ಚಂದ್ರಶೇಖರ್ ಸಾವಿನ ಪ್ರಕರಣ, ವಿವಿಧ ಆಯಾಮಗಳಲ್ಲಿ ತನಿಖೆ

Social Share

ಬೆಂಗಳೂರು,ನ,4- ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ (24) ಅವರ ಸಾವಿನ ಬಗ್ಗೆ ವಿವಿಧ ದೃಷ್ಠಿಕೋನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ತಿಳಿಸಿದ್ದಾರೆ.

ಈ ಸಂಜೆಯೊಂದಿಗೆ ಮಾತನಾಡುತ್ತಿದ್ದ ಅವರು ಚಂದ್ರಶೇಖರ್ ಅವರು ಕಾಣೆಯಾದ ದಿನದಿಂದ ನಾವು ತನಿಖೆ ನಡೆಸುತ್ತಿದ್ದು, ಈಗ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದೇವೆ ಎಂದು ವಿವರಿಸಿದರು. ಸ್ಥಳದಲ್ಲಿ ದಾವಣಗೆರೆ ವಲಯದ ಐಜಿಪಿ, ಎಸ್ಪಿ ಇನ್ನಿತರ ಅಧಿಕಾರಿಗಳು ಹೊನ್ನಾಳಿಯಲ್ಲೇ ಮೊಖಂ ಹೂಡಿದ್ದಾರೆ. ನಾನೂ ಸಹ ಅಲ್ಲಿಗೆ ತೆರಳುತ್ತಿದ್ದೇನೆ ಎಂದು ತಿಳಿಸಿದರು.

ಮರಣೋತ್ತರ ಪರೀಕ್ಷಾ ಮತ್ತು ಎಫ್ಎಸ್ಎಲ್ ವರದಿಗಳು ಬಂದ ನಂತರ ಚಂದ್ರಶೇಖರ್ ಅವರ ಸಾವು ಹೇಗಾಗಿದೆ ಎಂಬುದು ತಿಳಿದುಬರಲಿದೆ. ಈಗಾಗಲೇ ನಾವು ವೈದ್ಯರು ಮತ್ತು ಎಫ್ಎಸ್ಎಲ್ ಅಧಿಕಾರಗಳ ಜೊತೆ ಮಾತನಾಡಿ ಕೆಲವು ಪ್ರಾಥಮಿಕ ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ ಎಂದು ಹೇಳಿದರು.

ಈ ತಕ್ಷಣ ಸಾವು ಹೀಗಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ತನಿಖೆ ನಡೆದ ನಂತರ ಸಾವು ಹೇಗಾಗಿದೆ ಎಂಬುದು ತಿಳಿದುಬರಲಿದೆ. ನಾವು ಆದಷ್ಟು ಬೇಗ ಪ್ರಕರಣದ ತನಿಖೆಯನ್ನು ತ್ವರಿತವಾಗಿ ಮಾಡುತ್ತೇವೆ ಎಂದು ತಿಳಿಸಿದರು.

ಹೊನ್ನಾಳಿ ತಾಲ್ಲೂಕು ಸೇರಿದಂತೆ ದಾವಣಗೆರೆ ಜಿಲ್ಲೇಯಾದ್ಯಂತ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ. ಅಲೋಕ್ ಕುಮಾರ್ ಅವರೇ ಸ್ಥಳಕ್ಕೆ ಬೇಟಿ ನೀಡಿ ತನಿಖಾ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿರುವುದರಿಂದ ಪೊಲೀಸರು ಸದ್ಯದಲ್ಲೇ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಸಲಿದ್ದಾರೆ.

Articles You Might Like

Share This Article