನರಲ್ಲಿ ಸಂತಸದ ವಾತಾವರಣ ಮೂಡಿಸಿದ್ದರೆ ನಾಡಿನ ಮೂಲೆ-ಮೂಲೆಯಿಂದ ಆಗಮಿಸುವ ಸಾಹಿತ್ಯಾಸಕ್ತಿರಿಗಾಗಿ ಉತ್ತರ ಕರ್ನಾಟಕದ ಶೈಲಿಯ ಊಟದ ವ್ಯವಸ್ಥೆ ಮಾಡಲಾಗುತ್ತಿರುವುದು ಇನ್ನಷ್ಟೂ ಉ.ಕ ಜನತೆಗೆ ಹೆಮ್ಮಯ ವಿಚಾರವಾಗಿದೆ. ಸಮ್ಮೇಳನದ ಯಶಸ್ವಿಗೆ ಪ್ರತಿಯೊಂದು ಸಮಿತಿಗಳ ಕಾರ್ಯಗಳೂ ಸಮ್ಮೇಳನದ ಯಶಸ್ಸಿಗೆ ಮುಖ್ಯವಾಗುತ್ತವೆ. ಆಹಾರ ವ್ಯವಸ್ಥೆ ಅದರಲ್ಲಿ ಪ್ರಾಮುಖ್ಯವಾಗಿದೆ. ಆಗಮಿಸುವ ಜನರು, ಸಾಹಿತ್ಯಾಸಕ್ತರು,ಸಾರ್ವಜನಿಕರ ಸಂಖ್ಯೆ ಗಮನದಲ್ಲಿಟ್ಟುಕೊಂಡು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟು ನಾಲ್ಕು ಸ್ಥಳಗಳಲ್ಲಿ ಅಡಿಗೆ ಮನೆಗಳು ಮತ್ತು ಭೋಜನಾಂಗಣಗಳನ್ನು ನಿರ್ಮಿಸಲಾಗುತ್ತಿದೆ.

ಈ ಬಾರಿ ಭೋಜನಾಂಗಣಗಳಿಗೆ ಯಾವುದೇ ಸಾಹಿತಿಯ ಹೆಸರಿಡದೆ ಉತ್ತರ ಕರ್ನಾಟಕದ ದಾಸೋಹ ಪರಂಪರೆ ಬಿಂಬಿಸುವ ಶ್ರೀ ಮುರುಘಾಮಠ, ಶ್ರೀಸಿದ್ಧಾರೂಢರು ಹಾಗೂ ಶ್ರೀ ತಪೋವನದ ಪೂಜ್ಯರ ಹೆಸರಿನಲ್ಲಿ ಇವುಗಳು ಕಾರ್ಯನಿರ್ವಹಿಸಲಿವೆ. ಸಮ್ಮೇಳನದ ಮುನ್ನಾದಿನವಾದ ಜನವರಿ 3 ರ ರಾತ್ರಿಯಿಂದ ಊಟೋಪಚಾರದ ವ್ಯವಸ್ಥೆ ಆರಂಭವಾಗಲಿದೆ. ಸಮ್ಮೇಳನಕ್ಕೆ ಲಕ್ಷಾಂತರ ಜನ ಭಾಗವಹಿಸುತ್ತಿರು ವುದರಿಂದ ಆಹಾರದ ಮಾದರಿ ಸಂಗ್ರಹಿಸಿ ಸೇವನೆಗೆ ಯೋಗ್ಯ ಎಂದು ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ, ಇದಕ್ಕಾಗಿ 6 ಜನ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ, ಸಿದ್ದಪಡಿಸಿದ ಆಹಾರದ ಮಾದರಿ ಸ್ಥಳದಲ್ಲೇ ಸೇವಿಸಿಯೋಗ್ಯ ಪ್ರಮಾಣ ಪತ್ರ ನೀಡಿದ ನಂತರವೇ ಆಹಾರ ವಿತರಿಸಲಾಗುತ್ತಿರುವದು ಈ ಬಾರಿಯ ವಿಶೇಷವಾಗಿದೆ

