ಇಬ್ಬರು ಉಗ್ರರಿಗೆ ಜಾಮೀನು ನೀಡಿದ ಅಲಹಾಬಾದ್ ಹೈಕೋರ್ಟ್

Social Share

ಪ್ರಯಾಗ್‍ರಾಜ್,ಮಾ.4- ದೇಶದ ವಿರುದ್ಧ ಸಂಚು ಹಾಗೂ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡಿದ್ದ ಇಬ್ಬರು ಉಗ್ರರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನಿನ ಮೇಲೆ ಬಿಡುಗಡೆಗೊಂಡ ಭಯೋತ್ಪಾದಕರನ್ನು ಮಹಮ್ಮದ್ ಮುಸ್ತಕೀಮ್ ಹಾಗೂ ಮಹಮ್ಮದ್ ಶಕೀಲ್ ಎಂದು ಗುರುತಿಸಲಾಗಿದೆ.

ಈ ಇಬ್ಬರು ಉಗ್ರರು ಪಾಕ್ ಮೂಲದ ಅಲ್-ಖೈದಾಗೆ ಸಂಘಟನೆಯ ಸಹ ಸಂಘಟನೆಯಾಗಿ ಗುರುತಿಸಿಕೊಂಡಿದ್ದ ಅನ್ಸಾರ್ ಘಜ್ವತ್ -ಉಲï-ಹಿಂದ್ ನ ಸದಸ್ಯರು ಎಂದು ಶಂಕಿಸಲಾಗಿದೆ. ನ್ಯಾಯಮೂರ್ತಿಗಳಾದ ಎ ಆರ್ ಮಸೂದಿ ಮತ್ತು ಒ ಪಿ ಶುಕ್ಲಾ ಅವರಿದ್ದ ಪೀಠವು ಆರೋಪಿಗಳಿಗೆ ಜಾಮೀನು ನೀಡಿತು ಆದರೆ ಅವರ ವಿಚಾರಣೆ ಮುಗಿಯುವವರೆಗೆ ಪ್ರತಿ ತಿಂಗಳ ಮೊದಲ ವಾರದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಹಾಜರಾಗುವಂತೆ ಅವರಿಗೆ ಸೂಚಿಸಿತು.

ಆಸ್ಟ್ರೇಲಿಯಾದಲ್ಲಿ ಮುಂದುವರೆದ ಹಿಂದೂ ದೇಗುಲಗಳ ಮೇಲೆ ದಾಳಿ

ಇಬ್ಬರ ವಿರುದ್ಧ ದೇಶದ ವಿರುದ್ಧ ಸಮರ ಸಾರಿದ್ದಕ್ಕಾಗಿ ಮತ್ತು ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಅವರಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಹೈಕೋರ್ಟ್‍ನ ಲಕ್ನೋ ಪೀಠ, ಇಬ್ಬರಿಗೂ ಯಾವುದೇ ಅಪರಾಧ ಇತಿಹಾಸವಿಲ್ಲ ಮತ್ತು ಒಂದು ವರ್ಷ ಜೈಲಿನಲ್ಲಿದ್ದರು ಎಂದು ಹೇಳಿದೆ.

Allahabad, High Court, grants, bail, two, terror, accused,

Articles You Might Like

Share This Article