ಜನವರಿ 4 ರಂದು ಬೆಳಿಗ್ಗೆ ಉಪಹಾರಕ್ಕಾಗಿ ಸಮ್ಮೇಳನದ ಆವರಣದಲ್ಲಿ 10 ಸಾವಿರ ಜನರಿಗೆ ಹಾಗೂ ಮೆರವಣಿಗೆ ಆರಂಭದ ಸ್ಥಳದಲ್ಲಿ 10 ಸಾವಿರ ಜನರಿಗೆ ಶಿರಾ ಅಥವಾ ರವಾ ಉಂಡಿ ,ಉಪ್ಪಿಟ್ಟು ,ಚಹಾದ ವ್ಯವಸ್ಥೆ ಏರ್ಪಡಿಸಲಾಗಿದೆ. ಅಂದು ಮಧ್ಯಾಹ್ನ ಸುಮಾರು 50 ಸಾವಿರಕ್ಕೂ ಅಧಿಕ ಜನರಿಗೆ ಗೋಧಿ ಹುಗ್ಗಿ,ಚಪಾತಿ,ಕಟಕ ರೊಟ್ಟಿ,ಬದನೆ ಕಾಯಿ,ಮಡಕಿ ಕಾಳಿನ ಪಲ್ಯ ,ಅನ್ನ,ಸಾಂಬಾರು ಸಿದ್ಧಪಡಿಸಲಾಗುವದು.ರಾತ್ರಿ ಊಟಕ್ಕೆ 20 ಸಾವಿರ ಜನರಿಗೆ ಶ್ಯಾವಿಗೆ ಪಾಯಸ,ಬಿಸಿಬೇಳೆ ಬಾತ್,ಅನ್ನ ಮತ್ತು ರಸಂ ತಯಾರಿಸಲಾಗುತ್ತಿದೆ. ಜನವರಿ 5 ರಂದು ಬೆಳಿಗ್ಗೆ ಮೈಸೂರು ಪಾಕ್ ಅಥವಾ ಧಾರವಾಡ ಪೇಡಾ,ಚುರಮುರಿ ಸೂಸಲ, ಮಿರ್ಚಿ ಮತ್ತು ಚಹ, ಮಧ್ಯಾಹ್ನ ಊಟಕ್ಕೆ ಶೇಂಗಾ ಹೋಳಿಗೆ, ಚಪಾತಿ ಅಥವಾ ಪೂರಿ,ವಟಾಣಿ ಪಲ್ಯ, ರೊಟ್ಟಿ, ಅನ್ನ, ನುಗ್ಗೆಕಾಯಿ ಸಾರು.ರಾತ್ರಿ ಊಟಕ್ಕೆ ಕರ್ಚಿ ಹಲ್ವಾ, ಪುಳಿಯೋಗರೆ ಅಥವಾ ವೆಜಿಟೇಬಲ್ ದಮ್ ಬಿರ್ಯಾನಿ, ಅನ್ನ, ಸಾಂಬಾರ ಮಾಡಲು ಉದ್ದೇಶಿಸ ಹೊಂದಲಾಗಿದೆ ಎನ್ನಲಾಗುತ್ತಿದೆ.

ಸಮ್ಮೇಳನದ ಕೊನೆಯ ದಿನವಾದ ಜನವರಿ 6 ರಂದು ಬೆಳಿಗ್ಗೆ ಉಪಹಾರಕ್ಕೆ ಜಿಲೇಬಿ ಅಥವಾ ಹೆಸರುಬೇಳೆ ಹಲ್ವಾ,ಅವಲಕ್ಕಿ ಅಥವಾ ವಾಂಗೀಬಾತ್, ಚಹಾ. ಮಧ್ಯಾಹ್ನ ಊಟಕ್ಕೆ ಮಾದಲಿ, ಡೊಣ್ಣಗಾಯಿ ಪಲ್ಯ, ಚಪಾತಿ, ಪಾಲಕ ಪೂರಿ, ರೊಟ್ಟಿ, ಚಿತ್ರಾನ್ನ, ತಿಳಿಸಾರು. ರಾತ್ರಿ ಊಟಕ್ಕೆ ಹೆಸರು ಬೇಳೆ ಪಾಯಸ, ಪಲಾವ್, ಅನ್ನ, ರಸಂ ಮತ್ತಿತರ ಭಕ್ಷ್ಯಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಹಳೆಯ ಮೈಸೂರು ಭಾಗದ ಜನರ ಸಾಂಪ್ರದಾಯಿಕ ಆಹಾರವಾಗಿರುವ ಮುದ್ದೆ, ಸೊಪ್ಪಿನ ಸಾರನ್ನೂ ಕೂಡುತ್ತಿರುವುದು ಮೈಸೂರು ಭಾಗದ ಜನರ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಯತ್ನಮಾಡಲಾಗುತ್ತಿದೆ.

ಈ ಭೋಜನಾಂಗಣಗಳಲ್ಲದೇ ರೈತರ ಜ್ಞಾನಾಭಿವೃದ್ಧಿ ಕೇಂದ್ರದ ಸಭಾಂಗಣದಲ್ಲಿ ನಲ್ಲಿ ಆಮಂತ್ರಿತ ಸಾಹಿತಿಗಳು ಹಾಗೂ ಕಸಾಪ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರಿಗೆ ಸೇರಿ ಪ್ರತಿದಿನ 2 ಸಾವಿರ ಜನರಿಗೆ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. 500 ಜನ ಮಾಧ್ಯಮ ಪ್ರತಿನಿಧಿಗಳಿಗೆ ಮುಖ್ಯ ವೇದಿಕೆ ಬಳಿಯ ಮಾಧ್ಯಮ ಕೇಂದ್ರದಲ್ಲಿ ಊಟೋಪಚಾರ ಹಾಗೂ 300 ಜನ ಗಣ್ಯಾತಿಗಣ್ಯರಿಗೆ ಕೃಷಿ ವಿವಿಯ ಅತಿಥಿಗೃಹದಲ್ಲಿ ಭೋಜನ, ಉಪಹಾರ ವ್ಯವಸ್ಥೆ ಕಲ್ಪಿಸಲಾಗುತ್ತಿರುವುದು ದಾಖಲೆ ಎನ್ನಬಹುದಾಗಿದೆ.

ಒಟ್ಟು 120 ಕೌಂಟರುಗಳಲ್ಲಿ ಊಟದ ವಿತರಣೆ ನಡೆಯುತ್ತದೆ. ಪ್ರತಿ ಕೌಂಟರಿನಲ್ಲಿ 500 ಜನ ಊಟ ಮಾಡಬಹುದು. ಮಲಪ್ರಭಾ ನದಿಯ ಶುದ್ಧೀಕರಿಸಿದ ನೀರನ್ನು ಕುಡಿಯಲು ಪೂರಯಸಲಾಗುವುದು. ಇದಕ್ಕಾಗಿ 600 ನಳಗಳನ್ನು ನಿರ್ಮಿಸಲಾಗುತ್ತಿದೆ. ಈ ಸೌಕಭ್ಯ ಶಾಶ್ವತವಾಗಿ ಉಳಿಯಲಿವೆ. ಪ್ರತಿ ವರ್ಷ ಕೃಷಿ ಮೇಳದ ಸಂದರ್ಭದಲ್ಲಿ ಉಪಯೋಗಿಸಲು ಬರುತ್ತವೆಜ .4 ರಿಂದ 6 ರವರೆಗೆ ಬೆಳಗಿನ ಉಪಹಾರಕ್ಕಾಗಿ 50 ಸಾವಿರ ಜನ, ಮಧ್ಯಾಹ್ನದ ಊಟಕ್ಕಾಗಿ 1.50 ಲಕ್ಷ ಜನ, ರಾತ್ರಿ ಊಟಕ್ಕಾಗಿ 50 ಸಾವಿರ ಜನರು ಆಗಮಿಸುವ ನಿರೀಕ್ಷಿಹೊಂದಲಾಗಿದೆ. ವಿವಿಧ ಕಾಲೇಜುಗಳ 800 ಸ್ವಯಂಸೇವಕರು, ಕೃಷಿ ವಿವಿ ಎನ್.ಎಸ್.ಎಸ್ 200 ಸ್ವಯಂಸೇವಕರು ಈ ಬಾರಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನೂ ಮೇಲ್ಚಚಾರಣೆಗಳನ್ನು ಕಾಲೇಜುಗಳ ಪ್ರಾಚಾರ್ಯರರು, ಎನ್.ಎಸ್.ಎಸ್. ಅಧಿಕಾರಿಗಳು ಶಿಕ್ಷಣ ಇಲಾಖೆಯ 100 ಶಿಕ್ಷಕರು ಕೌಂಟರ್‍ಗಳಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಸ್ಚಚ್ಚತೆಗಾಗಿ ಸುಮಾರು 300 ಪೌರಕಾರ್ಮಿಕರನ್ನು ನಿಯೋಜಿಸಲಾಗುತ್ತಿದೆ.  ಪೆಂಡಾಲ್ ಹೊರತುಪಡಿಸಿ ಊಟ, ಉಪಹಾರ ಮತ್ತು ನೀರು ಪೂರೈಕೆಗಾಗಿ 2.5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಸಮ್ಮೇಳನಗಳಲ್ಲಿಯೇ ಅತಿ ಕಡಿಮೆ ಖರ್ಚಿನ ಸಮ್ಮೇಳನ ಇದಾಗಲಿದೆ ಎನ್ನಲಾಗುತ್ತಿದ್ದು. ಸ್ವಚ್ಛತೆ, ಭದ್ರತೆ , ಎಲ್ಲಾ ಕಡೆಗಳಲ್ಲಿ ಸಿಸಿ ಕ್ಯಾಮೆರಾಗಳ ಅಳವಡಿಕೆ ಮಾಡಲಾಗುತ್ತಿದೆ ಯಾವುದೇ ಕೃತ್ಯಗಳು ನಡೆಯದಂತೆ ಸಾಕಷ್ಟು ಮುಂಜಾಗೃತೆ ವಹಿಸಲಾಗುತ್ತಿದೆ.